Karnataka ranked no.1 in implementing Swachh Bharat Abhiyaan

ಸ್ವಚ್ಛ ಭಾರತ ಜಾಗೃತಿಯಲ್ಲಿ ಕರ್ನಾಟಕ
ನಂ.1
ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಬಗ್ಗೆ
ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ
ಕಾರ್ಯಕ್ರಮದ ಮೊದಲ
ಸುತ್ತಿನಲ್ಲಿ ಕರ್ನಾಟಕ ಅಭೂತಪೂರ್ವ ಸಾಧನೆ
ತೋರಿದ್ದು, 15 ರಾಜ್ಯಗಳ ಪೈಕಿ
ಮೊದಲ ಸ್ಥಾನದಲ್ಲಿದೆ.
ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ,
ಗೋವಾ ಹಾಗೂ ಆಂಧ್ರಪ್ರದೇಶ
ರಾಜ್ಯಗಳು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತ
ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ
ಮೊದಲ ಸಾಲಿನಲ್ಲಿದ್ದು, ಕರ್ನಾಟಕ
ನಂ.1 ಸ್ಥಾನ
ಪಡೆದುಕೊಂಡಿದೆ.
ಸ್ವಚ್ಛ ಭಾರತ ಅಭಿಯಾನದ ಕುರಿತು ನಗರ
ಪ್ರದೇಶಗಳಲ್ಲಿ ಅರಿವು ಮೂಡಿಸುವ ಸಲುವಾಗಿ
ನಗರಾಭಿವೃದ್ಧಿ ಸಚಿವಾಲಯವು 15 ರಾಜ್ಯಗಳು
ಮತ್ತು ಕೇಂದ್ರೀಯ
ಪ್ರಾಂತ್ಯಗಳನ್ನು ಆಯ್ಕೆ
ಮಾಡಿಕೊಂಡಿತ್ತು. ಅದರಲ್ಲಿ
ಆರು ರಾಜ್ಯಗಳು ಉತ್ತಮ ಫಲಿತಾಂಶ
ನೀಡಿದ್ದು, ಕರ್ನಾಟಕದ ಪ್ರತಿಕ್ರಿಯೆ
ಅತ್ಯುತ್ತಮವಾಗಿದೆ.
15 ರಾಜ್ಯ ಹಾಗೂ ಕೇಂದ್ರೀಯ
ಪ್ರಾಂತ್ಯಗಳ 1,129 ನಗರ
ಸ್ಥಳೀಯ ಸಂಸ್ಥೆಗಳಲ್ಲಿ ಈ
ಕಾರ್ಯಕ್ರಮ
ಅನುಷ್ಠಾನಗೊಳಿಸಿದ್ದು, ಮಕ್ಕಳಿಗೆ
ಸ್ವಚ್ಛ ಭಾರತ ಅಭಿಯಾನ, ಸ್ವಚ್ಛತೆ ಬಗ್ಗೆ
ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಅರಿವು ಮೂಡಿಸಲಾಗಿದೆ.
ಒಟ್ಟು 14,141 ಶಾಲೆಗಳಿಂದ 3,53,788
ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ
ಭಾಗವಹಿಸಿದ್ದಾರೆ. ಕರ್ನಾಟಕ 96,524, ದೆಹಲಿ
47,000, ತಮಿಳು ನಾಡು 45,650, ಮಧ್ಯ ಪ್ರದೇಶ
45,302, ಗೋವಾ 35,000 ಹಾಗೂ
ಆಂಧ್ರ ಪ್ರದೇಶದಿಂದ 30,871
ವಿದ್ಯಾರ್ಥಿಗಳು
ಪಾಲ್ಗೊಂಡಿದ್ದಾರೆ. ಸ್ಪರ್ಧೆಯ
ಬಹುಮಾನದ ಒಟ್ಟು ಮೊತ್ತ 54.95
ಲಕ್ಷ ರೂ.ಗಳನ್ನು ಸದ್ಯದಲ್ಲೆ ವಿಜೇತರಿಗೆ
ವಿತರಿಸಲಾಗುವುದು ಎಂದು ಸಚಿವಾಲಯದ
ಅಧಿಕಾರಿಗಳು ತಿಳಿಸಿದ್ದಾರೆ.
***
ಆಗಸ್ಟ್​ನಲ್ಲಿ ಎರಡನೇ ಸುತ್ತು
ಎರಡನೇ ಸುತ್ತಿನ ಸ್ಪರ್ಧೆ ಆಗಸ್ಟ್​ನಲ್ಲಿ
ನಡೆಯಲಿದ್ದು, ಗುಜರಾತ್​ನಿಂದ 15,431,
ಮಹಾರಾಷ್ಟ್ರ 7083, ಪಂಜಾಬ್ 5,000,
ಜಮ್ಮು ಮತ್ತು ಕಾಶ್ಮೀರ 4,000,
ಹರಿಯಾಣದಿಂದ 2476 ವಿದ್ಯಾರ್ಥಿಗಳು
ಪಾಲ್ಗೊಳ್ಳಲಿದ್ದಾರೆ. 66.009
ಕೋಟಿ ರೂಗಳ ಸ್ವಚ್ಛ ಭಾರತ
ಅಭಿಯಾನದಲ್ಲಿ ನಗರ ಪ್ರದೇಶಗಳಲ್ಲಿ ಜಾಗೃತಿ
ಮೂಡಿಸುವುದು ಮೊದಲ
ಆಧ್ಯತೆಯಾಗಿದೆ. 1,800
ಕೋಟಿ ರೂಗಳನ್ನು ಮಾಹಿತಿ,
ಶಿಕ್ಷಣ ಹಾಗೂ ಸಂಪರ್ಕಕ್ಕಾಗಿ
ಮೀಸಲಿಡಲಾಗಿದ್ದು, ಈಗಾಗಲೇ 160
ಕೋಟಿ ರೂ.ಗಳನ್ನು ಸಚಿವಾಲಯ
ಬಿಡುಗಡೆಗೊಳಿಸಿದೆ

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು