'ಟೈಟಾನಿಕ್' ಸಂಗೀತ ನಿರ್ದೇಶಕ ಜೇಮ್ಸ್ ಹಾರ್ನರ್ ಇನ್ನಿಲ್ಲ.:
ಲಾಸ್ ಏಂಜಲೀಸ್: 'ಟೈಟಾನಿಕ್',
'ಅವತಾರ್' ಮುಂತಾದ ಚಿತ್ರಗಳ
ಸಂಗೀತ ನಿರ್ದೇಶಕ, ಎರಡು ಆಸ್ಕರ್
ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ಗೀತೆ
ರಚನೆಕಾರ ಜೇಮ್ಸ್ ಹಾರ್ನರ್ (61)
ವಿಮಾನ ಅಪಘಾತವೊಂದರಲ್ಲಿ
ಮೃತರಾಗಿದ್ದಾರೆ.
ಸಂತಾ ಬರ್ಬರಾದ
ಹಳ್ಳಿಯೊಂದರಲ್ಲಿ ಸಣ್ಣ
ವಿಮಾನವೊಂದನ್ನು
ಹಾರಿಸುತ್ತಿದ್ದಾಗ,
ಅಪಘಾತಕ್ಕೀಡಾಗಿ ಹಾರ್ನರ್
ಸೋಮವಾರ ಮೃತಪಟ್ಟಿದ್ದಾರೆ. ಈ
ವಿಷಯವನ್ನು ಅವರ ಸಹಾಯಕರಾದ
ಸಿಲ್ವಿಯಾ ಪಜ್ರಿಸ್ಜಾ ಫೇಸ್ಬುಕ್ನಲ್ಲಿ
ದೃಢಪಡಿಸಿದ್ದಾರೆ.
ಜೇಮ್ಸ್ ಕ್ಯಾಮರೂನ್ ನಿರ್ದೇಶನದ
'ಟೈಟಾನಿಕ್' ಚಿತ್ರದ ಸಂಗೀತ
ಹಾಗೂ ಅದೇ ಚಿತ್ರದ ಸೆಲಿನ್
ಡಿಯೋನ್ ಹಾಡಿದ 'ಮೈ ಹಾರ್ಟ್ ವಿಲ್
ಗೋ ಆನ್' ಹಾಡಿನ ಸಾಹಿತ್ಯಕ್ಕಾಗಿ
ಹಾರ್ನರ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಈ
ಪ್ರಶಸ್ತಿಯನ್ನು ಪ್ರಸಿದ್ಧ ಗೀತ
ರಚನೆಕಾರ ವಿಲ್ ಜೆನ್ನಿಂಗ್ಸ್
ಅವರೊಂದಿಗೆ
ಹಂಚಿಕೊಂಡಿದ್ದರು.
'ಬ್ಯೂಟಿಫುಲ್ ಮೈಂಡ್', 'ಫೀಲ್ಡ್
ಆಫ್ ಡ್ರೀಮ್ಸ್', 'ಅಪೋಲೋ 13',
'ಬ್ರೇವ್ ಹಾರ್ಟ್' ಸೇರಿದಂತೆ
ಅನೇಕ ಪ್ರಸಿದ್ಧ ಚಿತ್ರಗಳಿಗೆ ಅವರು
ಗೀತೆ ರಚಿಸಿದ್ದರು.
Comments
Post a Comment