ಮದರ್ ತೆರೆಸಾ ಉತ್ತರಾಧಿಕಾರಿ ಸಿಸ್ಟರ್ ನಿರ್ಮಲಾ ವಿಧಿವಶ
Tue, 06 /23 /2015 - 12 :15 2
ಕೋಲ್ಕತ್ತ ( ಪಿಟಿಐ ) : ಮದರ್ ತೆರೆಸಾ ಅವರ
ಉತ್ತರಾಧಿಕಾರಿ ಮತ್ತು ಮಿಷನರಿಸ್ ಆಫ್
ಚಾರಿಟಿ ಸಂಸ್ಥೆಯ
ಮುಖ್ಯಸ್ಥೆಯಾಗಿದ್ದ ಸಿಸ್ಟರ್
ನಿರ್ಮಲಾ ಜೋಶಿ (81 ) ಅವರು
ಮಂಗಳವಾರ ಬೆಳಗಿನ ಜಾವ ಇಲ್ಲಿ
ನಿಧನರಾದರು.
ರಾಂಚಿಯಲ್ಲಿ ಹಿಂದೂ
ಕುಟುಂಬವೊಂದರಲ್ಲಿ ಹುಟ್ಟಿದ
ನಿರ್ಮಲಾ ಅವರು ನಂತರ ಕ್ರೈಸ್ಥ
ಧರ್ಮಕ್ಕೆ ಮತಾಂತರಗೊಂಡಿದ್ದರು .
ಸ್ನಾತಕೋತ್ತರ ಪದವಿ ಪಡೆದ ನಂತರ
ಅವರು ಮಿಷನರಿಸ್ ಆಫ್ ಚಾರಿಟಿ ಸಂಸ್ಥೆ
ಸೇರಿ ಕ್ರೈಸ್ಥ
ಸನ್ಯಾಸಿನಿಯಾಗಿದ್ದರು.
ಮದರ್ ತೆರೆಸಾ ಅವರು ನಿಧನರಾಗುವ
ಆರು ತಿಂಗಳು ಮೊದಲು ಅಂದರೆ
1997 ರಲ್ಲಿ ಸಿಸ್ಟರ್ ನಿರ್ಮಲಾ ಅವರು
ಮಿಷನರಿಸ್ ಆಫ್ ಚಾರಿಟಿ ಸಂಸ್ಥೆಯ
ಸುಪಿರಿಯರ್ ಜನರಲ್ ಆಗಿ
ನೇಮಕಗೊಂಡಿದ್ದರು .
ದೀರ್ಘಕಾಲದ
ಅನಾರೋಗ್ಯದಿಂದ ಬಳಲುತ್ತಿದ್ದ
ಅವರು ಮಂಗಳವಾರ ಬೆಳಿಗ್ಗೆ
ನಿಧನರಾದರು. ಮೃತರ ಅಂತ್ಯಕ್ರಿಯೆ
ಮೊರೊದಲ್ಲಿರುವ ಮದರ್
ಹೋಂನಲ್ಲಿ ಸಂಜೆ 4 ಗಂಟೆಗೆ
ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ .
'ಸಿಸ್ಟರ್ ನಿರ್ಮಲಾ ಅವರ ಬದುಕು
ಬಡವರು ಮತ್ತು ದುರ್ಬಲರ ಸೇವೆಗೆ
ಮೀಸಲಾಗಿತ್ತು . ಅವರ ಆತ್ಮಕ್ಕೆ
ಶಾಂತಿ ಸಿಗಲಿ' ಎಂದು ಪ್ರಧಾನಿ
ನರೇಂದ್ರ ಮೋದಿ ಟ್ವೀಟ್
ಮಾಡಿದ್ದಾರೆ .
Comments
Post a Comment