Famous Architect Charles Lori's Passes away in Mumbai, He was 83
ಅವರು ಕಟ್ಟಡಗಳಿಗೆ ಒಂದು ಪ್ಲಾನ್ ಹಾಕಿದರೆ
ಅದರಲ್ಲೊಂದು ಕಲಾತ್ಮಕ ಸ್ಪರ್ಶವಿರುತ್ತಿತ್ತು,
ಅದು ಮೈದಾಳಿದ ಬಳಿಕ ಒಂದು
ಹೆಗ್ಗುರುತಾಗುವುದು ಖಚಿತವಾಗಿರುತ್ತಿತ್ತು.
ಹಾಗೆಯೇ ಅರಳಲಿರುವ ನಗರದ ನೀಲನಕ್ಷೆ ಬಿಡಿಸಿದರೆ
ಅದರಲ್ಲೊಂದು ನಂದನವನವನ್ನು ಅವರು
ಕಾಣುತ್ತಿದ್ದರು. ಅಂಥ ಮೇಧಾವಿ ಚಾರ್ಲ್ಸ್
ಕೊರಿಯಾ ಇನ್ನಿಲ್ಲ.
ಮುಂಬೈ: ಸ್ವಾತಂತ್ರ್ಯೋತ್ತರ ಭಾರತದ
ಶ್ರೇಷ್ಠ ವಾಸ್ತುಶಿಲ್ಪಿ ಚಾರ್ಲ್ಸ್ ಕೊರಿಯಾ
ಇನ್ನು ನೆನಪಷ್ಟೆ. ಬೆಂಗಳೂರಿನ ವಿಧಾನಸೌ'ದ ಬಳಿ
ಇರುವ 'ವಿಶ್ವೇಶ್ವರಯ್ಯ ಗೋಪುರ'
ಬಹುಮಹಡಿ ಕಟ್ಟಡ ಸೇರಿದಂತೆ 'ಾರತ ಹಾಗೂ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ
ಕಟ್ಟಡಗಳ ನಿರ್ಮಾಣದ ಮೂಲಕ ಚಾರ್ಲ್ಸ್
ವಿಶ್ವವಿಖ್ಯಾತರಾಗಿದ್ದರು.
84ರ ಹರೆಯದ ಚಾರ್ಲ್ಸ್, ಮುಂಬೈನ ತಮ್ಮ
ನಿವಾಸದಲ್ಲಿ ಮಂಗಳವಾರ ರಾತ್ರಿ
ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ ಚಾರ್ಲ್ಸ್
ಅಂತ್ಯಕ್ರಿಯೆ ಗುರುವಾರ ನಡೆಯುವ
ಸಾ'್ಯತೆಯಿದೆ.
ಸ್ವಾತಂತ್ರ್ಯಾನಂತರದ 'ಾರತದಲ್ಲಿ ಅತ್ಯಂತ
ಶ್ರೇಷ್ಠವೆನಿಸುವಂತಹ ನಿರ್ಮಾಣಗಳನ್ನು
ಮಾಡಿದ ಚಾರ್ಲ್ಸ್ ಕೊರಿಯಾ, ಗುಜರಾತ್ನ
ಸಾಬರಮತಿಯಲ್ಲಿ ಮಹಾತ್ಮ ಗಾಂ ಸ್ಮಾರಕ,
ಮ'್ಯಪ್ರದೇಶದ ವಿ'ಾನಸೌ' 'ವನ, ಜೈಪುರದ
ಜವಾಹರಲಾಲ್ ಕಲಾಕೇಂದ್ರ ಸೇರಿದಂತೆ
ಹಲವು ಪ್ರತಿಷ್ಠಿತ ಕಟ್ಟಡಗಳ ನಿರ್ಮಾಣಗಳೊಂದಿಗೆ
ಖ್ಯಾತಿ ಗಳಿಸಿದ್ದರು.
ಅಲ್ಲದೆ, 1970ರಲ್ಲಿ ನವಿ ಮುಂಬೈನ ಮುಖ್ಯ
ವಿನ್ಯಾಸಕನಾಗಿ ಅಕಾರ ವಹಿಸಿಕೊಂಡ ಅವರು,
ಮುಂಬೈ ನಗರಾಭಿವೃದ್ಧಿಗೆ ಅಮೂಲ್ಯ
ಕೊಡುಗೆ ನೀಡಿದರು. ಇಂದು ನವಿ
ಮುಂಬೈ ನಗರ ಇಷ್ಟೆಲ್ಲ ಅಭಿವೃದ್ಧಿ
ಹೊಂದಿದೆಯೆಂದರೆ, ಅದಕ್ಕೆ ಕೊರಿಯಾ ಅವರ
ದೂರದೃಷ್ಟಿ ಹಾಗೂ ನಗರ ಯೋಜನೆಯೇ
ಕಾರಣ. ಕಡಿಮೆ ವೆಚ್ಚದ ಮನೆಗಳ ನಿರ್ಮಾಣದಲ್ಲೂ
ಸೈ ಎನಿಸಿಕೊಂಡಿದ್ದ ಕೊರಿಯಾ, ನಗರೀಕರಣ
ಕುರಿತ ರಾಷ್ಟ್ರೀಯ ಆಯೋಗದ ಮೊದಲ
ಅ'್ಯಕ್ಷರೂ ಆಗಿದ್ದರು ಎಂಬುದು ಗಮನಾರ್ಹ.
ಕೊರಿಯಾ ಅವರ ಶ್ರೇಷ್ಠ ವಾಸ್ತುಶಿಲ್ಪಕ್ಕೆ
ಹಲವು ರಾಷ್ಟ್ರೀಯ ಹಾಗೂ
ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.
1972ರಲ್ಲಿ ನಗರಯೋಜನೆ ಮತ್ತು ಕಡಿಮೆ ವೆಚ್ಚದ
ವಸತಿಗೆ ಸಂಬಂಸಿದಂತೆ ಕೊರಿಯಾ ಅವರ
ಕೊಡುಗೆಯನ್ನು ಪರಿಗಣಿಸಿ 'ಾರತ ಸರ್ಕಾರ
'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತು.
2006ರಲ್ಲಿ ದೇಶದ ಎರಡನೆ ಅತ್ಯುನ್ನತ ನಾಗರಿಕ
ಸನ್ಮಾನವಾದ 'ಪದ್ಮ ವಿ'ೂಷಣ'ವನ್ನೂ ಚಾರ್ಲ್ಸ್ಗೆ
ನೀಡುವ ಮೂಲಕ ಅವರ ಕೊಡುಗೆಯನ್ನು
'ಾರತ ಸರಕಾರ ಕೊಂಡಾಡಿತು. ಶಿಲ್ಪಶಾಸ್ತ್ರಕ್ಕೆ
ಸಂಬಂಸಿದ ಆಗಾ ಖಾನ್ ಪ್ರಶಸ್ತಿ, ಜಪಾನ್ ಹಾಗೂ
ಇಂಗ್ಲೆಂಡ್ನ ಅತ್ಯುನ್ನತ ಪ್ರಶಸ್ತಿಗಳೂ
ಕೊರಿಯಾ ಅವರನ್ನು ಅರಸಿ ಬಂದಿದ್ದವು.
'ರಾಯಲ್ ಗೋಲ್ಡ್ ಇನ್ಸ್ಟಿಟ್ಯೂಟ್ ಆಫ್ ಬ್ರಿಟಿಷ್
ಆರ್ಕಿಟೆಕ್ಟ್ಸ್' ಸಂಸ್ಥೆಯು ಚಾರ್ಲ್ಸ್ರನ್ನು ''ಾರತದ
ಶ್ರೇಷ್ಠ ವಾಸ್ತುಶಿಲ್ಪಿ' ಎಂದು ಬಣ್ಣಿಸಿದೆ.
1930ರ ಸೆಪ್ಟೆಂಬರ್ 1ರಂದು ಆಗಿನ
ಆಂ'್ರಪ್ರದೇಶದ ಸಿಕಂದರಾಬಾದ್ನಲ್ಲಿ ಜನಿಸಿದ
ಚಾರ್ಲ್ಸ್, ಮುಂಬೈನ ಸೇಂಟ್ ಕ್ಸೇವಿಯರ್
ಕಾಲೇಜಿನಲ್ಲಿ ವಿದ್ಯಾ'್ಯಾಸ ಮುಗಿಸಿದರು.
ನಂತರ ಅಮೆರಿಕದ ಮಿಷಿಗನ್ ವಿವಿ ಹಾಗೂ ಪ್ರತಿಷ್ಠಿತ
ಮೆಸಾಚುಸೆಟ್ಸ್ ತಾಂತ್ರಿಕ ವಿವಿಯಲ್ಲಿ (ಎಂಐಟಿ)
ತಮ್ಮ ಉನ್ನತಾ ವಿದ್ಯಾ'್ಯಾಸ
ಪೂರೈಸಿದರು. 'ಾರತ ಹಾಗೂ ವಿದೇಶಗಳ
ಹಲವು ವಿಶ್ವವಿದ್ಯಾಲಯಗಳಲ್ಲಿ ಬೋ'ನೆ
ಮಾಡುತ್ತಿದ್ದ ಚಾರ್ಲ್ಸ್, ಪರಿಸರ ಸಮತೋಲನ
ಮತ್ತು ನಗರವಾಸಿಗಳ ಜೀವನ ಸು'ಾರಣೆ
ಉದ್ದೇಶಕ್ಕಾಗಿ ಮುಂಬೈನಲ್ಲಿ 'ನಗರ
ವಿನ್ಯಾಸ ಸಂಶೋ'ನಾ ಸಂಸ್ಥೆ'ಯನ್ನು
ಹುಟ್ಟುಹಾಕಿದರು.
ಚಾರ್ಲ್ಸ್ ಕೊರಿಯಾ ಟಾಪ್ 10 ನಿರ್ಮಾಣಗಳು 1.
ಗಾಂ ಸ್ಮಾರಕ ಸಂಗ್ರಹಾಲಯ, ಸಾಬರಮತಿ
ಆಶ್ರಮ, ಗುಜರಾತ್ 2. ಜವಾಹರ್ ಕಲಾ ಕೇಂದ್ರ,
ಜೈಪುರ 3. ವಿ'ಾನ 'ವನ್, 'ೋಪಾಲ್ 4.
ಕಾಂಚನಗಂಗಾ ಅಪಾರ್ಟ್ಮೆಂಟ್, ಮುಂಬೈ
5. ಬ್ರಿಟಿಷ್ ಕೌನ್ಸಿಲ್, ದೆಹಲಿ 6. ಪೋರ್ಚುಗೀಸ್ ಚರ್ಚ್,
ಮುಂಬಯಿ 7. ಎಲ್ಐಸಿ ಬಿಲ್ಡಿಂಗ್, ಹೊಸದಿಲ್ಲಿ 8.
ವಿಶ್ವಸಂಸ್ಥೆಯಲ್ಲಿ 'ಾರತದ ಶಾಶ್ವತ ರಾಯ'ಾರ
ಕಚೇರಿ, ನ್ಯೂಯಾರ್ಕ್ 9. ಇಸ್ಲಾಮಿಕ್ ಬಿಲ್ಡಿಂಗ್,
ಟೊರಾಂಟೊ, ಕೆನಡಾ 10.ಚಾಂಪಲಿಮೌಡ್
ಸೆಂಟರ್, ಪೋರ್ಚುಗಲ್
ಮಾಯವಾದ ನವನಗರದ ಕನಸುಗಾರ ! - ರವಿರಾಜ್
ಆರ್.ಗಲಗಲಿ ಬಾಗಲಕೋಟ ಆಲಮಟ್ಟಿ ಜಲಾಶಯದ
ಹಿನ್ನೀರಿನ ಸಂತ್ರಸ್ತರಿಗಾಗಿ ನವನಗರವನ್ನು
ರೂಪಿಸಿದ್ದು ಇದೇ ಚಾರ್ಲ್ಸ್. ಹೊಸ ನಗರಗಳ
ನಿರ್ಮಾಣದ ಯೋಜನೆಗಳನ್ನು ರೂಪಿಸುವಲ್ಲಿ
ಚಾರ್ಲ್ಸ್ ಸಿದ್ಧಹಸ್ತರಾಗಿದ್ದರು. ಆದ್ದರಿಂದಲೇ
ಬಾಗಲಕೋಟ ನಗರವನ್ನು ಸ್ಥಳಾಂತರಿಸುವ
ಯೋಜನೆಗೆ ಸರಕಾರ ನಿ'ರ್ರಿಸಿದಾಗ ನೆನಪಿಗೆ
ಬಂದದ್ದು ಇದೇ ಚಾರ್ಲ್ಸ್ ಹೆಸರು. ಒಂದಿಡೀ
ನಗರದ 'ಾಗಶಃ ಪ್ರದೇಶವನ್ನು ಸುಂದರವಾಗಿ
ಸ್ಥಳಾಂತರಿಸುವ ಹೊಣೆಗಾರಿಕೆಯನ್ನು ಅವರು
ನಿ'ಾಯಿಸಿದರು. ಯೋಜನೆ ರೂಪಿಸಿದ 22 ವರ್ಷಗಳ
ನಂತರ ಇದೀಗ ನವನಗರ ಬೆಳೆದು ನಿಂತಿದೆ. ಈ
ಸುಂದರ ನಗರದ ಮೂಲ ಐಡಿಯಾ ಚಾರ್ಲ್ಸ್
ಅವರದು. 1985ರಲ್ಲಿ ಅಂದಿನ ರಾಜ್ಯ ಸರಕಾರ
ಆಲಮಟ್ಟಿ ಯೋಜನೆ
ಕೈಗೆತ್ತಿಕೊಳ್ಳುತ್ತಿದ್ದಂತೆ ನವನಗರ ಎಂಬ
ಹೊಸ ಟೌನ್ಶಿಪ್ ಕಟ್ಟಲು ನಿ'ರ್ರಿಸಿತು. ಈ
ಸಂದ'ರ್ದಲ್ಲಿ ಚಾರ್ಲ್ಸ್ ಕೊರಿಯಾ ನೆರವು
ಪಡೆಯಲು ಅದು ನಿರ್'ಾರ ಕೈಗೊಂಡಿತು. ಆಗ
ಬಾಗಲಕೋಟಕ್ಕೆ 'ೇಟಿ ನೀಡಿದ ಕೊರಿಯಾ
49 ಸೆಕ್ಟರ್ಗಳನ್ನೊಳಗೊಂಡ ನವನಗರದ
ಯೋಜನೆ ಸಿದ್ಧಪಡಿಸಿದರು. ನಂತರ ಹೆಚ್ಚಿನ
ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ
63 ಸೆಕ್ಟರ್ಗಳನ್ನು ರೂಪಿಸಲಾಯಿತು. ಕೆಲವು
ವರ್ಷಗಳ ನಂತರ ಯೋಜನೆಯನ್ನು ಅಗತ್ಯಕ್ಕೆ
ತಕ್ಕಂತೆ ಬದಲಾಯಿಸಲಾಯಿತು.
ಹೊಸತನದ ಹರಿಕಾರ ಚಾರ್ಲ್ಸ್ ಹೊಸತನಕ್ಕೆ
ತುಡಿಯುವ ಆರ್ಕಿಟೆಕ್ಟ್ ಎಂದು ಖ್ಯಾತಿ
ಗಳಿಸಿದ್ದರು. ನವನಗರದಲ್ಲಿ ಕ್ರೀಡಾಂಗಣ, ಆಟೊ
ಸೆಕ್ಟರ್, ಉದ್ಯಾನಗಳನ್ನು ವಿಭಿನ್ನ ಸೆಕ್ಟರ್ಗಳಲ್ಲಿ
ಅಳವಡಿಸುವ ಮೂಲಕ ವಿಶಾಲವಾದ ಯೋಜನೆ
ರೂಪಿಸಿದ್ದರು.ಚಾರ್ಲ್ಸ್ ಮರೆಯಾದರೂ
ಮುಳುಗಡೆ ಸಂತ್ರಸ್ತರ ನೆಲೆಗಾಗಿ ಅವರು ನಿರ್ಮಿಸಿದ
ನವನಗರ ಸದಾ ಅಮರವಾಗಿರುತ್ತದೆ. ---
ಹಳೆ ಬಾಗಲಕೋಟ ನಗರವನ್ನು ಅ'್ಯಸಿಸಿದ
ಕೊರಿಯಾ ಸಂಸ್ಕೃತಿ, ಜೀವನಶೈಲಿ
ಗಮನದಲ್ಲಿರಿಸಿ ನವನಗರದ ಯೋಜನೆ ರೂಪಿಸಿದ್ದರು.
ಅವರ ಕಾಳಜಿ ಮರೆಯಲಾಗದ್ದು. -
ಜಿ.ಎನ್.ಪಾಟೀಲ, ಮಾಜಿ ಅ'್ಯಕ್ಷರು, ಬಿಟಿಡಿಎ. ---
ಹೊಸ ನಗರವನ್ನು ರೂಪಿಸುವಾಗ ಹಳೆ ನಗರದ
ಪ್ರಮುಖ ಅಂಶಗಳನ್ನೂ ಅವರು
ಗಮನದಲ್ಲಿರಿಸಿಕೊಂಡರು. ಹೀಗಾಗಿ ಇಲ್ಲಿನ
ಸಂಸ್ಕೃತಿಗೆ ತಕ್ಕಂತೆ ಯೋಜನೆ
ಸಿದ್ಧಗೊಂಡಿತು. -ಸಿದ್ದಣ್ಣ ಶೆಟ್ಟರ, ಮಾಜಿ
ಅ'್ಯಕ್ಷರು, ಬಿಟಿಡಿಎ
Comments
Post a Comment