The Karnataka State Civil Services (Regulation of Transfer of Teachers) (Second Amendment) Bill, 2015

passed by the assembly with a
vote.
The bill was tabled by Minister for
Primary and Secondary Education
Kimmane Rathnakar. The bill considers
it necessary to amend Karnataka State
Civil Services (Regulation of transfer of
teachers) Act, 2007 to provide
opportunity to transfer teachers
appointed after May 4 2005, outside unit
of seniority once in service.
It also aims to provide transfer
opportunity to the teachers to the place
where their spouses are working in
aided educational institutions outside
the unit of seniority.
Responding to various suggestions
made by the members, Rathnakar said
a comprehensive amendment will be
brought to the Act in the future.
PTI


ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ
ಒಪ್ಪಿಗೆ
ಪ್ರಜಾವಾಣಿ ವಾರ್ತೆ
ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಸಚಿವ
ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ತಿನ
ಕಾರ್ಯದರ್ಶಿ ವಿ.ಶ್ರೀಶ, ಸಚಿವ
ಎಸ್.ಆರ್.ಪಾಟೀಲ್ ಪರಸ್ಪರ
ಮಾತನಾಡುತ್ತಿರುವುದನ್ನು ಮುಖ್ಯಮಂತ್ರಿ
ಸಿದ್ದರಾಮಯ್ಯ ವೀಕ್ಷಿಸಿದರು.
ಕಾಂಗ್ರೆಸ್ ಸದಸ್ಯ ವೀರಣ್ಣ
ಮತ್ತಿಕಟ್ಟಿ ಅವರೂ ಚಿತ್ರದಲ್ಲಿದ್ದಾರೆ
ಬೆಂಗಳೂರು: 2005ರ ಮೇ 4ರ ನಂತರ
ನೇಮಕವಾದ ಶಿಕ್ಷಕರಿಗೂ, ಅವರು
ನೇಮಕಗೊಂಡ ಶೈಕ್ಷಣಿಕ
ಘಟಕದಿಂದ ಹೊರಗಿನ
ಘಟಕಕ್ಕೆ ಒಂದು ಸಲಕ್ಕೆ ವರ್ಗಾವಣೆಗೆ
ಹೊಂದಲು ಅವಕಾಶ ಕಲ್ಪಿಸುವ
‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ
ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ
2015’ನ್ನು ಶುಕ್ರವಾರ ವಿಧಾನಸಭೆಯಲ್ಲಿ
ಅಂಗೀಕರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ
ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ,
‘2007ರ ಮೂಲ ಕಾಯ್ದೆಯ ಸೆಕ್ಷನ್ 6ರ ಪ್ರಕಾರ
2005ರ ಮೇ 4ಕ್ಕಿಂತ ಮೊದಲು
ನೇಮಕಗೊಂಡ ಶಿಕ್ಷಕರು ಮಾತ್ರ
ಮೂಲ ನೇಮಕಾತಿ ಘಟಕದಿಂದ
ಹೊರಗೆ ವರ್ಗಾವಣೆ
ಹೊಂದಬಹುದಿತ್ತು. ಈ
ಷರತ್ತನ್ನು ಕೈಬಿಡಲು ಕಳೆದ ಅಧಿವೇಶನದಲ್ಲೇ
ಒಪ್ಪಿಕೊಂಡಿದ್ದೆ. ಆದರೆ,
ಅದನ್ನು ತಿದ್ದುಪ ಡಿಯಲ್ಲಿ ಅಳವಡಿಸಿ
ಕೊಂಡಿರಲಿಲ್ಲ. ಈ ಲೋಪ
ಸರಿಪಡಿಸುವ ಸೀಮಿತ ಉದ್ದೇಶ ದಿಂದ
ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ’
ಎಂದು ವಿವರಿಸಿದರು.
‘ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿ ದವರು ಮಾತ್ರ
ಘಟಕದಿಂದ ಹೊರಗೆ ವರ್ಗಾವಣೆ
ಹೊಂದಲು ಅರ್ಹರು. ಶಿಕ್ಷಕರ
ಕೋರಿಕೆಯ ಮೇಲೆ, ಕೌನ್ಸೆಲಿಂಗ್ ಮೂಲಕವೇ
ವರ್ಗಾವಣೆ ನಡೆಸಲಾ ಗುತ್ತದೆ. ಈ ವರ್ಗಾವಣೆ ಮೂಲ
ಕಾಯ್ದೆಯಲ್ಲಿ ನಿಗದಿಪಡಿಸಿದ ಗರಿಷ್ಠ ಪರಿಮಿತಿಗೆ
ಒಳಪಡಲಿದೆ ಎಂಬ ಅಂಶವನ್ನು
ತಿದ್ದುಪಡಿಯಲ್ಲಿ ಸೇರಿಸ ಲಾಗಿದೆ’ ಎಂದರು.
‘ವರ್ಗಾವಣೆ ಅಪೇಕ್ಷಿಸುವವರ ಪತಿ/ ಪತ್ನಿ
ಘಟಕದಿಂದ ಹೊರಗಿನ ಅನು
ದಾನಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದರೆ, ಕೋರಿಕೆಯ ಮೇರೆಗೆ ಆ ಸ್ಥಳಕ್ಕೆ
ಅಥವಾ ಸಮೀಪದ ಸ್ಥಳಕ್ಕೆ ವರ್ಗಾಯಿಸಲು
ಅವಕಾಶ ಇದೆ. ಆದರೆ ಇದು ನಗರ ಪ್ರದೇಶಕ್ಕೆ
ಅನ್ವಯಿಸು ವುದಿಲ್ಲ’ ಎಂದು ಅವರು
ಸ್ಪಷ್ಟಪಡಿ ಸಿದರು.
ಆಕ್ಷೇಪ: ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ,
‘ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ಶಿಕ್ಷಕರ
ವರ್ಗಾವಣೆ ಆರಂಭಿ ಸಿರುವುದು ಸರಿಯಲ್ಲ.
ಇದರಿಂದ ವಿದ್ಯಾ ರ್ಥಿಗಳಿಗೆ
ತೊಂದರೆಯಾಗುತ್ತದೆ’
ಎಂದು ಆಕ್ಷೇಪಿಸಿದರು.
‘ತಿದ್ದುಪಡಿ ಮಸೂದೆಗೆ ರಾಜ್ಯ ಪಾಲರು ಅಂಕಿತ
ಹಾಕಿ ಮರಳಿಸುವಾಗ ವಿಳಂಬವಾಯಿತು.
ಅಷ್ಟರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ
ಘೊಷಣೆ ಆಯಿತು. ಹಾಗಾಗಿ ಈ
ಪ್ರಕ್ರಿಯೆ ವಿಳಂಬ ಆಗಿದೆ’ ಎಂದು
ಸಚಿವರು ಸಮಜಾಯಿಷಿ ನೀಡಿದರು.
‘ಪರಸ್ಪರ ವರ್ಗಾವಣೆಗೆ ಮುಕ್ತ ಅವ ಕಾಶ
ನೀಡಬೇಕು. ಶಿಕ್ಷಕರಿಗೆ
ಗ್ರಾಮೀಣ ಸೇವೆ
ಕಡ್ಡಾಯಗೊ ಳಿಸುವು ದಾಗಿ ಸಚಿವರು
ಹೇಳಿಕೆ ನೀಡಿದ್ದಾರೆ. ಇವೆಲ್ಲ ವನ್ನು
ಜಾರಿಗೊಳಿಸಲು
ಇನ್ನೊಂದು ತಿದ್ದುಪಡಿ
ತರಲಾಗುತ್ತ ದೆಯೇ’ ಎಂದು ಕಾಗೇರಿ ಪ್ರಶ್ನಿಸಿದರು.
ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ಆಕ್ಷೇಪ
ವ್ಯಕ್ತಪಡಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ,
‘ಕೌನ್ಸೆಲಿಂಗ್ ಮೂಲಕ ಶಿಕ್ಷಕರು ಬಯಸಿದ ಕಡೆಗೆ
ವರ್ಗಾವಣೆಗೆ ಅವಕಾಶ ಕಲ್ಪಿಸುತ್ತೀರಿ. ಕೆಲವು
ಊರುಗಳಲ್ಲಿ ಕಾರ್ಯ ನಿರ್ವಹಿಸಲು ಯಾರೂ
ಮುಂದೆ ಬರುವುದಿಲ್ಲ. ಅಂತಹ ಕಡೆಗೆ ಏನು
ಮಾಡುತ್ತೀರಿ’ ಎಂದು ಪ್ರಶ್ನಿಸಿದರು.
‘ಕೌನ್ಸೆಲಿಂಗ್ ಜಾರಿಗೆ ಬಂದ ಬಳಿಕ
ವರ್ಗಾವಣೆ ಪಾರದರ್ಶಕವಾಗಿ ನಡೆ ಯುತ್ತಿದೆ. ಖಾಲಿ
ಹುದ್ದೆಗಳನ್ನು ಭರ್ತಿ ಮಾಡಿದರೆ ಈ ಸಮಸ್ಯೆ ಎದುರಾ
ಗುವುದಿಲ್ಲ’ ಎಂದು ಕಾಗೇರಿ ತಿಳಿಸಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು