ಬೆಳಗಾವಿಗೆ ಮೆರುಗು ನೀಡಲಿರುವ ಲೇಸರ್ ಟೆಕ್ ಪಾರ್ಕ್: ತೇಲುವ ಸಂಗೀತ ಕಾರಂಜಿ (first in Ktak)
ಬೆಳಗಾವಿ: ಎದುರಿಗೆ
ಪ್ರಶಾಂತವಾಗಿರುವ ಕೆರೆಯ ನೀರು.
ಅದರ ಮಧ್ಯದಿಂದಲೇ ಚಿಮ್ಮುತ್ತ
ಸಂಗೀತದೊಂದಿಗೆ ನೃತ್ಯ
ಮಾಡುವ ಬಣ್ಣ ಬಣ್ಣದ ಕಾರಂಜಿ...
ಇದರ ಜೊತೆಗೆ ಬೆಳಗಾವಿಯ ಕಥೆ
ಹೇಳುವ ಲೇಸರ್ ಷೋ..!
ನಗರದ ಕೋಟೆ ಕೆರೆಗೆ
ವಾರಾಂತ್ಯದಲ್ಲಿ ಸಂಜೆಯ
ಹೊತ್ತು ಹೋದರೆ ಇನ್ನು
ಮುಂದೆ ಇಂಥ ಮನಮೋಹಕ
ದೃಶ್ಯಗಳನ್ನು
ಕಣ್ತುಂಬಿಕೊಳ್ಳಬಹುದು.
ಕೋಟೆ ಕೆರೆಯ ನಡುವೆ ತೇಲುವ
ಸಂಗೀತ ಕಾರಂಜಿಯನ್ನು
ಒಳಗೊಂಡ ಲೇಸರ್ ಟೆಕ್ ಪಾರ್ಕ್
ನಿರ್ಮಿಸಲಾಗಿದೆ. ಶನಿವಾರ ರಾತ್ರಿ ಇದರ
ಕಾರ್ಯ ಕ್ಷಮತೆಯನ್ನು
ಪರಿಶೀಲಿಸಲಾಯಿತು. ಮಂಗಳವಾರ
(ಆಗಸ್ಟ್ 18) ಸಂಜೆ
ಉದ್ಘಾಟನೆಗೊಳ್ಳಲಿದೆ.
ರಾಜ್ಯ ಸರ್ಕಾರವು ಮಹಾನಗರ
ಪಾಲಿಕೆಗೆ ಮೊದಲನೇ ಹಂತದ ₹100
ಕೋಟಿ ವಿಶೇಷ ಅನುದಾನ
ನೀಡಿದಾಗ ಈ ಅನುದಾನದಲ್ಲಿ ಸ್ವಲ್ಪ
ಹಣ ಬಳಸಿಕೊಂಡು ನಗರದಲ್ಲಿ
'ಲೇಸರ್ ಟೆಕ್ ಪಾರ್ಕ್' ಹಾಗೂ
'ಸಂಗೀತ ಕಾರಂಜಿ' ನಿರ್ಮಿಸಲು
ಉತ್ತರ ಕ್ಷೇತ್ರ ಶಾಸಕ ಫಿರೋಜ್
ಸೇಠ್ ಮುಂದಾದರು. ಒಟ್ಟು
₹1.67 ಕೋಟಿ ವೆಚ್ಚವಾಗಿದೆ.
ರಾಜ್ಯದಲ್ಲೇ ಪ್ರಥಮ: 'ಬೆಳಗಾವಿಯ
ಜನರಿಗೆ ವಿನೂತನ ಕೊಡುಗೆ
ನೀಡಬೇಕು ಎಂಬ
ಉದ್ದೇಶದಿಂದ ಇದನ್ನು
ನಿರ್ಮಿಸಿದ್ದೇವೆ. ಕುಟುಂಬದವರೆಲ್ಲ
ಒಟ್ಟಿಗೆ ಬಂದು ಸಂತೋಷದಿಂದ
ಕಾಲ ಕಳೆಯಬಹುದು. ಕೋಟೆ ಕೆರೆಯ
ಅಂಗಳದಲ್ಲಿ ನಿಂತು ಒಂದು
ಸಾವಿರಕ್ಕೂ ಹೆಚ್ಚು ಜನರು ಇದನ್ನು
ವೀಕ್ಷಿಸಬಹುದು.
ವಾರಾಂತ್ಯದಲ್ಲಿ ಉಚಿತವಾಗಿ
ಪ್ರದರ್ಶನ ಏರ್ಪಡಿಸಲಾಗುವುದು.
ಇದು ಬೆಳಗಾವಿಯ ಆಕರ್ಷಣೀಯ
ಸ್ಥಳವಾಗಿ ಮಾರ್ಪಡಲಿದೆ' ಎಂದು
ಫಿರೋಜ್ ಸೇಠ್ 'ಪ್ರಜಾವಾಣಿ'ಗೆ
ತಿಳಿಸಿದರು
ಬೆಳಗಾವಿ ದರ್ಶನ: 'ತೆಳುವಾದ ನೀರಿನ
ಪರದೆ ಮೇಲೆ ಲೇಸರ್ ಷೋ ಪ್ರದರ್ಶನ
ಇರುತ್ತದೆ. ಮೊದಲ ನಾಲ್ಕೈದು
ನಿಮಿಷ ಬೆಳಗಾವಿಯ ಇತಿಹಾಸ ಕುರಿತ
ಮಾಹಿತಿಯನ್ನು
ಪ್ರದರ್ಶಿಸಲಾಗುವುದು. ಮಹಾತ್ಮ
ಗಾಂಧಿ, ಸ್ವಾಮಿ ವಿವೇಕಾನಂದ,
ಏರ್ ಫೋರ್ಸ್, ಮರಾಠಾ ಲಘು
ಪದಾತಿದಳ, ವಿಶ್ವೇಶ್ವರಯ್ಯ
ತಾಂತ್ರಿಕ ವಿಶ್ವವಿದ್ಯಾಲಯ
ಸೇರಿದಂತೆ ಹಲವು ದೃಶ್ಯಗಳನ್ನು
ತೋರಿಸಲಾಗುತ್ತದೆ. ಜೊತೆಗೆ
ದೇಶದ ಸಂಸ್ಕೃತಿಯನ್ನು
ಬಿಂಬಿಸುವ ಹಾಗೂ ಮಕ್ಕಳಿಗಾಗಿ
ಪ್ರತ್ಯೇಕ ದೃಶ್ಯಾವಳಿಯನ್ನು
ಪ್ರದರ್ಶಿಸಲಾಗುತ್ತದೆ' ಎಂದು
ಬೆಂಗಳೂರಿನ ಲೇಸರ್ ಇವೆಂಟ್
ಪ್ರೈವೇಟ್ ಲಿಮಿಟೆಡ್ ಕಂಪೆನಿಯ
ವ್ಯವಸ್ಥಾಪಕ ನಿರ್ದೇಶಕ ಮಹೇಶ
ಬಾಬು ತಿಳಿಸಿದರು.
ಸಂಗೀತ ಕಾರಂಜಿ: ಹಲವು
ದೇಶಭಕ್ತಿ ಗೀತೆಗಳ ಹಿನ್ನೆಲೆ
ಸಂಗೀತದೊಂದಿಗೆ ಕಾರಂಜಿಯು
ನರ್ತನ ಮಾಡಲಿದೆ. ಸುಮಾರು 20
ಬಗೆಯ ಸಂಗೀತ ನೃತ್ಯ
ಪ್ರದರ್ಶನಗೊಳ್ಳಲಿದೆ. ಲೇಸರ್ ಷೋ
ಹಾಗೂ ಸಂಗೀತ ಕಾರಂಜಿ ಎರಡೂ
ಸೇರಿ ಒಟ್ಟು ಪ್ರದರ್ಶನದ ಅವಧಿ 40
ನಿಮಿಷ.
ಪ್ರಶಾಂತವಾಗಿರುವ ಕೆರೆಯ ನೀರು.
ಅದರ ಮಧ್ಯದಿಂದಲೇ ಚಿಮ್ಮುತ್ತ
ಸಂಗೀತದೊಂದಿಗೆ ನೃತ್ಯ
ಮಾಡುವ ಬಣ್ಣ ಬಣ್ಣದ ಕಾರಂಜಿ...
ಇದರ ಜೊತೆಗೆ ಬೆಳಗಾವಿಯ ಕಥೆ
ಹೇಳುವ ಲೇಸರ್ ಷೋ..!
ನಗರದ ಕೋಟೆ ಕೆರೆಗೆ
ವಾರಾಂತ್ಯದಲ್ಲಿ ಸಂಜೆಯ
ಹೊತ್ತು ಹೋದರೆ ಇನ್ನು
ಮುಂದೆ ಇಂಥ ಮನಮೋಹಕ
ದೃಶ್ಯಗಳನ್ನು
ಕಣ್ತುಂಬಿಕೊಳ್ಳಬಹುದು.
ಕೋಟೆ ಕೆರೆಯ ನಡುವೆ ತೇಲುವ
ಸಂಗೀತ ಕಾರಂಜಿಯನ್ನು
ಒಳಗೊಂಡ ಲೇಸರ್ ಟೆಕ್ ಪಾರ್ಕ್
ನಿರ್ಮಿಸಲಾಗಿದೆ. ಶನಿವಾರ ರಾತ್ರಿ ಇದರ
ಕಾರ್ಯ ಕ್ಷಮತೆಯನ್ನು
ಪರಿಶೀಲಿಸಲಾಯಿತು. ಮಂಗಳವಾರ
(ಆಗಸ್ಟ್ 18) ಸಂಜೆ
ಉದ್ಘಾಟನೆಗೊಳ್ಳಲಿದೆ.
ರಾಜ್ಯ ಸರ್ಕಾರವು ಮಹಾನಗರ
ಪಾಲಿಕೆಗೆ ಮೊದಲನೇ ಹಂತದ ₹100
ಕೋಟಿ ವಿಶೇಷ ಅನುದಾನ
ನೀಡಿದಾಗ ಈ ಅನುದಾನದಲ್ಲಿ ಸ್ವಲ್ಪ
ಹಣ ಬಳಸಿಕೊಂಡು ನಗರದಲ್ಲಿ
'ಲೇಸರ್ ಟೆಕ್ ಪಾರ್ಕ್' ಹಾಗೂ
'ಸಂಗೀತ ಕಾರಂಜಿ' ನಿರ್ಮಿಸಲು
ಉತ್ತರ ಕ್ಷೇತ್ರ ಶಾಸಕ ಫಿರೋಜ್
ಸೇಠ್ ಮುಂದಾದರು. ಒಟ್ಟು
₹1.67 ಕೋಟಿ ವೆಚ್ಚವಾಗಿದೆ.
ರಾಜ್ಯದಲ್ಲೇ ಪ್ರಥಮ: 'ಬೆಳಗಾವಿಯ
ಜನರಿಗೆ ವಿನೂತನ ಕೊಡುಗೆ
ನೀಡಬೇಕು ಎಂಬ
ಉದ್ದೇಶದಿಂದ ಇದನ್ನು
ನಿರ್ಮಿಸಿದ್ದೇವೆ. ಕುಟುಂಬದವರೆಲ್ಲ
ಒಟ್ಟಿಗೆ ಬಂದು ಸಂತೋಷದಿಂದ
ಕಾಲ ಕಳೆಯಬಹುದು. ಕೋಟೆ ಕೆರೆಯ
ಅಂಗಳದಲ್ಲಿ ನಿಂತು ಒಂದು
ಸಾವಿರಕ್ಕೂ ಹೆಚ್ಚು ಜನರು ಇದನ್ನು
ವೀಕ್ಷಿಸಬಹುದು.
ವಾರಾಂತ್ಯದಲ್ಲಿ ಉಚಿತವಾಗಿ
ಪ್ರದರ್ಶನ ಏರ್ಪಡಿಸಲಾಗುವುದು.
ಇದು ಬೆಳಗಾವಿಯ ಆಕರ್ಷಣೀಯ
ಸ್ಥಳವಾಗಿ ಮಾರ್ಪಡಲಿದೆ' ಎಂದು
ಫಿರೋಜ್ ಸೇಠ್ 'ಪ್ರಜಾವಾಣಿ'ಗೆ
ತಿಳಿಸಿದರು
ಬೆಳಗಾವಿ ದರ್ಶನ: 'ತೆಳುವಾದ ನೀರಿನ
ಪರದೆ ಮೇಲೆ ಲೇಸರ್ ಷೋ ಪ್ರದರ್ಶನ
ಇರುತ್ತದೆ. ಮೊದಲ ನಾಲ್ಕೈದು
ನಿಮಿಷ ಬೆಳಗಾವಿಯ ಇತಿಹಾಸ ಕುರಿತ
ಮಾಹಿತಿಯನ್ನು
ಪ್ರದರ್ಶಿಸಲಾಗುವುದು. ಮಹಾತ್ಮ
ಗಾಂಧಿ, ಸ್ವಾಮಿ ವಿವೇಕಾನಂದ,
ಏರ್ ಫೋರ್ಸ್, ಮರಾಠಾ ಲಘು
ಪದಾತಿದಳ, ವಿಶ್ವೇಶ್ವರಯ್ಯ
ತಾಂತ್ರಿಕ ವಿಶ್ವವಿದ್ಯಾಲಯ
ಸೇರಿದಂತೆ ಹಲವು ದೃಶ್ಯಗಳನ್ನು
ತೋರಿಸಲಾಗುತ್ತದೆ. ಜೊತೆಗೆ
ದೇಶದ ಸಂಸ್ಕೃತಿಯನ್ನು
ಬಿಂಬಿಸುವ ಹಾಗೂ ಮಕ್ಕಳಿಗಾಗಿ
ಪ್ರತ್ಯೇಕ ದೃಶ್ಯಾವಳಿಯನ್ನು
ಪ್ರದರ್ಶಿಸಲಾಗುತ್ತದೆ' ಎಂದು
ಬೆಂಗಳೂರಿನ ಲೇಸರ್ ಇವೆಂಟ್
ಪ್ರೈವೇಟ್ ಲಿಮಿಟೆಡ್ ಕಂಪೆನಿಯ
ವ್ಯವಸ್ಥಾಪಕ ನಿರ್ದೇಶಕ ಮಹೇಶ
ಬಾಬು ತಿಳಿಸಿದರು.
ಸಂಗೀತ ಕಾರಂಜಿ: ಹಲವು
ದೇಶಭಕ್ತಿ ಗೀತೆಗಳ ಹಿನ್ನೆಲೆ
ಸಂಗೀತದೊಂದಿಗೆ ಕಾರಂಜಿಯು
ನರ್ತನ ಮಾಡಲಿದೆ. ಸುಮಾರು 20
ಬಗೆಯ ಸಂಗೀತ ನೃತ್ಯ
ಪ್ರದರ್ಶನಗೊಳ್ಳಲಿದೆ. ಲೇಸರ್ ಷೋ
ಹಾಗೂ ಸಂಗೀತ ಕಾರಂಜಿ ಎರಡೂ
ಸೇರಿ ಒಟ್ಟು ಪ್ರದರ್ಶನದ ಅವಧಿ 40
ನಿಮಿಷ.
Comments
Post a Comment