Anupam Kher appointed UN ambassador of ‘He for She’ campaign for gender equality ವಿಶ್ವಸಂಸ್ಥೆಯ "ಅವಳಿಗಾಗಿ ಅವನು" ಅಭಿಯಾನಕ್ಕೆ ಅನುಪಮ್ ಖೇರ್ ರಾಯಭಾರಿ:

ನ್ಯೂಯಾರ್ಕ್: ವಿಶ್ವಸಂಸ್ಥೆಯ ಹಿಫಾರ್ಶಿ
(ಅವಳಿಗಾಗಿ ಅವನು) ಅಭಿಯಾನದ ರಾಯಭಾರಿಯಾಗಿ
ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್
ಆಯ್ಕೆಯಾಗಿದ್ದಾರೆ. ಈ ಅಭಿಯಾನದಡಿಯಲ್ಲಿ
ಮಹಿಳೆಯರು ಹಾಗೂ ಪುರುಷರ ನಡುವಿನ ಅಸಮಾನತೆ
ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಕಳೆದ ಸಂಜೆ ಇಲ್ಲಿ ನಡೆದ
ಸಮಾರಂಭವೊಂದರಲ್ಲಿ
ವಿಶ್ವಸಂಸ್ಥೆಯ ಮಹಿಳಾ ಉಪ ಕಾರ್ಯಕಾರಿ
ನಿರ್ದೇಶಕಿ ಲಕ್ಷ್ಮಿ ಪುರಿ, ಖೇರ್ ಅವರ ನೇಮಕವನ್ನು
ಘೋಷಿಸಿದರು.
'ಇಂಥದ್ದೊಂದು
ಗೌರವದಿಂದ ಸಂತೋಷವಾಗಿದ್ದು, ಲಿಂಗ
ಅಸಮಾನತೆ ಹೋಗಲಾಡಿಸಲು ಯತ್ನಿಸುತ್ತಿರುವ
ಸಂಸ್ಥೆಯ ಯತ್ನಕ್ಕೆ ಸಂಪೂರ್ಣವಾಗಿ
ಸಹಕರಿಸುವೆ,' ಎಂದು ಹೇಳಿದ್ದಾರೆ.
'ಇಂಥದ್ದೊಂದು
ಬದಲಾವಣೆ ಮೊದಲು
ಮನೆಯಿಂದಲೇ ಆರಂಭವಾಗಬೇಕು.
ನಿಮ್ಮ ಮಗಳನ್ನು ನೀವು ಹೇಗೆ ನೋಡುತ್ತಿರಿ
ಎಂಬುದು ಬಹಳ ಮುಖ್ಯ. ಮಗನಿಗಿಂತ
ಮಗಳನ್ನು ವಿಭಿನ್ನವಾಗಿ ಕಾಣುವ ಪರಿಪಾಠ ತಪ್ಪಬೇಕು,'
ಎಂದು ಖೇರ್ ಅಭಿಪ್ರಾಯಪಟ್ಟಿದ್ದಾರೆ.
ಪೌರುಷತ್ವವೆಂದರೆ ಮಹಿಳೆಯರನ್ನು
ದಮನಿಸುವುದು ಎಂದೇ ಭಾವಿಸಿರುವ ಜನರ
ಮನೋಭಾವ ಹಾಸ್ಯಾಸ್ಪದವಾಗಿದೆ ಎಂದಿರುವ ಖೇರ್,
'ಕೇವಲ ಶಕ್ತಿ ಹೀನ ಪುರುಷ ಮಾತ್ರ ತನ್ನ
ಪೌರುಷತ್ವವನ್ನು ಹೆಣ್ಣಿನ ಮುಂದೆ
ತೋರಿಸುತ್ತಾನೆಯೇ ವಿನಾ, ಶಕ್ತಿಶಾಲಿ ಪುರುಷ ಮಹಿಳೆ
ಪ್ರಭಾವಿಯಾಗಿ ಬೆಳೆಯಲು ಅನುವು
ಮಾಡಿಕೊಡುತ್ತಾನೆ,' ಎಂದು
ಅಭಿಪ್ರಾಯಪಟ್ಟಿದ್ದಾರೆ.
'ಭಾರತೀಯರ ಮನೋಸ್ಥಿತಿಯೇ
ಮಹಿಳೆಯರಿಗಿಂತ ಪುರುಷರು
ಶಕ್ತಿಶಾಲಿಗಳೆಂದಿದ್ದು, ಇದೀಗ
ನಿಧಾನವಾಗಿ ಬದಲಾಗುತ್ತಿದೆ. ಮತ್ತಷ್ಟು
ಬದಲಾವಣೆಯ ಅಗತ್ಯವಿದ್ದು, ಇದು ರಾತ್ರೋ ರಾತ್ರಿ
ಸಂಭವಿಸುವ ಘಟನೆಯಲ್ಲ. ಹೆಚ್ಚು ಸಮಯ
ತೆಗೆದುಕೊಳ್ಳಬಹುದು,'
ಎಂದಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು