125 various posts in forest Dpt(sports quota) Qulfcn- Degree/PUC/SSLC(apply online:Aug 19 last) www.aranya.gov.in
ಅರಣ್ಯ ಇಲಾಖೆಯಲ್ಲಿ 125
ಹುದ್ದೆಗಳು
ಕರ್ನಾಟಕ ಅರಣ್ಯ ಇಲಾಖೆಯು
ಖಾಲಿ ಇರುವ ಸುಮಾರು 125
ಹುದ್ದೆಗಳನ್ನು ಕ್ರೀಡಾ
ಮೀಸಲಾತಿಯಡಿ ಭರ್ತಿ ಮಾಡಲು
ಅರ್ಜಿ ಆಹ್ವಾನಿಸಲಾಗಿದೆ.
ಖಾಲಿಯಿರುವ 50 ಉಪವಲಯ
ಅರಣ್ಯಾಧಿಕಾರಿ ಹುದ್ದೆಗಳಿಗೆ
ಪಶುಸಂಗೋಪನೆ ಮತ್ತು
ಪಶುವೈದ್ಯ ವಿಜ್ಞಾನ,
ಸಸ್ಯಶಾಸ್ತ್ರ , ಭೂ ವಿಜ್ಞಾನ,
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ
ಸಂಖ್ಯಾಶಾಸ್ತ್ರ ಅಥವಾ
ಜೀವಶಾಸ್ತ್ರದಲ್ಲಿ ಪದವಿ ಪಡೆದವರು
ಅರ್ಜಿ ಸಲ್ಲಿಸಬಹುದು. ಅರಣ್ಯ ರಕ್ಷಕ
ಹುದ್ದೆ (50)ಗಳಿಗೆ ದ್ವಿತೀಯ ಪಿಯುಸಿ
ಅಥವಾ ತತ್ಸಮಾನ ಶಿಕ್ಷಣ
ಹೊಂದಿದವರು ಹಾಗೂ ಅರಣ್ಯ
ವೀಕ್ಷಕ ಹುದ್ದೆ (25)ಗಳಿಗೆ ಎಸ್ಸೆಸ್ಸೆಲ್ಸಿ
ಅಥವಾ ತತ್ಸಮಾನ ಶಿಕ್ಷಣ ಪಡೆದವರು
ಅರ್ಜಿ ಸಲ್ಲಿಸಬಹುದು.
ಒಲಿಂಪಿಕ್ಸ್ ಏಷ್ಯನ್ ಕ್ರೀಡಾಕೂಟ,
ವಿಶ್ವ ಚಾಂಪಿಯನ್ಶಿಪ್, ರಾಷ್ಟ್ರೀಯ,
ಅಂತರ್ ವಿವಿ, ದಕ್ಷಿಣ ವಿಭಾಗದ
ಚಾಂಪಿಯನ್/ 19 ವರ್ಷಕ್ಕಿಂತ ಕಡಿಮೆ
ವಯೋಮಾನದವರಿಗಾಗಿ ನಡೆಯುವ
ವಿವಿಧ ಚಾಂಪಿಯನ್ಶಿಪ್/
ರಾಷ್ಟ್ರಮಟ್ಟದ ಅಂತರ್ವಿವಿ
ಕ್ರೂಡಾಕೂಟಗಳಲ್ಲಿ ಪ್ರಶಸ್ತಿ
ಗೆದ್ದವರು ಅರ್ಜಿ ಸಲ್ಲಿಸಲು
ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗ
ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ,
ಮೀಸಲಾತಿ ಅಭ್ಯರ್ಥಿಗಳಿಗೆ 50 ರೂ.
ಅರ್ಜಿ ಶುಲ್ಕ ವಿಧಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
2015, ಆಗಸ್ಟ್ 19
ಅರಣ್ಯ ಇಲಾಖೆಯ ವೆಬ್ಸೈಟ್
ಮೂಲಕವೇ ಆನ್ಲೈನ್ ಅರ್ಜಿ
ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ
ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್
www.aranya.gov.in ಗೆ ಸಂಪರ್ಕಿಸಿ.
Comments
Post a Comment