ಸ್ವಿಸ್ ಪರ್ವತ ಶಿಖರವೇರಿ ತ್ರಿವರ್ಣ ಧ್ವಜ ಹಾರಿಸಿದ ಅರುಣಿಮಾ Arunima Sinha Becomes First Female Amputee to Climb the Swiss Alps on our 69th Independence Day.
ಪುಣೆ: ರೈಲು ಅಪಘಾತದಲ್ಲಿ ತನ್ನ
ಒಂದು ಕಾಲನ್ನು
ಕಳೆದುಕೊಂಡರೂ ಯಶಸ್ಸಿನ
ಔನ್ನತ್ಯಕ್ಕೇರುವ ತನ್ನ ಸಾಧನೆಯ
ಮಾರ್ಗಕ್ಕೆ ಅದೊಂದು
ಕೊರತೆಯೇ ಅಲ್ಲ ಎಂಬುದನ್ನು
ಸಾಬೀತುಪಡಿಸುವಂತೆ 8,848
ಮೀಟರ್ ಎತ್ತರದ ಎವರೆಸ್ಟ್ ಪರ್ವತವನ್ನು
ಏರಿ, ಆ ಸಾಧನೆಯನ್ನು ಮಾಡಿರುವ
ಭಾರತದ ಮೊತ್ತ ಮೊದಲ
ವಿಕಲಾಂಗ ಸಾಹಸೀ ಮಹಿಳೆ ಎಂಬ
ಅನನ್ಯ ಹೆಗ್ಗಳಿಕೆಗೆ ಪಾತ್ರರಾಗಿರುವ
ಅರುಣಿಮಾ ಸಿನ್ಹಾ ಅವರು
ಮೊನ್ನೆ ಮೊನ್ನೆ ಭಾರತದ
ಸ್ವಾತಂತ್ರ್ಯ ದಿನಾಚರಣೆಯ
ದಿನದಂದು ಇಡಿಯ ದೇಶವೇ ಹೆಮ್ಮೆ
ಪಡುವಂತಹ ಇನ್ನೊಂದು
ಸಾಧನೆಯನ್ನು ಮಾಡಿದ್ದಾರೆ.
ಅದೆಂದರೆ ಆಕೆ ಸ್ವಿಟ್ಸರ್ಲಂಡ್ನ ಆಲ್ಪ್ಸ್
ಪರ್ವತ ಶ್ರೇಣಿಯಲ್ಲಿರುವ ಮೌಂಟ್
ರೋಸಾ (4,634 ಮೀಟರ್) ಪರ್ವತ
ಶಿಖರವನ್ನು ಯಶಸ್ವಿಯಾಗಿ ಏರಿ ಅಲ್ಲಿ
ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
ಅರುಣಿಮಾ ಅವರು ತನ್ನ ಈ
ಸಾಧನೆಯನ್ನು ತನ್ನ ಯಶಸ್ಸಿಗಾಗಿ
ಪ್ರಾರ್ಥಿಸಿದ ಅಗಣಿತ ಭಾರತೀಯರಿಗೆ
ಮುಡಿಪಾಗಿರಿಸಿದ್ದಾರೆ ಎಂದು ಆಕೆಯ
ಕುಟುಂಬದವರು ಹುಟ್ಟೂರಾದ
ಅಂಬೇಡ್ಕರ್ ನಗರದಲ್ಲಿ
ಮಾಧ್ಯಮದವರೊಂದಿಗೆ
ಮಾತನಾಡುತ್ತಾ ಆನಂದ
ತುಂದಿಲರಾಗಿ ಹೇಳಿದರು.
ರೈಲು ಅಪಘಾತದಲ್ಲಿ ತನ್ನ ಒಂದು
ಕಾಲನ್ನು ಕಳೆದುಕೊಂಡಿದ್ದ
ಅರುಣಿಮಾ ಅವರು ವಿಶ್ವದ ಎಲ್ಲ ಏಳು
ಖಂಡಗಳಲ್ಲಿನ ಅತ್ಯುನ್ನತ
ಶಿಖರಗಳನ್ನು ಏರುವ ಸಾಧನೆಯನ್ನು
ತಾನು ಮಾಡಿಯೇ ಸಿದ್ಧ ಎಂಬ
ಸಂಕಲ್ಪವನ್ನು ತೊಟ್ಟಿದ್ದರು.
ಈ ಸಂಕಲ್ಪಕ್ಕೆ ಬದ್ಧರಾಗಿ ಅರುಣಿಮಾ
ಅವರು ಈಗಾಗಲೇ ಆಫ್ರಿಕದಲ್ಲಿನ
ಮೌಂಟ್ ಕಿಲಿಮ್ಯಾಂಜರೋ (5,895
ಮೀಟರ್ ಎತ್ತರ), ರಶ್ಯದ ಎಲ್ಬ್ರೂಸ್
ಪರ್ವತ ಶಿಖರ (5,642 ಮೀ.) ಮತುತ
ಆಸ್ಟ್ರೇಲಿಯದಲ್ಲಿನ
ಕೊಸಿಯೂಝ್ಕೋ ಪರ್ವತ ಶಿಖರ
(2,228 ಮೀ.) ಏರಿದ್ದಾರೆ.
ಇದೀಗ ಅರುಣಿಮಾ ಅವರ ಮುಂದಿನ
ಗುರಿ ದಕ್ಷಿಣ ಅಮೆರಿಕದಲ್ಲಿನ
ಅಕನ್ಕ್ಯಾಗುವಾ (6,960 ಮೀ.)
ಪರ್ವತ ಶಿಖರವನ್ನು ಏರುವುದು.
ಇದು ಏಶ್ಯದ ಹೊರಗಿರುವ ವಿಶ್ವದ
ಅತ್ಯುನ್ನತ ಪರ್ವತ ಶಿಖರವಾಗಿದೆ.
2011ರ ಎಪ್ರಿಲ್ನಲ್ಲಿ ಓಡುತ್ತಿದ್ದ
ರೈಲನಿಂದ ಕಳ್ಳರು ಅರುಣಿಮಾ
ಅವರ ಕೈಯಲ್ಲಿದ್ದ ಬ್ಯಾಗ್ ಮತ್ತು
ಚಿನ್ನದ ಚೈನನ್ನು ಕಸಿಯುವಾಗ
ಆಕೆಯನ್ನು ರೈಲಿನಿಂದ ಹೊರಗೆ
ದೂಡಿದ್ದರು. ಪರಿಣಾಮವಾಗಿ ಆಕೆ ತನ್ನ
ಒಂದು ಕಾಲನ್ನು ಕಳೆದುಕೊಂಡ
ಶಾಶ್ವತ ಅಂಗವಿಕಲೆಯಾಗಿದ್ದರು.
ಆ ವರೆಗೆ ಯುವ ವಾಲಿಬಾಲ್
ಚಾಂಪ್ಯನ್ ಆಗಿದ್ದ ಅರುಣಿಮಾ
ಅವರು ಈ ಆಘಾತಕಾರಿ ಘಟನೆಯ ಬಳಿಕ
ಕೃತಕ ಕಾಲಿನ ಬಲದಲ್ಲಿ,
ದಂತಕತೆಯಾಗಿರುವ ಮಹಿಳಾ
ಪರ್ವತಾರೋಹಿ ಬಚೇಂದ್ರಿ ಪಾಲ್
ಅವರ ಕೈಕೆಳಗಿನ
ಪರ್ವತಾರೋಹಿಯಾಗಿ ಎವರೆಸ್ಟ್
ಪರ್ವತವನ್ನು ಏರಿ ಅಪ್ರತಿಮ
ಸಾಧನೆಯನ್ನು ದಾಖಲಿಸಿದ್ದರು.
ಅರುಣಿಮಾ ಅವರು ಬರೆದಿರುವ
"ಬಾರ್ನ್ ಎಗೇನ್ ಆನ್ ದಿ ಮೌಂಟೇನ್'
ಎಂಬ ಪುಸ್ತಕವನ್ನು ಆಧರಿಸಿ
ಬಾಲಿವುಡ್ ಚಿತ್ರ ನಿರ್ದೇಶಕ ಫರ್ಹಾನ್
ಅಖ್ಥರ್ ಅವರು ಅರುಣಿಮಾ ಜೀವನ
ಕುರಿತ ಸಿನೇಮಾವೊಂದನ್ನು
ನಿರ್ಮಿಸುವ ಸಿದ್ಧತೆಯಲ್ಲಿದ್ದಾರೆ.
Comments
Post a Comment