PM launches 'Narendra Modi Mobile App(download from playstore) ಆಂಡ್ರಾಯ್ಡ್ ಜಗತ್ತಿಗೆ ಕಾಲಿರಿಸಿದ ಪ್ರಧಾನಿ ನರೇಂದ್ರ ಮೋದಿ
Posted by: Mahesh
| Wed, Jun 17, 2015, 18:57 [IST]
ನವದೆಹಲಿ, ಜೂ.17: ಡಿಜಿಟಲ್ ಇಂಡಿಯಾ ಕನಸು
ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ
ಅವರು ತಂತ್ರಜ್ಞಾನ ಸದ್ಬಳಕೆ
ನಿಪುಣರಾಗಿರುವುದು ಎಲ್ಲರಿಗೂ ಗೊತ್ತೇ
ಇದೆ. ಟ್ವಿಟ್ಟರ್, ಫೇಸ್ ಬುಕ್ ನಂತರ ಈಗ
ಆಂಡ್ರಾಯ್ಡ್ ಲೋಕಕ್ಕೆ ಕಾಲಿರಿಸಿದ್ದಾರೆ.
ನರೇಂದ್ರ ಮೋದಿ ಹೆಸರಿನ ಆಂಡ್ರಾಯ್ಡ್
ಅಪ್ಲಿಕೇಷನ್ ಬುಧವಾರದಿಂದ ಸಾರ್ಜವನಿಕರಿಗೆ
ಲಭ್ಯವಾಗಿದೆ.
ಈ ಅಪ್ಲಿಕೇಷನ್ ಮೂಲಕ ಪ್ರಧಾನಿ ಮೋದಿ ಅವರ
ಚಟುವಟಿಕೆಗಳ ವಿವರ ಕಾಲ ಕಾಲಕ್ಕೆ ಸಿಗಲಿದೆ. ಜೊತೆಗೆ
ಮೋದಿ ಅವರ ಜೊತೆಗೆ ನೇರ ಸಂಪರ್ಕ
ಹೊಂದಲು ಸಾರ್ವಜನಿಕರಿಗೆ ನೆರವಾಗಲು
ಅನುಕೂಲ ಕಲ್ಪಿಸಲಾಗಿದೆ.
ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಷನ್
ಲೋಕಾರ್ಪಣೆ ಮಾಡಿ, ನಾವೆಲ್ಲರೂ
ಮೊಬೈಲ್ ನಲ್ಲಿ ಸಂಪರ್ಕದಲ್ಲಿರೋಣ, ಆಪ್ ನಲ್ಲಿ
ನವೀನ ವೈಶಿಷ್ಟ್ಯಗಲಿದ್ದು, ಪ್ಲೇ ಸ್ಟೋರ್
ಮೂಲಕ ಇದನ್ನು ಡೌನ್ ಲೋಡ್
ಮಾಡಬಹುದಾಗಿದೆ, ಪ್ರತಿಕ್ರಿಯೆಗಳಿಗೆ ಸ್ವಾಗತ
ಎಂದು ನರೇಂದ್ರ ಮೋದಿ ಅವರು ಟ್ವೀಟ್
ಮಾಡಿದ್ದಾರೆ.
ಅಪ್ಲಿಕೇಷನ್ ನಲ್ಲಿ ಮನ್ ಕಿ ಬಾತ್ ಆಡಿಯೋಗಳು
ಕೂಡಾ ಸಿಗುತ್ತದೆ. ಮಿಕ್ಕಂತೆ ಸರ್ಕಾರದ
ಯೋಜನೆಗಳು, ಮೋದಿ ಅವರ ವೆಬ್ ಸೈಟ್
ನಲ್ಲಿರುವ ವಿವರಗಳೆಲ್ಲ ಸಿಗುತ್ತದೆ.
4.2ಎಂಬಿ ತೂಕದ ಈ ಅಪ್ಲಿಕೇಷನ್ ನಿಮ್ಮ
ಮೊಬೈಲ್ ಫೋನಿನಲ್ಲಿ ಇಳಿಸಿಕೊಳ್ಳಲು
ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ವರ್ಷನ್ 4.0
ಅಥವಾ ಅದಕ್ಕಿಂತ ಹೆಚ್ಚಿನದ್ದು ಇರಬೇಕು.
Comments
Post a Comment