ಟ್ವೀಟರ್ ಇಂಟರ್ಫೇಸ್ ಇದೀಗ ಕನ್ನಡದಲ್ಲಿ:


ಹೊಸದಿಲ್ಲಿ: ಕನ್ನಡ ಸಹಿತ ಮೂರು
ಭಾರತೀಯ ಭಾಷೆಗಳಲ್ಲಿ
ಶುಕ್ರವಾರದಿಂದ ಟ್ವೀಟರ್
ಇಂಟರ್ಫೇಸ್
ಆರಂಭಗೊಂಡಿವೆ.
ಇದರಿಂದ ಕೇವಲ ಕನ್ನಡದಲ್ಲಿ
ಟ್ವೀಟ್ ಮಾಡುವುದು ಮಾತ್ರವಲ್ಲದೇ,
ಟ್ವೀಟರ್ನ
ಪ್ರತಿಯೊಂದೂ ಸೂಚನೆಗಳೂ
ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಗೋಚರಿಸಲಿದೆ.
ಇಂಟರ್ನೆಟ್ ಮತ್ತು ಆ್ಯಂಡ್ರಾಯಿಡ್
ಮೊಬೈಲ್ಗಳು ಗುಜರಾತಿ, ಮರಾಠಿ ಮತ್ತು
ತಮಿಳಿನಲ್ಲಿರುವ ಈ ಇಂಟರ್ಫೇಸ್ ಅನ್ನು
ಬೆಂಬಲಿಸುತ್ತವೆ. ಟ್ವೀಟ್, ಚಿತ್ರ
ಸೇರಿಸಿ, ಸ್ಥಳ ನಮೂದಿಸಿ...ಮುಂತಾದ ಎಲ್ಲ
ಸೂಚನೆಗಳೂ ಆಯಾ ಭಾಷೆಗಳಲ್ಲಿಯೇ ಗೋಚರಿಸಲಿವೆ,
ಎಂದು ಟ್ವೀಟರ್ ಬ್ಲಾಗ್ ಪೋಸ್ಟ್
ಹೇಳಿದೆ.
ಟ್ವೀಟರ್ ಭಾಷಾಂತರ ಕೇಂದ್ರದ
ಮೂಲಕ ಭಾಷಾಂತರವನ್ನು ಭಾಗಶಃ
ಅಳವಡಿಸಲಾಗಿದೆ. ಅಕಸ್ಮಾತ್ ಆಯಾ ಭಾಷೆಗಳನ್ನು
ನಿಮ್ಮ ಪೋನ್ಗಳು ಟ್ವೀಟರ್ ಅನ್ನು
ಬೆಂಬಲಿಸದೇ ಹೋದಲ್ಲಿ, ಈ ಕೇಂದ್ರದ
ಸಹಾಯ ಪಡೆಯಬಹುದು.
ಈಗಾಗಲೇ ಹಿಂದಿ ಮತ್ತು ಬಂಗಾಳಿಯಲ್ಲಿ
ಈ ಸೌಲಭ್ಯವಿದ್ದು, ನಾಲ್ಕು ಹೊಸ
ಭಾಷೆಗಳ ಸೇರ್ಪಡೆಯಿಂದ ಒಟ್ಟು ಆರು
ಭಾರತೀಯ ಭಾಷೆಗಳಲ್ಲಿ
ಟ್ವೀಟರ್ ಲಭ್ಯವಾದಂತೆ ಆಗಿದೆ.
ನಿಮ್ಮ ಆ್ಯಂಡ್ರಾಯಿಡ್ ಫೋನ್ನಲ್ಲಿ
ಆರಿಸಿಕೊಂಡ ಭಾಷೆಯೇ
ಟ್ವೀಟರ್ನಲ್ಲಿಯೂ
ಕಾಣಿಸಿಕೊಳ್ಳಲಿದೆ. ಇನ್ಯಾವ ಬೇರೆ
ಸೆಟ್ಟಿಂಗ್ನ ಅಗತ್ಯವೂ ಇರುವುದಿಲ್ಲ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024