ALL INDIA PMT/PDT ENTRANCE EXAMINATION 2015 results - Announced on 17 th Aug 2015
ಎಐಪಿಎಂಟಿ ಫಲಿತಾಂಶ ಪ್ರಕಟ
: -ನವದೆಹಲಿ(ಐಎಎನ್ ಎಸ್): ವೈದ್ಯಕೀಯ
ಮತ್ತು ದಂತ ವೈದ್ಯಕೀಯ
ಕೋರ್ಸ್ಗಳಿಗೆ ಜುಲೈ 25ರಂದು ನಡೆದ ಅಖಿಲ ಭಾರತ
ಪೂರ್ವ ವೈದ್ಯಕೀಯ
ಪರೀಕ್ಷೆಯ (ಎಐಪಿಎಂಟಿ)
ಫಲಿತಾಂಶವನ್ನು ಸಿಬಿಎಸ್ಇ ತನ್ನ ವೆಬ್ಸೈಟ್
cbseresults.nic.in ನಲ್ಲಿ ಸೋಮವಾರ
ಪ್ರಕಟಿಸಿದೆ.
ಸಿಬಿಎಸ್ಇ 3,800 ಸೀಟುಗಳಿಗೆ ಜುಲೈ
25ರಂದು ಮರು ಪರೀಕ್ಷೆ ನಡೆಸಿದ್ದು,
ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು
ಸಿಬಿಎಸ್ಇ ಅಧಿಕಾರಿಗಳು ತಿಳಿಸಿದ್ದಾರೆ.
6,32,625 ಅಭ್ಯರ್ಥಿಗಳು ಪರೀಕ್ಷೆಗೆ
ನೋಂದಾಯಿಸಿಕೊಂಡಿದ್ದರು.
4,22,859 ಅಭ್ಯರ್ಥಿಗಳು ಪರೀಕ್ಷಾ
ಪ್ರವೇಶ ಪತ್ರಗಳನ್ನು ಆನ್ಲೈನ್ನಲ್ಲಿ ಡೌನ್ಲೋಡ್
ಮಾಡಿಕೊಂಡಿದ್ದಾರೆ. 50
ನಗರಗಳಲ್ಲಿನ 1,065 ಕೇಂದ್ರಗಳಲ್ಲಿ
ಪರೀಕ್ಷೆ ನಡೆಸಲಾಗಿತ್ತು ಎಂದು ಅವರು
ಮಾಹಿತಿ ನೀಡಿದ್ದಾರೆ.
ಮೇ 3ರಂದು ನಡೆದ ಎಐಪಿಎಂಟಿ
ಪರೀಕ್ಷೆಯಲ್ಲಿ
ದೊಡ್ಡಮಟ್ಟದ ಅಕ್ರಮ ನಡೆದಿದೆ
ಎಂದು ಆರೋಪಿಸಿದ್ದ ಕೆಲವರು ಮರು
ಪರೀಕ್ಷೆ ನಡೆಸುವಂತೆ
ಸುಪ್ರೀಂಕೋರ್ಟ್ ಮೊರೆ
ಹೋಗಿದ್ದರು.
ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್
ನಾಲ್ಕು ವಾರಗಳಲ್ಲಿ ಮರು ಪರೀಕ್ಷೆ
ನಡೆಸುವಂತೆ ಸಿಬಿಎಸ್ಇಗೆ ಜೂನ್ 15ರಂದು
ಸೂಚನೆ ನೀಡಿತ್ತು. 19ರಂದು ನಡೆಸಿದ
ಮೇಲ್ಮನವಿಯ ವಿಚಾರಣೆ ವೇಳೆ ಹೆಚ್ಚಿನ ಕಾಲಾವಕಾಶ
ನೀಡಿ, ಮರು ಪರೀಕ್ಷೆ ನಡೆಸಿ
ಜುಲೈ 17ರ ಒಳಗೆ ಫಲಿತಾಂಶ
ಪ್ರಕಟಿಸುವಂತೆ ಸಿಬಿಎಸ್ಇಗೆ ನಿರ್ದೇಶನ
ನೀಡಿತ್ತು.
...
Comments
Post a Comment