ಕೆಎಸ್ಒಯು ಕೋರ್ಸ್ಗಳ ಮಾನ್ಯತೆ ರದ್ದು (ಪ್ರಜಾವಾಣಿ)

ಮೈಸೂರು: 2012–13ನೇ ಶೈಕ್ಷಣಿಕ ವರ್ಷದ ನಂತರ ಕರ್ನಾಟಕ
ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಮೈಸೂರು) ಎಲ್ಲಾ ಕೋರ್ಸ್ಗಳ 
ಮಾನ್ಯತೆಯನ್ನು ಅಸಿಂಧುಗೊಳಿಸಿ
ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸಾರ್ವಜನಿಕ ಆದೇಶ
ಹೊರಡಿಸಿದೆ.
ನಿಯಮ, ನಿರ್ದೇಶನ ಹಾಗೂ ದೂರ ಶಿಕ್ಷಣ ಮಾರ್ಗಸೂಚಿಗಳನ್ನು ಪಾಲಿಸದ,
ಭೌಗೋಳಿಕ ವ್ಯಾಪ್ತಿ ಕೆಲವು ತಾಂತ್ರಿಕ ಮತ್ತು ವೃತ್ತಿಪರ
ಕೋರ್ಸ್ಗಳನ್ನು ಆರಂಭಿಸಿದ್ದಕ್ಕಾಗಿ 2011ರ ಜೂನ್ 10ರಂದು
ಷೋಕಾಸ್ ನೋಟಿಸ್ ನೀಡಿದ ಬಳಿಕ ಹಾಗೂ ವಿ.ವಿಯ
ಅಧಿಕಾರಿಗಳೊಡನೆ ಮಾತುಕತೆ ನಡೆಸಿದ ನಂತರ ಈ
ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಯುಜಿಸಿ
ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಭಯ ಬೇಡ: ಆದರೆ, ಈ ಸಂಬಂಧ ಪ್ರತಿಕ್ರಿಯಿಸಿರುವ
ವಿ.ವಿ ಕುಲಪತಿ ಪ್ರೊ. ಎಂ.ಜಿ.ಕೃಷ್ಣನ್, ಈ
ಬಗ್ಗೆ ಪದವಿ ಪಡೆದವರಿಗೆ ಭಯವೇನೂ ಬೇಡ. ಇದೇ ಬಗೆಯ
ಪ್ರಕರಣದಲ್ಲಿ ಸಿಕ್ಕಿಂ ಹೈಕೋರ್ಟ್ ಒಂದು ತೀರ್ಪು
ನೀಡಿದ್ದು, ಕೋರ್ಸ್ಗಳ ವಿಷಯದಲ್ಲಿ ಯುಜಿಸಿ
ಮಧ್ಯಪ್ರವೇಶಿಸಬಾರದು ಎಂದು ಹೇಳಿದೆ. ಅದನ್ನು
ಇಟ್ಟುಕೊಂಡು ನಾವು ನ್ಯಾಯಾಲಯದ
ಮೊರೆ ಹೋಗುತ್ತವೆ' ಎಂದು ತಿಳಿಸಿದ್ದಾರೆ.
ಈನಡುವೆ, 2012–13ನೇ ಸಾಲಿನ ಬಳಿಕ ಕೆಎಸ್ಒಯುನಿಂದ
ಸುಮಾರು 3 ಲಕ್ಷ ಜನರು ಕೋರ್ಸುಗಳ ಪ್ರಮಾಣ ಪತ್ರ ಪಡೆದಿದ್ದಾರೆ
ಎಂದು ಮೂಲಗಳು ಹೇಳಿವೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024