ಮೊದಲ ಆಧುನಿಕ ಅಂಗನವಾಡಿ ಸೋನೆಪತ್, ಹರಿಯಾಣದಲ್ಲಿ ಆರಂಭ ೨೪/೬/೧೫:
ದೇಶದ ಮೊದಲ ಆಧುನಿಕ
ಅಂಗನವಾಡಿ ಕೇಂದ್ರಕ್ಕೆ ಇಲ್ಲಿನ
ಹಸನ್ಪುರ ಗ್ರಾಮದಲ್ಲಿ ಕೇಂದ್ರ
ಮಹಿಳಾ ಹಾಗೂ ಮಕ್ಕಳ ಕಲ್ಯಾಣ
ಸಚಿವೆ ಮೇನಕಾ ಗಾಂಧಿ ಬುಧವಾರ
ಚಾಲನೆ ನೀಡಿದರು.
ದೇಶದ ವಿವಿಧೆಡೆ ಇದೇ ರೀತಿಯ 4,000
ಅಂಗನವಾಡಿ ಕೇಂದ್ರಗಳನ್ನು
ಸ್ಥಾಪಿಸಲಾಗುವುದು.
ಖಾಸಗಿ ಗಣಿಗಾರಿಕೆ ಕಂಪೆನಿ
ವೇದಾಂತದ
ಸಹಯೋಗದೊಂದಿಗೆ ಸುಮಾರು
12 ಲಕ್ಷ ವೆಚ್ಚದಲ್ಲಿ ಸೋನೆಪತ್ನಲ್ಲಿ ಈ
ಅಂಗನವಾಡಿ ಕೇಂದ್ರವನ್ನು
ಕಟ್ಟಲಾಗಿದೆ. ಅಂಗನವಾಡಿ
ಕೇಂದ್ರಗಳ ಸುಧಾರಣೆ
ಉದ್ದೇಶವನ್ನೊಳಗೊಂಡ
ಕೇಂದ್ರ ಸರ್ಕಾರದ ನಂದ ಘರ್
ಯೋಜನೆಯಡಿ ಇದನ್ನು
ನಿರ್ಮಿಸಲಾಗಿದೆ.
ಈ ಅಂಗನವಾಡಿ ಕೇಂದ್ರದಲ್ಲಿ
ಆಧುನಿಕ ಸೌಲಭ್ಯದೊಂದಿಗೆ ಪ್ರತಿದಿನ
ಐವತ್ತು ಮಕ್ಕಳಿಗೆ ವಸತಿ, ಊಟ
ಒದಗಿಸಲಾಗುವುದು.
'ಅಂಗನವಾಡಿ ಕೇಂದ್ರಗಳನ್ನು
ಮಕ್ಕಳ ಹಾಗೂ ತಾಯಂದಿರ
ಸಮುದಾಯ ಕೇಂದ್ರವನ್ನಾಗಿ
ಮಾಡಬೇಕು ಎಂಬುದು ನಮ್ಮ
ಉದ್ದೇಶ. ಈ ಕೇಂದ್ರಗಳಿಗೆ ಸೌರಶಕ್ತಿ
ವ್ಯವಸ್ಥೆ, ಟಿ.ವಿಯನ್ನು
ಒದಗಿಸಲಾಗುತ್ತದೆ' ಎಂದು
ಮೇನಕಾ ಗಾಂಧಿ ತಿಳಿಸಿದ್ದಾರೆ.
Comments
Post a Comment