Facebook now used by half of world's online users:
ಅರ್ಧ ಜಗತ್ತನ್ನೆ ತಲುಪಿದ ಫೇಸ್ಬುಕ್
-
ವಾಷಿಂಗ್ಟನ್: ವಿಶ್ವದ ಅರ್ಧದಷ್ಟು
ಜನಸಂಖ್ಯೆ ಸಾಮಾಜಿಕ ಜಾಲತಾಣ ಫೇಸ್ಬುಕ್
ಬಳಸುತ್ತಿದ್ದಾರೆ ಎಂದು ಇತ್ತೀಚಿನ
ಸಮೀಕ್ಷೆಯಿಂದ
ತಿಳಿದುಬಂದಿದೆ.
ಮೊಬೈಲ್ ಇಂಟರ್ನೆಟ್
ವ್ಯಾಪ್ತಿಯು ದಿನದಿಂದ ದಿನಕ್ಕೆ
ಹೆಚ್ಚಾಗುತ್ತಿರುವುದೇ ಫೇಸ್ಬುಕ್ ಬಳಕೆದಾರರ
ಸಂಖ್ಯೆ ಧಿಡೀರನೆ ಏರಿಕೆಯಾಗಲು
ಕಾರಣ ಎಂದು ಸರ್ವೆ ತಿಳಿಸಿದೆ.
ಫೇಸ್ಬುಕ್ ಸಂಸ್ಥೆಯ ಪ್ರಕಾರ ತಿಂಗಳಿಗೆ
ಒಮ್ಮೆ ಫೇಸ್ಬುಕ್ ಬಳಕೆ ಮಾಡುವವರ ಸಂಖ್ಯೆ
149 ಕೋಟಿ ಇದೆ ಎಂದು ತಿಳಿದುಬಂದಿದೆ.
ಅದೂ ಅಲ್ಲದೆ ಈ ಸಂಖ್ಯೆಯು ಜಾಗತಿಕವಾಗಿ
ಇಂಟರ್ನೆಟ್ ಬಳಸುವ 3 ಮಿಲಿಯನ್
ಜನಸಂಖ್ಯೆಯ ಅರ್ಧದಷ್ಟಿದೆ
ಎನ್ನಲಾಗಿದೆ.
ಶೇ. 65ರಷ್ಟು ಬಳಕೆದಾರರು ಪ್ರತಿದಿನವೂ ಫೇಸ್ಬುಕ್
ಬಳಸುತ್ತಿದ್ದಾರೆ. ಐವರಲ್ಲಿ ಒಬ್ಬರು ಫೇಸ್ಬುಕ್ನಲ್ಲಿ
ಖಾತೆ ಹೊಂದಿದ್ದಾರೆ. ಶೇ.
39ರಷ್ಟಿರುವ ಮಾಸಿಕ ಸಕ್ರಿಯ
ಬಳಕೆದಾರರಿಂದಲೇ ಕಂಪನಿಗೆ 4.04
ಶತಕೋಟಿ ಲಾಭವಾಗಿದೆ ಎಂದು ತಿಳಿದುಬಂದಿದೆ.
Comments
Post a Comment