Forbes' Sports MILLIONARES' list announced : Dhini got 23rd rank
ನವದೆಹಲಿ: ಫೋರ್ಬ್ಸ್ ಮ್ಯಾಗಜೀನ್
ಅತಿ ಹೆಚ್ಚು ಸಂಭಾವನೆ ಸಿಗುವ ವಿಶ್ವದ
100 ಕ್ರೀಡಾಪಟುಗಳ ಪಟ್ಟಿಯನ್ನು
ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ
ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ
ಮಹೇಂದ್ರ ಸಿಂಗ್ ಧೋನಿ ಅವರು
ಸ್ಥಾನ ಪಡೆದುಕೊಂಡಿದ್ದಾರೆ.
ಈ ಫೋರ್ಬ್ಸ್ ಪಟ್ಟಿಯಲ್ಲಿ
ನಿರೀಕ್ಷೆಯಂತೆ ಶತಮಾನದ ಬಾಕ್ಸರ್
ಮೇವೆದರ್ ಅಗ್ರಸ್ಥಾನ
ಪಡೆದುಕೊಂಡಿದ್ದಾರೆ. ಇನ್ನು
ಗಾಲ್ಫ್ ಆಟಗಾರ ಟೈಗರ್ವುಡ್ಸ್,
ಟೆನ್ನಿಸ್ ಸ್ಟಾರ್ ರೋಜರ್ ಫೆಡರರ್,
ಪೋರ್ಚುಗೀಸ್ನ ಫುಟ್ಬಾಲ್
ಆಟಗಾರ ಕ್ರಿಸ್ಟಿಯಾನೋ
ರೋನಾಲ್ಡೋ ಟಾಪ್
ಪಟ್ಟಿಯಲ್ಲಿದ್ದಾರೆ.
ಕಳೆದ ವರ್ಷ 22ನೇ ಸ್ಥಾನದಲ್ಲಿದ್ದ
ಧೋನಿ ಈ ವರ್ಷ 23 ಸ್ಥಾನಕ್ಕೆ
ಕುಸಿದಿದ್ದಾರೆ.ಧೊನಿ ಒಟ್ಟು
ಸಂಪಾದನೆ 31 ದಶಲಕ್ಷ ಡಾಲರ್
ಹಣವೆಂದು ಅಂದಾಜಿಸಲಾಗಿದೆ.
ಅದರಲ್ಲಿ ಧೊನಿಯ ಕ್ರಿಕೆಟ್ನಿಂದ 4
ದಶಲಕ್ಷ ಡಾಲರ್,
ಜಾಹೀರಾತುಗಳಿಂದ ಹಾಗೂ
ಕೆಲವೊಂದು ಒಡಂಬಡಿಕೆಗಳಿಂದ 27
ದಶಲಕ್ಷ ಡಾಲರ್ ಆದಾಯ
ಸಂಪಾದಿಸಿದ್ದಾರೆ ಎಂದು
ಫೋರ್ಬ್ಸ್ ಹೇಳಿದೆ.
33 ವರ್ಷದ ಕ್ರಿಕೆಟರ್ ಧೋನಿ 2014ರಲ್ಲಿ
ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಆದರೆ ಏಕದಿನ ಕ್ರಿಕೆಟ್ನಲ್ಲಿ ನಾಯಕತ್ವದ
ಜೊತೆಗೆ ವಿಕೆಟ್ ಕೀಪರ್ ಆಗಿ ತಂಡವನ್ನು
ಮುನ್ನೆಡೆಸುತ್ತಿದ್ದಾರೆ.
Comments
Post a Comment