ಎನ್ಬಿಎ ಟೂರ್ನಿಯಲ್ಲಿ ಆಡಿದ ಭಾರತದ ಮೊದಲ ಆಟಗಾರ ಸತ್ನಾಮಸಿಂಗ್

ನ್ಯೂಯಾರ್ಕ್/ಮುಂಬೈ/ನವದೆಹಲಿ (ಪಿಟಿಐ/
ಐಎಎನ್ಎಸ್): ಯುವ ಬ್ಯಾಸ್ಕೆಟ್ಬಾಲ್ ಆಟಗಾರ
ಸತ್ನಾಮ್ ಸಿಂಗ್ ಭಾಮರ ಶುಕ್ರವಾರ ಐತಿಹಾಸಿಕ
ಸಾಧನೆಗೆ ಕಾರಣರಾಗಿದ್ದಾರೆ. ನ್ಯಾಷನಲ್
ಬ್ಯಾಸ್ಕೆಟ್ಬಾಲ್ (ಎನ್ಬಿಎ) ಟೂರ್ನಿಯಲ್ಲಿ ಆಡಿದ
ಭಾರತದ ಮೊದಲ ಆಟಗಾರ ಎನ್ನುವ
ಶ್ರೇಯಕ್ಕೆ ಪಾತ್ರರಾಗಿದ್ದಾರೆ.
19 ವರ್ಷದ ಸತ್ನಾಮ್ ಪಂಜಾಬ್ನವರು. ಈ
ಆಟಗಾರ ಏಳು ಅಡಿ ಎರಡು ಇಂಚು
ಎತ್ತರವಾಗಿದ್ದಾರೆ. ಮುಂದಿನ ಋತುವಿನಲ್ಲಿ
ನಡೆಯಲಿರುವ ಎನ್ಬಿಎ ಟೂರ್ನಿಯಲ್ಲಿ 60 ಯುವ
ಆಟಗಾರರೂ ಕಣಕ್ಕಿಳಿಯಲಿದ್ದಾರೆ. ಸತ್ನಾಮ್ ಎನ್ಬಿಎ
ಲೀಗ್ನಲ್ಲಿ ದಲ್ಲಾಸ್ ಮಾವರಿಕ್ಸ್
ತಂಡದಲ್ಲಿ ಆಡಲಿದ್ದಾರೆ. ಭಾರತದ ಆಟಗಾರ
ಇತ್ತೀಚೆಗೆ ಐಎಂಜಿ ಅಕಾಡೆಮಿ
ತಂಡದ ಶಿಬಿರದಲ್ಲಿ
ಪಾಲ್ಗೊಂಡಿದ್ದರು.
ಶ್ರೇಷ್ಠ ಟೂರ್ನಿಗಳಲ್ಲಿ ಒಂದಾದ
ಎನ್ಬಿಎಯಲ್ಲಿ ಆಡುವ ಮೂಲಕ ಸತ್ನಾಮ್ ಭಾರತದ
ಬ್ಯಾಸ್ಕೆಟ್ಬಾಲ್ ರಂಗದಲ್ಲಿ
ಹೊಸ ಭರವಸೆ ಮೂಡಿಸಿದ್ದಾರೆ.
ಭರವಸೆ ಹೆಚ್ಚಿದೆ: ಮಹತ್ವದ ಟೂರ್ನಿಯಲ್ಲಿ ಆಡಲು
ಅವಕಾಶ ಸಿಕ್ಕಿರುವುದಕ್ಕೆ ಸತ್ನಾಮ್ ಹರ್ಷ
ವ್ಯಕ್ತಪಡಿಸಿದ್ದಾರಲ್ಲದೇ ಈ ಬೆಳವಣಿಗೆ
ಭಾರತದಲ್ಲಿ ಹೊಸ ಭರವಸೆ ಮೂಡಿಸಿದೆ.
'ನನಗಾಗಿರುವಸಂತೋಷ ಅಷ್ಟಿಷ್ಟಲ್ಲ'
ಎಂದು ಪ್ರತಿಕ್ರಿಯಿಸಿದ್ದಾರೆ. ಎನ್ಬಿಎ
ಟೂರ್ನಿಯಲ್ಲಿ ಆಡುವ ಮೊದಲು
ಸತ್ನಾಮ್ ಫ್ಲೋರಿಡಾಕ್ಕೆ ತೆರಳಿ ತರಬೇತಿ ಪಡೆದಿದ್ದರು.
'ಎನ್ಬಿಎನಲ್ಲಿ ಆಡುತ್ತಿರುವುದಕ್ಕೆ ತುಂಬಾ 
ಖುಷಿಯಾಗಿದೆ. ನನ್ನಂತೆಯೇ ಇನ್ನಷ್ಟು 
ಭಾರತದ ಆಟಗಾರರು ದೊಡ್ಡ
ಟೂರ್ನಿಗಳಲ್ಲಿ ಆಡಬೇಕು. ಭಾರತೀಯರ
ಸಂಖ್ಯೆ ಹೆಚ್ಚಾಗಬೇಕೆಂಬುದು ನನ್ನ ಆಸೆ.
ದೊಡ್ಡ ಟೂರ್ನಿಯಲ್ಲಿ 
ಆಡಬೇಕೆನ್ನುವುದು ಬದುಕಿನ ದೊಡ್ಡ
ಕನಸಾಗಿತ್ತು. ನನ್ನ ಆಸೆ ಈಡೇರಿದ್ದಕ್ಕೆ ಖುಷಿಯಾಗಿದೆ'
ಎಂದೂ ಅವರು ಸಂತೋಷ
ಹಂಚಿಕೊಂಡಿದ್ದಾರೆ.
ರೈತ ಕುಟುಂಬದಿಂದ ಬಂದ ಸತ್ನಾಮ್
ಐಎಂಜಿನ ಶಿಷ್ಯವೇತನ ಪಡೆದು 2010ರಲ್ಲಿ
ಅಮೆರಿಕಕ್ಕೆ ತೆರಳಿದ್ದರು. ಈ ಆಟಗಾರನ ತೂಕ 110
ಕೆ.ಜಿ!
'ನಾನು ಕಂಡ ಎಲ್ಲಾ ಕನಸುಗಳು ನನಸಾಗಲಿ
ಎಂದು ನನ್ನ ಸಹೋದರಿಯೂ ಹಾರೈಸಿದ್ದರು.
ಅದಕ್ಕಾಗಿ ಗುರುದ್ವಾರಕ್ಕೆ ತೆರಳಿ ಪ್ರಾರ್ಥಿಸಿದ್ದರು. ನನ್ನ
ಮೊದಲ ಕೋಚ್ ಸುಬ್ರಮಣಿಯಮ್
ಅವರೇ ಇಷ್ಟು ದೊಡ್ಡ ಸಾಧನೆಗೆ
ಕಾರಣ. ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ
ಬೆಂಬಲ ನೀಡಿದರು' ಎಂದು
ಸತ್ನಾಮ್ ಅನಿಸಿಕೆ
ಹಂಚಿಕೊಂಡಿದ್ದಾರೆ.
ಬ್ಯಾಸ್ಕೆಟ್ಬಾಲ್ ರಂಗದಲ್ಲಿನ ಈ ಬೆಳವಣಿಗೆ
ಭಾರತದಲ್ಲಿಯೂ ಹೊಸ
ಸಂಚಲನ ಮೂಡಿಸಿದೆ. ಇದರ ಬಗ್ಗೆ ಸಾಮಾಜಿಕ
ಜಾಲತಾಣಗಳಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್
ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
'ಸತ್ನಾಮ್ ಸಾಧನೆಯಿಂದ ಅತೀವ
ಹೆಮ್ಮೆಯಾಗಿದೆ. ಭಾರತದ ಕ್ರೀಡಾಪಟುವಿನ
ಸಾಧನೆ ಮೆಚ್ಚಿಕೊಳ್ಳುವಂಥದ್ದು.
ಮುಂದಿನ ಋತುವಿನಲ್ಲಿಯೂ ಆತ ಶ್ರೇಷ್ಠ
ಆಟವಾಡಲಿ. ದೇಶದ ಪ್ರತಿಯೊಬ್ಬರೂ
ಸತ್ನಾಮ್ ಬೆಂಬಲ ನೀಡಬೇಕು'
ಎಂದು ಎನ್ಡಿಟಿವಿಗೆ ನೀಡಿರುವ
ಹೇಳಿಕೆಯಲ್ಲಿ ಸಚಿನ್ ತಿಳಿಸಿದ್ದಾರೆ.
2004ರ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ್ದ
ಶೂಟರ್ ರಾಜವರ್ಧನ್ ಸಿಂಗ್ ರಾಥೋಡ್, ಮುಂಬೈ
ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್,
ರಾಜಸ್ತಾನ ರಾಯಲ್ಸ್, ನಟ ಅಮಿತಾಭ್ ಬಚ್ಚನ್,
ಅಕ್ಷಯ್ ಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು
ಅಭಿನಂದಿಸಿದ್ದಾರೆ.
ಅಭಿನಂದನೆ: ಸತ್ನಾಮ್ ಸಾಧನೆಗೆ ಭಾರತ
ಬ್ಯಾಸ್ಕೆಟ್ಬಾಲ್ ಫೆಡರೇಷನ್ ಅಧ್ಯಕ್ಷ ಕೆ.
ಗೋವಿಂದರಾಜ್ ಕೂಡಾ ಅಭಿನಂದನೆ
ಸಲ್ಲಿಸಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು