CNR Rao gets Japan's highest civilian award - Order of the Rising Sun
ಸಿ.ಎನ್.ಆರ್ ರಾವ್ಗೆ ಜಪಾನ್ನ ಅತ್ಯುನ್ನತ ಗೌರವ
ನವದೆಹಲಿ (ಪಿಟಿಐ): ಖ್ಯಾತ ವಿಜ್ಞಾನಿ ಸಿ.ಎನ್.ಆರ್ ರಾವ್ ಅವರಿಗೆ
ಜಪಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ
ಗೌರವಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ
ಎರಡೂ ದೇಶಗಳ ನಡುವಣ
ಕೊಡುಕೊಳುವಿಕೆಗೆ ನೀಡಿದ
ಕೊಡುಗೆಗೆ ಈ ಗೌರವ ನೀಡಲಾಗಿದೆ.
'ಆರ್ಡರ್ ಆಫ್ ರೈಸಿಂಗ್ ಸನ್, ಗೋಲ್ಡ್ ಎಂಡ್ ಸಿಲ್ವರ್'
ಪ್ರಶಸ್ತಿ ಪ್ರಮಾಣಪತ್ರವನ್ನು ಭಾರತಕ್ಕೆ ಜಪಾನ್ನ ರಾಯಭಾರಿ ತಕೇಶಿ
ಯಾಗಿ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ
ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
'ಭಾರತ ಮತ್ತು ಜಪಾನ್ನ ಭವಿಷ್ಯ ಪರಸ್ಪರ ಸಂಬಂಧ
ಹೊಂದಿವೆ. ಏಷ್ಯಾದಲ್ಲಿ ಭಾರತಕ್ಕೆ ಜಪಾನ್
ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು
ಭಾರತ ತಿಳಿದುಕೊಳ್ಳಬೇಕಿದೆ. ಭಾರತ ಅತ್ಯಂತ
ದೊಡ್ಡ ಗೆಳೆಯ ಎಂಬುದನ್ನು ಜಪಾನ್
ಅರಿತುಕೊಳ್ಳಬೇಕಿದೆ' ಎಂದು ಪ್ರಶಸ್ತಿ
ಸ್ವೀಕರಿಸಿ ರಾವ್ ಹೇಳಿದರು.
ವಿದ್ವಾಂಸರು, ರಾಜಕಾರಣಿಗಳು ಮತ್ತು ಸೇನೆಯ ಅಧಿಕಾರಿಗಳಿಗೆ
ಜಪಾನ್ನ ಅತ್ಯುನ್ನತ ನಾಗರಿಕ ಗೌರವವನ್ನು
ನೀಡಲಾಗುತ್ತದೆ. ಜಪಾನ್ ಅಕಾಡೆಮಿಯ ವಿದೇಶಿ ಸದಸ್ಯರಾಗಿ
ಆಯ್ಕೆಯಾಗಿರುವ ಏಕೈಕ ಭಾರತೀಯ ಎಂಬ
ಹೆಗ್ಗಳಿಕೆಯೂ ರಾವ್ ಅವರಿಗೆ ಇದೆ.
Comments
Post a Comment