ಬಿಬಿಎಂಪಿ: ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗೆಸ್ಸಿಗೆ ಮುಖಭಂಗ

ಬಿಬಿಎಂಪಿ: ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗೆಸ್ಸಿಗೆ ಮುಖಭಂಗ
(PSGadyal Teacher Vijayapur).

ಬೆಂಗಳೂರು, ಆಗಸ್ಟ್ 25: ಸಮೀಕ್ಷೆಗಳ ವರದಿಗಳನ್ನು ಸುಳ್ಳು ಮಾಡಿ, ಸಿದ್ದರಾಮಯ್ಯ ಅವರ ಅಬ್ಬರಕ್ಕೆ ಬ್ರೇಕ್ ಹಾಕಿರುವ ಬಿಜೆಪಿ ಮತ್ತೊಮ್ಮೆ ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ನೂರು ಸ್ಥಾನ ಗಳಿಸಿರುವ ಬಿಜೆಪಿ ಬಹುಮತ ಸಾಬೀತುಪಡಿಸಲು ಬೇಕಾದ ಮ್ಯಾಜಿಕ್ ನಂಬರ್ ಗಳಿಸಲಿದೆ.

ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದ ಚುನಾವಣೆಯ ಫಲಿತಾಂಶ ಆಗಸ್ಟ್ 25ರಂದು ಬಹಿರಂಗಗೊಂಡಿದೆ.

ಫಲಿತಾಂಶ:

ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ
ಈ ಸಮಯ (13.15)ಕ್ಕೆ ಫಲಿತಾಂಶ:
ಬಿಜೆಪಿ 100;
ಕಾಂಗ್ರೆಸ್ 75;
ಜೆಡಿಎಸ್ 14;
ಇತರೆ 8.

ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು ಬಿಜೆಪಿ 111 ಸ್ಥಾನ ಗಳಿಸಿತ್ತು. ಜೆಡಿಎಸ್ 15 ಸ್ಥಾನ ಪಡೆದಿತ್ತು. [ಬಿಬಿಎಂಪಿ ಫಲಿತಾಂಶ, 100 ಸ್ಥಾನಗಳಿಸಿದ ಬಿಜೆಪಿ]

ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು.

ಸಾಮಾನ್ಯ ಬಹುಮತಕ್ಕೆ:
ಅಧಿಕಾರ ಹಿಡಿಯಲು 126 ಸದಸ್ಯ ಬಲ ಬೇಕು. ಸದ್ಯದ ಪರಿಸ್ಥಿತಿಯಲ್ಲಿ 100 ಸ್ಥಾನ ಪಡೆದರೂ ಕನಸು ಕಾಣಬಹುದಾಗಿತ್ತು. ಈ 198 ವಾರ್ಡ್​ಗಳ ಜತೆಗೆ, 61 ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಸೇರಿ ಒಟ್ಟು 250 ಸದಸ್ಯ ಬಲದ ಪಾಲಿಕೆಯಲ್ಲಿ ಯಾರೇ ಅಧಿಕಾರ ಹಿಡಿಯಲು 126 ಸದಸ್ಯ ಬಲ ಬೇಕೇಬೇಕು.

@EDUCATIONGKNEWS.

ಕಾಂಗ್ರೆಸ್ 104 ಸ್ಥಾನ ಗೆಲ್ಲುವುದು ಅನಿವಾರ್ಯವಾಗಿತ್ತು. 28 ಶಾಸಕರು, ಸಂಸದರ ಬಲ ಹೊಂದಿರುವ ಬಿಜೆಪಿಗೆ 103 ಸ್ಥಾನ ಗೆಲ್ಲಬೇಕು. ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಗದ್ದುಗೆ ಅವಕಾಶ ಕಾಂಗ್ರೆಸ್​ಗೆ ಸಿಗುವ ನಿರೀಕ್ಷೆ ಇಟ್ಟುಕೊಂಡಿತ್ತು

ಒಂದು ವೇಳೆ ಬಿಜೆಪಿ 75ಕ್ಕಿಂತ ಕಡಿಮೆ ಬಂದರೆ ಬಿಜೆಪಿ ಬಿಬಿಎಂಪಿಯಲ್ಲಿ ಈ ಬಾರಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿಜೆಪಿ ಜೊತೆಗೆ ಜೆಡಿಎಸ್ ಕೈ ಜೋಡಿಸಿದರೆ ಮ್ಯಾಜಿಕ್ ನಂಬರ್ ದಾಟಬಹುದು ಸಲಿದೆ ಎಂಬ ಲೆಕ್ಕಾಚಾರ ಸುಳ್ಳಾಗಿದೆ. 119 ಸ್ಥಾನ ನಿರೀಕ್ಷೆ ಹೊಂದಿದ್ದ ಜೆಡಿಎಸ್ ಭಾರಿ ಮುಖಭಂಗ ಅನುಭವಿಸಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು