Aurangzeb Road in Lutyen’s Delhi will soon be known as A.P.J. Abdul Kalam Road

ದೆಹಲಿಯ ಔರಂಗಜೇಬ್ ರಸ್ತೆಗೆ ಅಬ್ದುಲ್
ಕಲಾಂ ಹೆಸರು ಮರುನಾಮಕರಣ
:
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ
ನವದೆಹಲಿ: ದೆಹಲಿಯಲ್ಲಿರುವ ಔರಂಗಜೇಬ್
ರಸ್ತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ
ಅವರ ಹೆಸರನ್ನು ಮರುನಾಮನರಣ ಮಾಡಲು
ನವದೆಹಲಿ ಪುರಸಭೆ ಒಪ್ಪಿಗೆ ನೀಡಿದೆ.
ಇತ್ತೀಚೆಗೆ ನಿಧನರಾದ ಅಬ್ದುಲ್ ಕಲಾಂ
ಅವರಿಗೆ ಗೌರವ ಸೂಚಕವಾಗಿ ದೆಹಲಿಯ
ಔರಂಗಜೆಬ್ ರಸ್ತೆಗೆ ಅಬ್ದುಲ್ ಕಲಾಂ
ಅವರ ಹೆಸರನ್ನಿಡಲು ಸಾರ್ವಜನಿಕರಿಂದ ಒತ್ತಡ
ಉಂಟಾಗಿತ್ತು. ಈ ವಿಷಯವನ್ನು ದೆಹಲಿ
ಪುರಸಭೆ ಮುಂದಿಡಲಾಗಿತ್ತು, ಪ್ರಸ್ತಾವನೆಗೆ
ಪುರಸಭೆ ಅವಿರೋಧ ಒಪ್ಪಿಗೆ ಸೂಚಿಸಿದ್ದು
ಶೀಘ್ರವೇ ದೆಹಲಿಯ ಔರಂಗಜೇಬ್
ರಸ್ತೆ ಅಬ್ದುಲ್ ಕಲಾಂ ಅವರ ಹೆಸರನ್ನು
ನಾಮಕರಣ ಮಾಡಲಾಗುತ್ತದೆ ಎಂದು
ಎನ್.ಡಿ.ಎಂ.ಸಿ ಉಪಾಧ್ಯಕ್ಷ ಕರಣ್
ಸಿಂಗ್ ತನ್ವರ್ ಹೇಳಿದ್ದಾರೆ.
ಎನ್.ಡಿ.ಎಂ ಸಿ ಔರಂಗಜೇಬ್ ರಸ್ತೆಗೆ
ಅಬ್ದುಲ್ ಕಲಾಂ ಅವರ ಹೆಸರನ್ನು
ಮರುನಾಮಕರಣ ಮಾಡಲು ಒಪ್ಪಿಗೆ ನೀಡಿದೆ
ಎಂದು ದೆಹಲಿ ಸಿಎಂ ಅರವಿಂದ್
ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024