Man Booker prize 2015: ANURADHA among 13 writers ಮ್ಯಾನ್ ಬುಕರ್ ಪ್ರಶಸ್ತಿ೨೦೧೫ : ಸಂಭವವನೀಯರ ಪಟ್ಟಿಗೆ ಅನುರಾಧಾ ರಾಯ್ಗೆ


ಲಂಡನ್ (ಐಎಎನ್ಎಸ್): ಭಾರತದ ಲೇಖಕಿ
ಅನುರಾಧಾ ರಾಯ್ ಸೇರಿದಂತೆ 13 ಮಂದಿ
2015ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್
ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅನುರಾಧಾ ರಾಯ್ ಅವರ 'ಸ್ಲೀಪಿಂಗ್
ಆನ್ ಜುಪಿಟರ್' ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿ ಪಟ್ಟಿಯಲ್ಲಿನ 13 ಕೃತಿಗಳಲ್ಲಿ ಬ್ರಿಟನ್
ಲೇಖಕ ಟೊಮ್ ಮ್ಯಾಕ್ಕರ್ತಿ ಅವರ
'ಸಟೈನ್ ಐಸ್ಲಾಂಡ್', ಆ್ಯಂಡ್ರ್ಯೂ ಒ
ಹಗನ್ ಅವರ 'ದಿ ಇಲ್ಯುಮಿನೇಶನ್', ಭಾರತ ಮೂಲದ
ಲೇಖಕ ಸಂಜೀವ್
ಸಹೊತ ಅವರ 'ದಿ ಇಯರ್ ಆಫ್ ದಿ
ರನ್ವೇಸ್' ಸೇರಿದೆ.
ಐವರು
ಸದಸ್ಯರನ್ನೊಳಗೊ
ಂಡ ತೀರ್ಪುಗಾರರ ತಂಡ ಒಟ್ಟು
156 ಕೃತಿಗಳಲ್ಲಿ 13 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ
ಮಾಡಿದೆ.
ಇದರಲ್ಲಿ ಆಯ್ದ 6 ಕೃತಿಗಳ ಅಂತಿಮ
ಪಟ್ಟಿಯನ್ನು ಸೆಪ್ಟೆಂಬರ್ನಲ್ಲಿ
ಪ್ರಕಟಿಸಲಾಗುತ್ತದೆ. ಅಕ್ಟೋಬರ್ 13ರಂದು
ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಲಾಗುತ್ತದೆ.
ಮ್ಯಾನ್ ಬುಕರ್ ಪ್ರಶಸ್ತಿಯನ್ನು
ಮೊದಲ ಬಾರಿಗೆ 1969ರಲ್ಲಿ
ನೀಡಲಾಗಿತ್ತು. ಆಂಗ್ಲ
ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ
ನೀಡಲಾಗುತ್ತದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು