ಮನೆ ಕೆಲಸಗಾರರಿಗಿನ್ನು 9,000 ರೂ. ಮಾಸಿಕ ವೇತನ ಕಡ್ಡಾಯ!
ಹೊಸದಿಲ್ಲಿ: ಮನೆ ಕೆಲಸ
ಮಾಡುವವರಿಗೆ ಅಚ್ಛೇ ದಿನ್ ಆಗಮಿಸುವ ಎಲ್ಲ
ಲಕ್ಷಣಗಳು ಗೋಚರಿಸುತ್ತಿದ್ದು, ಸಂಪೂರ್ಣ
ಸಮಯ ಕಾರ್ಯನಿರ್ವಹಿಸುವ ಮನೆಗೆಲಸದವರಿಗೆ
ಇನ್ನು ಮುಂದೆ ಕನಿಷ್ಠ 9,000 ರೂ. ಮಾಸಿಕ
ವೇತನ ನೀಡುವುದು ಕಡ್ಡಾಯ. ಅಷ್ಟೇ ಅಲ್ಲ
ವರ್ಷದಲ್ಲಿ 15 ದಿನಗಳ ವೇತನ ಸಹಿತ
ರಜೆಯಲ್ಲದೇ, ಹೆರಿಗೆ ರಜೆಯನ್ನೂ
ನೀಡುವುದನ್ನೂ ಸರಕಾರ
ಕಡ್ಡಾಯಗೊಳಿಸುತ್ತಿದೆ.
ಗೃಹೀಯ ನೌಕರರ ಹಿತಾರಕ್ಷಣೆಗಾಗಿ ಎನ್ಡಿಎ
ಸರಕಾರ ರಾಷ್ಟ್ರೀಯ
ನೀತಿಯೊಂದನ್ನು
ಜಾರಿಗೊಳಿಸುತ್ತಿದ್ದು, ಅವರ
ಭವಿಷ್ಯದ ದೃಷ್ಟಿಯಿಂದ ಸಾಮಾಜಿಕ ಭದ್ರತಾ
ವಿಮೆ, ಲೈಂಗಿಕ ಕಿರುಕುಳದ ವಿರುದ್ಧ ಕಠಿಣ
ಕ್ರಮಗಳು ಹಾಗೂ ಜೀತದಾಳು ಪದ್ಧತಿಗೆ ಫುಲ್
ಸ್ಟಾಪ್ ಇಡಲು ಪಣ ತೊಟ್ಟಿದೆ.
ಇದರಿಂದ ವಯಸ್ಕರಾದಂತೆ ಹಾಗೂ ಇತರೆ
ಕಾರಣಗಳಿಂದ ಅವಕು ಕೆಲಸ
ಕಳೆದುಕೊಳ್ಳುವ ಭೀತಿ
ಇರುವುದಿಲ್ಲ. ಈ ನೀತಿಯಡಿಯಲ್ಲಿ
ಸಾಮಾಜಿಕ ಭದ್ರತಾ ವಿಮೆಗೆ ಉದ್ಯೋಗದಾತರು
ಕಡ್ಡಾಯವಾಗಿ ತಮ್ಮ
ಕೊಡುಗೆಯನ್ನು
ನೀಡಬೇಕಾಗುತ್ತದೆ.
ನೌಕರರು ಹೆಚ್ಚಿನ ಶಿಕ್ಷಣ ಪಡೆಯಲು, ಸುರಕ್ಷಿತ
ಕಾರ್ಯ ಸ್ಥಳ ಹೊಂದಲು ಹಾಗೂ
ಅವರ ಕುಂದು ಕೊರತೆಗಳನ್ನೂ
ನೀಗಿಸಿಕೊಳ್ಳಬಹುದು.
ಅಲ್ಲದೇ ಈ ನೀತಿಯಡಿಯಲ್ಲಿ
ಉದ್ಯೋಗಿಗಳು ಹಾಗೂ ಉದ್ಯೋಗದಾತರು ತಮ್ಮದೇ
ಆದ ಗುಂಪುಗಳನ್ನು
ರಚಿಸಿಕೊಂಡು,
ತಮ್ಮಿಚ್ಛೆಯಂತೆ ಕರಾರು
ಮಾಡಿಕೊಳ್ಳುವ ಅವಕಾಶವೂ ಇದೆ. ಈ
ಒಪ್ಪಂದಕ್ಕೆ ಕಾನೂನು ಪಾವಿತ್ರ್ಯತೆ ಇರಲಿದೆ.
ಈ ನೀತಿಗೆ ಸಂಬಂಧಿಸಿದ
ವಿಧೇಯಕವನ್ನು ಕಾರ್ಮಿಕ ಕಲ್ಯಾಣ ಪ್ರಧಾನ
ನಿರ್ದೇಶಕರು ತಯಾರಿಸಿದ್ದು, ಕಾರ್ಮಿಕ ಸಚಿವ
ಬಂಡಾರು ದತ್ತಾತ್ರೇಯ ಅವರಿಗೆ ಒಪ್ಪಿಸಲಾಗಿದೆ.
ಅಂತಾರಾಷ್ಟ್ರೀಯ ಕಾರ್ಮಿಕ
ಸಂಘಟನೆಯ ನೀತಿಗಳಿಗೆ
ಸಮಾನವಾಗಿರುವ ಈ 'ಗೃಹ ನೌಕರರ
ರಾಷ್ಟ್ರೀಯ ನೀತಿ'ಯನ್ನು
ಮುಂದಿನ ಅಧಿವೇಶನದಲ್ಲಿ ಕೇಂದ್ರ
ಮಂಡಿಸಲಿದೆ.
Comments
Post a Comment