ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಪೊಲೀಸ್ ಪೇದೆ ನೇಮಕಾತಿ

ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಪೊಲೀಸ್ ಪೇದೆ ನೇಮಕಾತಿ.

ಬೆಂಗಳೂರು, ಜುಲೈ 25: ಕರ್ನಾಟಕ ರಾಜ್ಯ ಪೊಲೀಸ್ 2015ರ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 490 ಹುದ್ದೆಗಳನ್ನು ತುಂಬಲು ಅಧಿಸೂಚನೆ ಹೊರಡಿಸಲಾಗಿದೆ. ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳು ಲಭ್ಯವಿದ್ದು ಅರ್ಹ ಅಭ್ಯರ್ಥಿಗಳು ಜುಲೈ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರುಗಳಲ್ಲಿ ಒಟ್ಟಾರೆ 490 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಯೋಮಿತಿ, ಅರ್ಜಿ ವಿವರ, ವಿದ್ಯಾರ್ಹತೆ ಇನ್ನಿತರ ವಿವರಗಳು ಮುಂದಿವೆ.
ಒಟ್ಟಾರೆ ಹುದ್ದೆಗಳು: 490
* ಬಳ್ಳಾರಿ : 92 ಹುದ್ದೆಗಳು
* ಬೀದರ್: 93
* ಕಲಬುರಗಿ : 166
* ಕೊಪ್ಪಳ : 48
* ರಾಯಚೂರು : 91

ವಯೋಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ 19-25 ವರ್ಷ ಹಾಗೂ ಎಸ್ ಸಿ/ಎಸ್ ಟಿ/ ಕೆಟಗೆರಿ 01/2ಎ/2ಬಿ/3ಎ/3ಬಿ (28/07/2015ಕ್ಕೆ ಅನ್ವಯವಾಗುವಂತೆ) 19-27 ವರ್ಷ.

ವಿದ್ಯಾರ್ಹತೆ:
ಪಿಯುಸಿ, 12ನೇ ತರಗತಿ(ಸಿಬಿಎಸ್ ಸಿ, ಐಸಿಎಸ್ ಇ ಹಾಗೂ ಇತರೆ ಎಸ್ಎಸ್ ಇ) ಅಥವಾ ಸಮಾನಂತರ. ಆಯ್ಕೆ ಪ್ರಕ್ರಿಯೆ: ಸಹನೆ, ಪರಿಶ್ರಮ ಪರೀಕ್ಷೆ, ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಅರ್ಜಿ

ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು, 2ಎ, 2ಬಿ, 3ಎ, 3ಬಿ- 250 ರು, ಎಸ್ ಸಿ, ಎಸ್ ಟಿ ಕೆಟಗೆರಿ 01 ಅಭ್ಯರ್ಥಿಗಳು 100 ರು ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಮೈಸೂರು/ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್) ಮಾತ್ರ ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಸುವುದು ಹೇಗೆ?:
ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ತುಂಬಿ ಆನ್ ಲೈನ್ ನಲ್ಲಿ ಸಲ್ಲಿಸಬಹುದು.

* ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28/07/2015

* ಅರ್ಜಿ ಶುಲ್ಕ ಸಲ್ಲಿಕೆಗೆ ಕೊನೆ ದಿನಾಂಕ : 29/07/2015

* ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಲು ಕ್ಲಿಕ್ ಮಾಡಿ

* Current Recruitment ಗೆ ಹೋಗಿ

* New application ಕ್ಲಿಕ್ ಮಾಡಿ ನಿಯಮಗಳನ್ನು ಓದಿ

* ಅರ್ಜಿ ತುಂಬಿ ಸಲ್ಲಿಸಿದ ಮೇಲೆ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಲಭ್ಯವಿರುವ ಇತರೆ ಹುದ್ದೆಗಳು:

*ಶಸ್ತ್ರಾಸ್ತ್ರ ಮೀಸಲು ಪಡೆ ಸಬ್ ಇನ್ಸ್ ಪೆಕ್ಟರ್ (ಆರ್ ಎಸ್ ಐ, CAR/DAR) 13 ಹುದ್ದೆಗಳು, * ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸಬ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್ (ಸಿವಿಎಲ್ ) 46 ಹುದ್ದೆಗಳು.

FOLLOW <space > EDUCATIONGKNEWS

To 9248948837

Send one time msg u get daily free education gk news in ur basic mobile

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು