ಶೈಕ್ಷಣಿಕ ಸಾಲಕ್ಕೆ ವಿನೂತನ ಜಾಲತಾಣ
ಶೈಕ್ಷಣಿಕ ಸಾಲಕ್ಕೆ ವಿನೂತನ ಜಾಲತಾಣ
(PSGadyal Teacher Vijayapur).
ನವದೆಹಲಿ (ಪಿಟಿಐ): ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ವಿನೂತನ ಜಾಲತಾಣ ಆರಂಭಿಸಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಆಗಸ್ಟ್ 15 ರಂದು ' ವಿದ್ಯಾಲಕ್ಷ್ಮಿ ಪೋರ್ಟಲ್‌ಗೆ (wwww.vidyalakshmi.co.inn) ಚಾಲನೆ ನೀಡಲಾಗಿದೆ.
ಎಸ್‌ಬಿಐ, ಐಡಿಬಿಐ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್‌್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಜಾಲತಾಣದೊಂದಿಗೆ ತಮ್ಮ ಸಾಲ ನೀಡುವ ವ್ಯವಸ್ಥೆಯನ್ನು ಸೇರಿಸಿಕೊಂಡಿವೆ.
' ಇದೇ ಮೊದಲ ಬಾರಿ ಇಂತಹ ಏಕ ಗವಾಕ್ಷಿ ವ್ಯವಸ್ಥೆಯನ್ನು ಶುರುಮಾಡಲಾಗಿದೆ. ಶೈಕ್ಷಣಿಕ ಸಾಲ, ಬ್ಯಾಂಕುಗಳು ಯೋಜನೆಗಳ ಮಾಹಿತಿ ಇಲ್ಲಿ ದೊರೆಯುತ್ತದೆ' ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿದ್ಯಾಲಕ್ಷ್ಮಿ ಪೋರ್ಟ್‌ನಲ್ಲಿ ಈವರೆಗೆ ಒಟ್ಟು 13 ಬ್ಯಾಂಕುಗಳು 22 ಶೈಕ್ಷಣಿಕ ಸಾಲ ಯೋಜನೆಗಳನ್ನು ನೋಂದಾಯಿಸಿಕೊಂಡಿವೆ. ವಿದ್ಯಾರ್ಥಿಗಳು ಹಣಕಾಸಿನ ನೆರವು ಇಲ್ಲ ಎನ್ನುವ ಕಾರಣಕ್ಕಾಗಿ ಉನ್ನತ ವ್ಯಾಸಂಗವನ್ನು ಕೈಬಿಡಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ಜಾಲತಾಣದ ವೈಶಿಷ್ಟ್ಯ
* ಬ್ಯಾಂಕುಗಳು ನೀಡುವ ಶಿಕ್ಷಣ ಸಾಲದ ಮಾಹಿತಿ
* ಶೈಕ್ಷಣಿಕ ಸಾಲಕ್ಕಾಗಿ ವಿವಿಧ ಬ್ಯಾಂಕುಗಳಿಗೆ ಅರ್ಜಿ ಹಾಕುವ ವ್ಯವಸ್ಥೆ
* ಬ್ಯಾಂಕುಗಳು ವಿದ್ಯಾರ್ಥಿಗಳ ಸಾಲದ ಅರ್ಜಿಯ ಪರಿಶೀಲನೆ ಪ್ರಕ್ರಿಯೆ ಅಪ್‌ಲೋಡ್ ಮಾಡುವ ವ್ಯವಸ್ಥೆ
* ವಿದ್ಯಾರ್ಥಿಗಳಿಗೆ ಇ–ಮೇಲ್ ಮೂಲಕ ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದ ಅಹವಾಲು ಸಲ್ಲಿಕೆ/ ಪ್ರಶ್ನೆ ಕೇಳುವ ಅವಕಾಶ
Comments
Post a Comment