ಇಸ್ರೋ ಸಾಧನೆಗೆ ಮತ್ತೊಂದು ಕಿರೀಟ: ಹೆಮ್ಮೆಯ 25ನೇ ಉಪಗ್ರಹ(GST-6) ಯಶಸ್ವಿ ಉಡಾವಣೆ
ಭಾರತದ ಬಾಹ್ಯಾಕಾಶ ಸಂಸ್ಥೆ
ಇಸ್ರೋ ಪಾಲಿಗೆ ಇಂದು ಮಹತ್ವದ
ದಿನವಾಗಿದೆ. ಇಂದು ಸಂಪೂರ್ಣವಾಗಿ
ಸ್ವದೇಶಿ ನಿರ್ಮಿತ ಭಾರತದ ಹೆಮ್ಮೆಯ
25ನೇ ಉಪಗ್ರಹ ಯಶಸ್ವಿಯಾಗಿ
ಉಡಾವಣೆ ನಡೆಸಿದೆ
ಆಂಧ್ರಪ್ರದೇಶದ ಶ್ರೀ
ಹರಿಕೋಟಾ ಉಡಾವಣೆ
ನಿಲ್ದಾಣದಿಂದ ಉಪಗ್ರಹ ಗಗನಕ್ಕೆ
ಚಿಮ್ಮಿದೆ ಎಂದು ಇಸ್ರೋ
ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೋ ನಿರ್ಮಿಸಿದ ಭಾರತದ 25ನೇ
ನೂತನ ಸಂವಹನ ಉಪಗ್ರಹ ಜಿಸ್ಯಾಟ್-
6 ಇಂದು ಸಂಜೆ ಸತೀತ್ ಧವನ್
ಬಾಹ್ಯಾಕಾಶ ಕೇಂದ್ರದಿಂದ
ಉಡಾವಣೆಗೊಳಿಸಲಾಯಿತು.
ಈ ಮೂಲಕ ಭಾರತ ಬಾಹ್ಯಾಕಾಶ
ಇತಿಹಾಸದಲ್ಲಿ ಮತ್ತೊಂದು
ಮೈಲಿಗಲ್ಲು ಸ್ಥಾಪಿಸಿದೆ. ಈ
ಉಪಗ್ರಹವು ಸೇನೆಗೆ ಸಂಬಂಧಿಸಿದ
ಕಾರ್ಯಾಚರಣೆ ನೆರವು ನೀಡಲಿದ್ದು,
ಸಂವಹನಕ್ಕೆ ಉಪಕಾರಿಯಾಗಲಿದೆ.
Comments
Post a Comment