Jurassic World takes $511m in record opening weekend - BBC


Published: 16 Jun 2015 05:17 PM IST | Updated:
16 Jun 2015 05:18 PM IST
ಜುರಾಸಿಕ್ ವರ್ಲ್ಡ್
ಲಾಸ್ ಏಂಜಲೀಸ್: ಜುರಾಸಿಕ್ ಪಾರ್ಕ್ ಸರಣಿಯ
ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿರುವುದು
ತಿಳಿದಿರುವ ಸಂಗತಿ. ಇದೇ ಸರಣಿಯಲ್ಲಿ ಬಂದ
ಜುರಾಸಿಕ್ ವಲ್ಡ್ ಚಿತ್ರ ಜಗತ್ತಿನೆಲ್ಲೆಡೆ ಬಿಡುಗಡೆಯಾದ
ಒಂದು ವಾರದಲ್ಲಿ ಬಾಕ್ಸ್ ಆಫೀಸ್ನಲ್ಲಿ
ದಾಖಲೆಯ 3276 ಕೋಟಿ ರು. ಕೊಳ್ಳೆ
ಹೊಡೆದಿದೆ.
ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ
ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ
511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ.
ಚಿತ್ರವೊಂದು ಇಷ್ಟೊಂದು ಅಧಿಕ ಹಣ
ಗಳಿಸಿರುವುದು ಕೂಡ ಇದೇ ಮೊದಲು.
2011ರಲ್ಲಿ ಹ್ಯಾರಿ ಪಾಟರ್ ಮತ್ತು ಡೆತ್ಲಿ
ಹ್ಯಾಲೋಸ್ ಚಿತ್ರ ಮೊದಲ ವಾರದಲ್ಲಿ 3072
ಕೋಟಿ ರು. ಗಳಿಸಿತ್ತು. ಈ ದಾಖಲೆಯನ್ನು
ಜುರಾಸಿಕ್ ವರ್ಲ್ಡ್ ಹಿಂದಿಕ್ಕಿದೆ.
ಕಾಲಿನ್ ಟ್ರೆವೆರೋ ನಿರ್ದೇಶನದ ಈ ಚಿತ್ರ
ಮೊದಲ ವಾರಾಂತ್ಯದಲ್ಲಿ ವಿಶ್ವಾದ್ಯಂತ
511.8 ದಶಲಕ್ಷ ಡಾಲರ್ ಬಾಚಿಕೊಂಡಿದೆ. ಈ ಚಿತ್ರ
961 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.
ಭಾರತದಲ್ಲೂ ಶನಿವಾರ ಜುರಾಸಿಕ್ ವರ್ಲ್ಡ್ ಚಿತ್ರ
ಬಿಡುಗಡೆಯಾಗಿದ್ದು, ಎರಡೇ ದಿನದಲ್ಲಿ 44
ಕೋಟಿ ರು. ಬಾಚಿಕೊಂಡಿದೆ. ಈ ಚಿತ್ರದಲ್ಲಿ
ಬಾಲಿವುಡ್ ನಟ ಇರ್ಫಾನ್ ಖಾನ್ ಅವರು, ಪಾರ್ಕ್ನ
ಮಾಲೀಕ ಸಾಮ್ ಮಸ್ರಾನಿ ಅವರ ತಂದೆಯ
ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹಾಲಿವುಡ್ ನಲ್ಲಿ ಮೊದಲ ವಾರಾಂತ್ಯದಲ್ಲಿ
ಯಾವೊಂದು ಚಿತ್ರವೂ 500 ದಶಲಕ್ಷ ಡಾಲರ್
ಗಳಿಕೆಯ ಗಡಿ ಮುಟ್ಟಿರಲಿಲ್ಲ. ಆದರೆ 'ಜುರಾಸಿಕ್
ವರ್ಲ್ಡ್' ಈ ಖ್ಯಾತಿಗೆ ಪಾತ್ರವಾಗಿದೆ. ಟಾಪ್ 5
ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಮುಂಚೂಣಿಯಲ್ಲಿ
ಜುರಾಸಿಕ್ ವರ್ಲ್ಡ್, ಹ್ಯಾರಿ ಪಾಟರ್ ಆಂಡ್ ದಿ ಡೆತ್​ಲಿ
ಹಾಲೊಸ್ (483.2 ದಶಲಕ್ಷ ಡಾಲರ್), ಫ್ಯೂರಿಯಸ್
7 (397.6 ದ.ಲ.ಡಾ.), ಹ್ಯಾರಿ ಪಾಟರ್ ಆಂಡ್
ಹಾಫ್-ಬ್ಲಡ್ ಪ್ರಿನ್ಸ್ (394 ದ.ಲ.ಡಾ.), ದ ಅವೆಂಜರ್ಸ್
(392.5 ದ.ಲ.ಡಾ.) ನಂತರದ ಸ್ಥಾನದಲ್ಲಿವೆ.
Posted by: Vishwanath S | Source: Online Desk

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು