ಡೈಮಂಡ್ ಲೀಗ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಸ್ವರ್ಣ ಪದಕ ಗೆದ್ದ ಬೋಲ್ಟ್


ಲಂಡನ್: ಆರು ಬಾರಿ ಒಲಿಂಪಿಕ್
ಚಾಂಪಿಯನ್ ಎನಿಸಿಕೊಂಡಿರುವ
ಉಸೇನ್ ಬೋಲ್ಟ್ ಮತ್ತೆ ಫಾಮರ್್​ಗೆ
ಮರಳಿಸಿದ್ದಾರೆ. ಲಂಡನ್ ಒಲಿಂಪಿಕ್
ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಠಿತ
ಡೈಮಂಡ್ ಲೀಗ್ ಕ್ರೀಡಾಕೂಟದ
100 ಮೀ. ಓಟದಲ್ಲಿ ಸ್ವರ್ಣ
ಗೆದ್ದುಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ.
ಬೋಲ್ಟ್ 2012ರಲ್ಲಿ ನಡೆದ ಒಲಿಂಪಿಕ್ಸ್​
ನಲ್ಲಿ ಇದೇ ಟ್ರ್ಯಾಕ್ ಮೇಲೆ
ಮೂರು ಸ್ವರ್ಣ ಪದಕ
ಗೆದ್ದುಕೊಂಡಿದ್ದರು. 100
ಮೀಟರ್ ದೂರವನ್ನು ಕೇವಲ 9.87
ಸೆಕೆಂಡ್​ಗಳಲ್ಲಿ ತಲುಪಿ ಅಚ್ಚರಿ
ಮೂಡಿಸಿದ್ದರು. ಈಗಲೂ ಇದೇ
ಸಮಯದಲ್ಲಿ 100 ಮೀಟರ್ ಗುರಿ ತಲುಪಿ
ಸ್ವರ್ಣ ಸಂಪಾದಿಸಿದ್ದಾರೆ.ಸ
ನಂತರ ಪ್ರತಿಕ್ರಿಯಿಸಿರುವ ಬೋಲ್ಟ್,
ಹೀಟ್​ಗಳಲ್ಲಿ ಉತ್ತಮ ಪ್ರದರ್ಶನ
ನೀಡಲು ಸಾಧ್ಯವಾಯಿತು. ಆದರೆ
ಫೈನಲ್​ನಲ್ಲಿ ನಿರೀಕ್ಷೆಂತೆ ಸಾಧನೆ
ಮಾಡಲು ಸಾಧ್ಯವಾಗಲಿಲ್ಲ.
ಅದು ಬೇಸರವನ್ನುಂಟು
ಮಾಡಿತು ಎಂದಿದ್ದಾರೆ.
9.9 ಸೆಕೆಂಡ್​ಗಳಲ್ಲಿ ಗುರಿ ತಲುಪಿದ
ಅಮೆರಿಕದ ಮೈಕೆಲ್ ರೋಜರ್ಸ್ ಬೆಳ್ಳಿ,
ಇನ್ನೊಬ್ಬ ಜಮೈಕಾ ಅಥ್ಲೀಟ್
ಕೆಮರ್ ಬೈಲಿ ಕಂಚು
ಸಂಪಾದಿಸಿದ್ದಾರೆ.
ಇನ್ನು ಬ್ರಿಟನ್​ನ ಜನಪ್ರಿಯ ಅಥ್ಲೀಟ್
ಮೊ ಫರ್ಹ ಡೋಪ್ ಪ್ರಕರಣದಲ್ಲಿ
ಸಿಲುಕಿಕೊಂಡ ಬಳಿಕ ಇದೇ
ಮೊದಲ ಬಾರಿಗೆ ಮತ್ತೆ ಸ್ಪರ್ಧಾ
ಕಣಕ್ಕೆ ಧುಮುಕಿ 3000 ಮೀಟರ್
ಓಟದಲ್ಲಿ ಬಂಗಾರ ಪದಕ ಸಂಪಾದನೆ
ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Comments

Popular posts from this blog

INCOME TAX CALCULATION 2025-26 for JAMAKHANDI BLOCK

ಶಿಕ್ಷಕರ ಸೇವಾ ಪ್ರಮಾಣ ಪತ್ರ.