ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕ
ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಗೆ
ಆಯ್ಕೆಯಾದ 98 ನಗರಗಳ ಪಟ್ಟಿಯನ್ನು
ನಗರಾಭಿವೃದ್ಧಿ ಮತ್ತು ಸಂಸದೀಯ
ವ್ಯವಹಾರಗಳ ಖಾತೆಯ ಸಚಿವ
ವೆಂಕಯ್ಯ ನಾಯ್ಡು
ಬಿಡುಗಡೆಗೊಳಿಸಿದ್ದಾರೆ.
ಮಂಗಳೂರು, ಹುಬ್ಬಳ್ಳಿ-
ಧಾರವಾಡ, ಶಿವಮೊಗ್ಗ, ದಾವಣಗೆರೆ,
ಬೆಳಗಾವಿ ಮತ್ತು ತುಮಕೂರು
ನಗರಗಳನ್ನು ರಾಜ್ಯ ಸರ್ಕಾರ
ಸ್ಮಾರ್ಟ್ ಸಿಟಿ ಯೋಜನೆ ಶಿಫಾರಸು
ಮಾಡಿತ್ತು. ಈ ಶಿಫಾರಸಿನಂತೆ
ಕೇಂದ್ರ ಸರ್ಕಾರ ಈ ನಗರಗಳನ್ನು
ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಿದೆ.
ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ
ಯೋಜನೆಗೆ ಆಯ್ಕೆ ಆಗಿದ್ದರೆ,
ಯೋಜನೆಯಲ್ಲಿ ಉತ್ತರ ಪ್ರದೇಶ
ಮತ್ತು ತಮಿಳುನಾಡಿಗೆ ಅಗ್ರ ಸ್ಥಾನ
ಸಿಕ್ಕಿದೆ.
ಉತ್ತರ ಪ್ರದೇಶದ 13, ತಮಿಳುನಾಡಿನ
12, ಮಹಾರಾಷ್ಟ್ರ 10,
ಮಧ್ಯಪ್ರದೇಶ 7, ಗುಜರಾತ್ 6,
ಬಿಹಾರ, ಪಂಜಾಬ್,
ಆಂಧ್ರಪ್ರದೇಶದಲ್ಲಿ ತಲಾ 3
ನಗರಗಳನ್ನು ನಗರಾಭಿವೃದ್ಧಿ ಇಲಾಖೆ
ಆಯ್ಕೆ ಮಾಡಿದೆ.
ನಗರಗಳ ಪಟ್ಟಿ ಬಿಡುಗಡೆಗೊಳಿಸಿ
ಮಾತನಾಡಿದ ವೆಂಕಯ್ಯ ನಾಯ್ಡು
ಯೋಜನೆಯ ನೀಲಿ ನಕ್ಷೆ ತಯಾರಿಗೆ
ಕೆಲ ದಿನದಲ್ಲೇ 2 ಕೋಟಿ ರೂ
ಬಿಡುಗಡೆ ಮಾಡಲಾಗುವುದು.
ಮುಂದಿನ ಐದು ವರ್ಷ ಪ್ರತಿ ವರ್ಷಕ್ಕೆ
ಕೇಂದ್ರದಿಂದ 100 ಕೋಟಿ ರೂ
ಬಿಡುಗಡೆ ಮಾಡುತ್ತೇವೆ. ಒಟ್ಟಾರೆ
ಯೋಜನೆಗೆ ಕೇಂದ ಸರ್ಕಾರ 48
ಸಾವಿರ ಕೋಟಿ ರೂ. ಮೀಸಲಿಟ್ಟಿದೆ
ಎಂದು ತಿಳಿಸಿದರು.
Comments
Post a Comment