Q. "Algorithms" is a documentary film about ------chess players. A)deaf B)dumb C)lame D)blind Ans : ?

'ಅಲ್ಗಾರಿಥಮ್ಸ್'
ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆ:
ನವದೆಹಲಿ: ಅಂಧ ಚೆಸ್ ಆಟಗರಾರ ಕುರಿತು
ನಿರ್ಮಿಸಿರುವ 'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರವನ್ನು
ಭಾರತದ ಮೆಟ್ರೋ ನಗರಗಳಲ್ಲಿ ಆಗಸ್ಟ್
೨೧ರಂದು ಬಿಡುಗಡೆ ಮಾಡಲಾಗುವುದು.
ಸಮಾಜಶಾಸ್ತ್ರಜ್ಞ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ
ಇಯಾನ್ ಮೆಕ್ ಡೋನಾಲ್ಡ್ ನಿರ್ದೇಶಿಸಿರುವ ಈ ಸಿನೆಮಾ
ಪಿವಿಆರ್ ನಿರ್ದೇಶಕ ವಿರಳ ವಿಭಾಗದಲ್ಲಿ
ಬಿಡುಗಡೆಯಾಗಲಿದ್ದು ದೆಹಲಿ, ಮುಂಬೈ,
ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು
ಕೊಚ್ಚಿಯಲ್ಲಿ ಪ್ರದರ್ಶನ
ಕಾಣಲಿದೆ.
ಎಲೆ ಮರೆ ಕಾಯಿಯಾಗಿರುವ ಭಾರತದಲ್ಲಿನ
ಅಂಧ ಚೆಸ್ ಲೋಕದ ಬಗ್ಗೆ ಈ ಸಿನೆಮ
ಮಾಡಲಾಗಿದೆ. ಮೂರು ವರ್ಷಗಳಿಗಿಂತಲೂ ಹೆಚ್ಚು
ಕಾಲ ಚಿತ್ರೀಕರಣ ಮಾಡಿರುವ ಈ
ಸಾಕ್ಷ್ಯಚಿತ್ರ ಮೂರು ಯುವ ಅಂಧ ಚೆಸ್
ಆಟಗಾರರ ಸುತ್ತ ಹೆಣೆಯಲಾಗಿದೆ. ಅವರಲ್ಲಿ ಒಬ್ಬ
ರಾಷ್ಟ್ರಮಟ್ಟದ ಹಾಗೂ ವಿಶ್ವ ಮಟ್ಟದ ಚೆಸ್
ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ
ಕಥೆಯನ್ನು ಕೂಡ ಹೇಳಲಿದೆಯಂತೆ.
ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಈ
ಸಾಕ್ಷ್ಯಚಿತ್ರದಲ್ಲಿ ಅಂಧ ಚೆಸ್ ಆಟಗಾರರಾದ
ಚಾರುದತ್ತ ಜಾಧವ್, ದರ್ಪಣ್ ಇನಾನಿ, ಸಾಯಿ ಕೃಷ್ಣ
ಮತ್ತು ಅನಂತ್ ಕುಮಾರ್ ನಾಯಕ್
ಕಾಣಿಸಿಕೊಳ್ಳಲಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು