NL Beno Zephine, 25, will be the first 100% blind Indian Foreign Service officer of India.
ದೇಶದ ಮೊದಲ ಅಂಧ ಮಹಿಳಾ ಐಎಫ್ಎಸ್
ಅಧಿಕಾರಿ ನೇಮಕ
ಮಂಗಳವಾರ - ಜೂನ್ -16-2015
ಚೆನ್ನೈನ ನಿವಾಸಿ ಬೆನೊಗೆ ಕೇಂದ್ರ ಸರಕಾರದ
ಕೊಡುಗೆ
ಚೆನ್ನೈ, ಜೂ.15: ಜೂನ್ 12ರ ರಾತ್ರಿಯ ನಂತರ
ಎನ್.ಎಲ್. ಬೆನೊ ಝೆಫಾಯಿನ್ಗೆ ಎಳ್ಳಷ್ಟೂ
ಸಮಯವಿಲ್ಲ. ಆಕೆಯ ಫೋನ್ ರಿಂಗ್ ಆಗುವುದು
ನಿಂತಿಲ್ಲ. ಕರೆಗಳ ಮೇಲೆ ಕರೆಗಳು. ಎಲ್ಲರೂ ಆಕೆಗೆ
ಅಭಿನಂದನೆ ಹೇಳುವವರೇ. ಕಾರಣವಿಷ್ಟೇ.
ಚೆನ್ನೈನ 25ರ ಪ್ರಾಯದ ನಿವಾಸಿ ದೇಶದ
ಮೊದಲ ಅಂಧ (ಶೇ.100ರಷ್ಟು ಕುರುಡು)
ಐಎಫ್ಎಸ್ (ವಿದೇಶಾಂಗ ಸೇವೆ)
ಅಧಿಕಾರಿಯಾಗುತ್ತಿದ್ದಾರೆ.
''ನಿಮ್ಮನ್ನು ಭಾರತೀಯ ವಿದೇಶಾಂಗ
ಸೇವೆಗೆ ಸೇರ್ಪಡೆಗೊಳಿಸಲು ಕೇಂದ್ರ
ಸರಕಾರ ನಿರ್ಧರಿಸಿದೆ'' ಎಂದು ಶುಕ್ರವಾರ ರಾತ್ರಿ
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ
ಬಂದ ಫೋನ್ ಕರೆಯೊಂದು ಝೆಫಾಯಿನ್ಗೆ
ತಿಳಿಸಿತ್ತು. ಭಾರತೀಯ ವಿದೇಶಾಂಗ ಸೇವೆಯ
69 ವರ್ಷಗಳ ಇತಿಹಾಸದಲ್ಲಿ ಅಂಧ
ಅಭ್ಯರ್ಥಿಯೊಬ್ಬರು ಐಎಫ್ಎಸ್ಗೆ
ಸೇರ್ಪಡೆಗೊಳ್ಳುತ್ತಿರುವುದು ಇದೇ
ಮೊದಲು.
''ಇಂತಹ ಮಹತ್ವದ ನಿರ್ಧಾರ
ಕೈಗೊಂಡಿದ್ದಕ್ಕಾಗಿ ನಾನು ಪ್ರಧಾನಿ
ನರೇಂದ್ರ ಮೋದಿಯವರಿಗೆ ನಿಜವಾಗಿಯೂ
ಕೃತಜ್ಞತೆ ಹೇಳಲು ಬಯಸುತ್ತೇನೆ.
ಸ್ವಲ್ಪಮಟ್ಟಿಗೆ ದೃಷ್ಟಿದೋಷ
ಹೊಂದಿರುವವರನ್ನು ಹೊರತುಪಡಿಸಿ
ಅಂಧರನ್ನು ಐಎಫ್ಎಸ್ ಸೇವೆಗೆ ಪರಿಗಣಿಸುವುದಿಲ್ಲ
ಎಂದು ಕೇಳಿದ್ದೆ'' ಎಂದು ಬೆನೊ
ಹೇಳುತ್ತಾರೆ.ಬೆನೊ ಝೆಫಾಯಿನ್, ಈಗ
ಚೆನ್ನೈನಲ್ಲಿ ಸ್ಟೇಟ್ ಬ್ಯಾಂಕ್ ಆಫ್
ಇಂಡಿಯಾದ ಉದ್ಯೋಗಿ. ಐಎಫ್ಎಸ್ಗೆ
ಆಯ್ಕೆಯಾಗಿರುವ ಸುದ್ದಿ ಕೇಳಿದಂದಿನಿಂದ
ಆಕೆಯ ಕಾಲು ನಿಂತಲ್ಲಿ ನಿಲ್ಲುತ್ತಿಲ್ಲ. ಅವರೀಗ
ಚೆನ್ನೈ ನಗರದ ಶಾಲಾ ಕಾಲೇಜುಗಳಲ್ಲಿ
ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸಗಳನ್ನು
ನೀಡುವುದರಲ್ಲಿ ತುಂಬಾ
ಬ್ಯುಸಿಯಾಗಿದ್ದಾರೆ.
ಹಿರಿಯ ಅಧಿಕಾರಿಗಳ ಶ್ಲಾಘನೆ: ಶೇ.100ರಷ್ಟು
ಅಂಧ ಅಭ್ಯರ್ಥಿಗಳನ್ನು ಐಎಫ್ಎಸ್ ಸೇವೆಗೆ ಪರಿಗಣಿಸಿದ
ಕೇಂದ್ರ ಸರಕಾರದ ನಿರ್ಧಾರವನ್ನು ಹಿರಿಯ
ನಿವೃತ್ತ ರಾಜತಾಂತ್ರಿಕ ಅಧಿಕಾರಿಗಳು
ಶ್ಲಾಘಿಸಿದ್ದಾರೆ. 'ಈ ಹಿಂದೆ 20:20ರಷ್ಟು ದೃಷ್ಟಿ
ಹೊಂದಿರುವ ಬಹಳಷ್ಟು ಪ್ರತಿಭಾವಂತರು
ಅವಕಾಶ ಕಳೆದುಕೊಂಡಿರುವುದರಿಂದ
ಇದೊಂದು ಕ್ರಾಂತಿಕಾರಿ
ನಿರ್ಧಾರವೆನ್ನಬಹುದು. ಸಾಮಾನ್ಯವಾಗಿ,
ಕನ್ನಡಕ ಧರಿಸುವ ಅಭ್ಯರ್ಥಿಗಳನ್ನು ಮಾತ್ರ
ಐಎಫ್ಎಸ್ಗೆ ಪರಿಗಣಿಸಲಾಗುತ್ತಿತ್ತು. ಅಪಘಾತದಲ್ಲಿ
ಒಂದು ಕಣ್ಣು ಕಳೆದುಕೊಂಡಿದ್ದ
ಅಭ್ಯರ್ಥಿಯೊಬ್ಬರನ್ನು ಕಳೆದ ವರ್ಷ ಆದಾಯ
ತೆರಿಗೆ ಇಲ್ಲವೇ ಅದಕ್ಕೆ ಸಂಬಂಧಿಸಿದ ಕಂದಾಯ
ಸೇವೆಗೆ ಸೇರ್ಪಡೆಗೊಳಿಸಿರುವುದು ನನ್ನ
ಗಮನಕ್ಕೆ ಬಂದಿದೆ' ಎಂದು
ತಿರುವನಂತಪುರಂನಲ್ಲಿ ನೆಲೆಸಿರುವ ನಿವೃತ್ತ
ರಾಜತಾಂತ್ರಿಕ ಅಧಿಕಾರಿ ಟಿ.ಪಿ.ಶ್ರೀನಿವಾಸನ್
ತಿಳಿಸುತ್ತಾರೆ.
'ಇದೊಂದು ಮುನ್ನೋಟವಿರುವ ಹಾಗೂ
ಉದಾರ ಧೋರಣೆಯುಳ್ಳ ನಿರ್ಧಾರವಾಗಿದೆ. ಆಕೆಗೆ
(ಬೆನೊ) ಸ್ವಲ್ಪ ತೊಂದರೆಗಳಿರಬಹುದು.
ಇಲ್ಲಿಯವರೆಗೆ ಸಾಧನೆಯ ಒಂದೊಂದೇ
ಮೆಟ್ಟಿಲುಗಳನ್ನು ಏರಿಕೊಂಡು ಬಂದಿರುವ ಆಕೆ
ದಕ್ಷತೆಯಿಂದ ಕೆಲಸ ಮಾಡಬಹುದು. ಐಎಎಸ್
ಕೇಡರ್ನ ಅಧಿಕಾರಿಗಳಿಗೆ ಕ್ಷೇತ್ರಕಾರ್ಯದ
ತೊಂದರೆಗಳಿರುತ್ತವೆ. ಆದರೆ, ಐಎಫ್ಎಸ್ ಕೇಡರ್ನ
ಅಧಿಕಾರಿಗಳಿಗೆ ಅದರ ಆವಶ್ಯಕತೆಗಳು ಇರುವುದಿಲ್ಲ.
ಅವರು ವಿಷಯ ಇಲ್ಲವೇ ಸಮಸ್ಯೆಗಳ ಅಧ್ಯಯನ
ಮಾಡಬೇಕು, ವಿಶ್ಲೇಷಣೆ ಮಾಡಿ ಸರಕಾರಕ್ಕೆ
ಮಾರ್ಗದರ್ಶನ ನೀಡಬೇಕು ಅಷ್ಟೇ' ಎಂದು
ಶ್ರೀನಿವಾಸನ್ ಹೇಳುತ್ತಾರೆ.
'ನನಗೆ ಈ ಜವಾಬ್ದಾರಿಯನ್ನು ನೀಡುವ
ಸಲುವಾಗಿಯೇ ಕೇಂದ್ರ ಸರಕಾರವು
ಕೆಲವೊಂದು ಮಾನದಂಡಗಳಲ್ಲಿ
ಬದಲಾವಣೆಯನ್ನು ಮಾಡಿದೆ' ಎಂದು ಬೆನೊ
ತಿಳಿಸುತ್ತಾರೆ.
ಬೆನೊ ಝಫಾಯಿನ್ ಕಳೆದ ವರ್ಷ ನಾಗರಿಕ ಸೇವೆಗಳ
ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ,
ಆಕೆಯ ಹುದ್ದೆಯ ವಿಚಾರದ ನಿರ್ಧಾರವನ್ನು ಬಾಕಿ
ಇರಿಸಲಾಗಿತ್ತು.
'ಕೇಂದ್ರ ಲೋಕಸೇವಾ ಆಯೋಗದಿಂದ
ಸಂದರ್ಶನ ನಡೆದ ಸಂದರ್ಭದಲ್ಲೇ ನನ್ನ ಹುದ್ದೆಯ
ವಿಚಾರದಲ್ಲಿ ನನಗೆ ಸುಳಿವೊಂದು ಲಭಿಸಿತ್ತು.
ನನಗೆ ಕೇಳಿದ ಬಹುತೇಕ ಪ್ರಶ್ನೆಗಳು ವಿದೇಶ
ನೀತಿ ಮತ್ತು ಭೌಗೋಳಿಕ ಆಯಕಟ್ಟಿನ ವಿಷಯಗಳಿಗೆ
ಸಂಬಂಧಿಸಿದ್ದವು. ಈಶಾನ್ಯ ರಾಜ್ಯಗಳು
ಮತ್ತು ಈ ಪ್ರದೇಶದಲ್ಲಿ ಬಹಳಷ್ಟು ದೇಶಗಳ
ಗಡಿಗಳು ಹೇಗೆ ಒಗ್ಗೂಡಿವೆ ಎಂಬುದರ ಕುರಿತು
ನನ್ನನ್ನು ಪ್ರಶ್ನಿಸಲಾಗಿತ್ತು' ಎಂದು ಬೆನೊ
ಗುಟ್ಟು ಬಹಿರಂಗ ಮಾಡುತ್ತಾರೆ.
ತಮ್ಮ ಹೊಸ ಹುದ್ದೆಯ ಬಗ್ಗೆ ಬೆನೊ ಬಹಳ
ಉತ್ಸುಕರಾಗಿದ್ದಾರೆ. ಓರ್ವ ರಾಜತಾಂತ್ರಿಕ
ಅಧಿಕಾರಿಣಿಯಾಗಿ ಅವರಿಗೆ ಬಹಳಷ್ಟು
ಮಾತನಾಡುವ ಇಲ್ಲವೇ ಉಪನ್ಯಾಸ
ನೀಡುವ ಅವಕಾಶಗಳು ಲಭಿಸುತ್ತವೆ. 'ನನಗೆ
ಮಾತನಾಡುವುದೆಂದರೆ ಬಹಳ ಇಷ್ಟ' ಎಂದು
ಬೆನೊ ಹೇಳುತ್ತಾರೆ. 'ನನ್ನ ಪೋಷಕರು,
ಅದರಲ್ಲೂ ಮುಖ್ಯವಾಗಿ ನನ್ನ ತಾಯಿ
ಬಹಳಷ್ಟು ದಿನಪತ್ರಿಕೆಗಳು, ನಿಯತಕಾಲಿಕಗಳು,
ಪುಸ್ತಕಗಳಿಂದ ವಿಷಯವನ್ನು ನನಗೆ ಓದಿ
ಹೇಳುತ್ತಿದ್ದರು' ಎಂದು ಬೆನೊ
ತಿಳಿಸುತ್ತಾರೆ.
'ನನ್ನ ಈ ಯಶಸ್ಸಿನ ಹಿಂದಿರುವ ರಾಜ್ಯ ತರಬೇತಿ
ಸಂಸ್ಥೆ ಮತ್ತು ಹಲವು ಐಎಎಸ್ ಅಕಾಡಮಿಗಳಲ್ಲಿನ
ನನ್ನ ಶಿಕ್ಷಕರು ಮತ್ತು ತರಬೇತುದಾರರಿಗೆ
ಕೃತಜ್ಞತೆಗಳನ್ನು ಹೇಳಲು ಬಯಸುತ್ತೇನೆ'
ಎಂದು ಬೆನೊ ಹೇಳುತ್ತಾರೆ. ಮಣಿಧನ್ಯನ್,
ಸ್ಮಾರ್ಟ್ ಗಣೇಶ್, ಶಂಕರ್ ಮತ್ತು ಟೈಮ್
ಇನ್ಸ್ಟಿಟ್ಯೂಟ್ನ ನೆರವನ್ನು ಅವರು
ಸ್ಮರಿಸುತ್ತಾರೆ.
ಆರಂಭದಲ್ಲಿ ಬ್ರೈಲ್ ಲಿಪಿಯ ಪುಸ್ತಕಗಳನ್ನು
ಓದುತ್ತಿದ್ದ ಬೆನೊ, ಈಗ 'ಜಾಬ್ ಆ್ಯಕ್ಸೆಸ್ ವಿದ್
ಸ್ಪೀಚ್ (ಜಾಸ್)' ಸಾಫ್ಟ್ವೇರ್ನ ನೆರವಿನಿಂದ
ಕಂಪ್ಯೂಟರ್ ಸ್ಕ್ರೀನ್ನ ಮೂಲಕ ಓದುತ್ತಾರೆ.
ಈ ಸಾಫ್ಟ್ವೇರ್ ತಮಿಳು ಮತ್ತು ಇಂಗ್ಲಿಷ್
ಪುಸ್ತಕಗಳನ್ನು ಸ್ಕಾನ್ ಮಾಡಬಲ್ಲದು.
ಸ್ಮಾರ್ಟ್ಫೋನ್ ಮೂಲಕವೂ ಈ ಸಾಫ್ಟ್ವೇರ್
ಲಭ್ಯವಿದೆ. ವಿದೇಶಾಂಗ ಸಚಿವಾಲಯದಲ್ಲಿ
ಹೊಸ ಹುದ್ದೆಗೆ ಸೇರ್ಪಡೆಗೊಳ್ಳುವ
ಮೊದಲು ತಮಿಳುನಾಡು ಮುಖ್ಯಮಂತ್ರಿ
ಜೆ.ಜಯಲಲಿತಾ ಮತ್ತು ಪ್ರಧಾನಿ ನರೇಂದ್ರ
ಮೋದಿಯವರನ್ನು ಭೇಟಿ ಮಾಡಿ
ಆಶೀರ್ವಾದ ಪಡೆಯಬೇಕು. ಅವರ ಬೆಂಬಲಕ್ಕಾಗಿ
ಧನ್ಯವಾದ ತಿಳಿಸಬೇಕು ಎಂದು ಬೆನೊ ಆಶಯ
ವ್ಯಕ್ತಪಡಿಸುತ್ತಾರೆ.
ಬೆನೊ ಮದ್ರಾಸ್ ವಿಶ್ವವಿದ್ಯಾನಿಲಯದಿಂದ
ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಆಕೆಯ ತಂದೆ ಲೂಕ್ ಅಂಥೋಣಿ ಚಾರ್ಲ್ಸ್
ರೈಲ್ವೆ ಇಲಾಖೆಯ ಉದ್ಯೋಗಿ. ತಾಯಿ
ಮೇರಿ ಪದ್ಮಜಾ ಗೃಹಿಣಿ. ತಾಯಿಯೇ ಆಕೆಯ
ಪಾಲಿನ ದೊಡ್ಡ ಸ್ಫೂರ್ತಿ. ಹುಟ್ಟುವಾಗಲೇ
ಅಂಧಳಾಗಿದ್ದ ಬೆನೊ ಚೆನ್ನೈನ ಲಿಟ್ಲ್ ಫ್ಲವರ್
ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ
ವಿದ್ಯಾಭ್ಯಾಸಗಳನ್ನು ಪೂರೈಸಿದ್ದಾರೆ.
Comments
Post a Comment