Indian Women Hockey Team Qualifies For Olympics After 36 Years


36 ವರ್ಷದಾಚೆ ಒಲಿಂಪಿಕ್ಗೆ ಭಾರತದ
ವನಿತೆಯರು
ಏಜೆನ್ಸೀಸ್| Aug 29, 2015,
ಹೊಸದಿಲ್ಲಿ: ಭಾರತೀಯ ಮಹಿಳಾ
ಹಾಕಿ ತಂಡ 36 ವರ್ಷಗಳ ದೀರ್ಘ
ಅಂತರದ ಬಳಿಕ ಒಲಿಂಪಿಕ್ನಲ್ಲಿ
ಆಡಲಿದೆ. ಈ ಸಾಧನೆಗಾಗಿ ಭಾರತ,
ಇಂಗ್ಲೆಂಡ್ ಮಹಿಳಾ ತಂಡಕ್ಕೆ
ಥ್ಯಾಂಕ್ಸ್ ಹೇಳಬೇಕು.
ಏಕೆಂದರೆ, ಲಂಡನ್ನಲ್ಲಿ ನಡೆಯುತ್ತಿರುವ
ಯೂರೋ ಹಾಕಿ ಚಾಂಪಿಯನ್ಶಿಪ್ನಲ್ಲಿ
ಇಂಗ್ಲೆಂಡ್ ಫೈನಲ್ಗೇರಿದ್ದರ ಫಲವಾಗಿ
ಭಾರತದ ಮಹಿಳೆಯರು ರಿಯೋ ಡಿ ಜನೈರೋದಲ್ಲಿ
ಮುಂದಿನ ವರ್ಷ ನಡೆಯಲಿರುವ
ಒಲಿಂಪಿಕ್ಗೆ ಅರ್ಹತೆ
ಗಿಟ್ಟಿಸಿಕೊಂಡಿದ್ದಾರೆ!
ಅಸಲಿಗೆ ಆಗಿದ್ದು ಇದು. ಯುರೋಪಿಯನ್
ಚಾಂಪಿಯನ್ಶಿಪ್ನಲ್ಲಿ ನಡೆದ ಹಾಕಿ
ಸೆಮಿಫೈನಲ್ನಲ್ಲಿ ಇಂಗ್ಲೆಂಡ್
ಮಹಿಳೆಯರಯ ಸ್ಪೇನ್ ವನಿತೆಯರನ್ನು ಸೋಲಿಸಿ
ಫೈನಲ್ಗೇರಿದರು. ಇನ್ನೊಂದು
ಸೆಮೀಸ್ನಲ್ಲಿ ಜರ್ಮನಿ ತಂಡವನ್ನು
ನೆದರ್ಲೆಂಡ್ ತಂಡ ಮಣಿಸಿ ಫೈನಲ್
ತಲುಪಿದೆ. ಫೈನಲ್ ತಲುಪಿದ ಎರಡೂ ತಂಡು
ಸಹಜವಾಗಿಯೇ ಒಲಿಂಪಿಕ್ ಗೇಮ್ಸ್ಗೆ ಅರ್ಹತೆ
ಪಡೆದಿವೆ. ಇದರಿಂದಾಗಿ ಒಲಿಂಪಿಕ್ಗೆ ಆಡುವ
ತಂಡಗಳ ಕೋಟಾದಲ್ಲಿ ಒಂದು ಸ್ಥಾನ
ತೆರವಾಗಿದೆ.
ಇದರ ಫಲವಾಗಿ ಕಳೆದ ತಿಂಗಳು
ಬೆಲ್ಜಿಯಂನ ಅಂಟೆವರ್ಪ್ನಲ್ಲಿ ನಡೆದ
ಮಹಿಳಾ ಹಾಕಿ ವಿಶ್ವ ಲೀಗ್ನಲ್ಲಿ ಐದನೇ ಸ್ಥಾನ
ಪಡೆದಿದ್ದ ಭಾರತದ ವನಿತೆಯರ ತಂಡದ ಹಾದಿ
ಸುಗಮವಾಗಿ ಆ ಒಂದು ಸ್ಥಾನ ಅನಾಯಾಸವಾಗಿ
ಒಲಿದು ಬಂದಿದೆ. ಹೀಗಾಗಿ
ಮುಂದಿನ ವರ್ಷದ ಒಲಿಂಪಿಕ್ನಲ್ಲಿ
ಭಾಗವಹಿಸುವ ಅವಕಾಶ ಅವರಿಗೆ ಒಲಿದು ಬಂದಿದೆ.
ಭಾರತದ ಮಹಿಳಾ ಹಾಕಿ ತಂಡ ರಿಯೊ ಗೇಮ್ಸ್
ಅರ್ಹತೆ
ಗಿಟ್ಟಿಸಿಕೊಂಡಿರುವುದನ್ನು
ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್
(ಎಫ್ಐಎಚ್) ಕೂಡ ಖಚಿತಪಡಿಸಿದೆ.
ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ಬೇರೆ
ಬೇರೆ ಸೆಮಿಫೈನಲ್ಗಳಲ್ಲಿ ಇಂಗ್ಲೆಂಡ್ ಹಾಗೂ
ನೆದರ್ಲೆಂಡ್ ತಂಡ ಫೈನಲ್ ಪ್ರವೇಶಿಸಿದೆ.
ಇದರ ಫಲವಾಗಿ ಇತರೆ ಒಂದು ತಂಡಕ್ಕೆ
ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅವಕಾಶ
ಲಭ್ಯವಾಗಿದೆ. ಒಲಿಂಪಿಕ್ಗೆ ಆಡುವ
ತಂಡಗಳ ಕೋಟಾದಲ್ಲಿ ತೆರವಾದ ಸ್ಥಾನವನ್ನು
ಭಾರತ ಅರ್ಹತೆ ಆಧಾರದಲ್ಲಿ ತುಂಬಲಿದೆ. ಹಾಗೂ
2016ರಲ್ಲಿ ರಿಯೋ ಒಲಿಂಪಿಕ್ಸ್ ಭಾರತದ
ಮಹಿಳಾ ತಂಡ ಆಡಲಿದೆ ಎಂದು ಎಫ್ಐಎಚ್
ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಏಷ್ಯನ್ ಗೇಮ್ಸ್ ಚಾಂಪಿಯನ್
ಕೊರಿಯಾ, ಪಾನ್ ಅಮ್ ಗೇಮ್ಸ್
ಚಾಂಪಿಯನ್ ಅರ್ಜೆಂಟಿನಾ, ಗ್ರೇಟ್
ಬ್ರಿಟನ್, ಚೀನಾ, ಜರ್ಮನಿ, ನೆದರ್ಲೆಂಡ್,
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ
ತಂಡ ಹಾಕಿ ವಿಶ್ವ ಲೀಗ್ ಸೆಮಿಫೈನಲ್
ತಲುಪಿ ಅರ್ಹತೆ ಗಿಟ್ಟಿಸಿದ್ದು,
ಉಳಿದೊಂದು ಸ್ಥಾನ ಭಾರತದ
ಪಾಲಾಗಿದೆ.
ಈ ಮೂಲಕ 1980ರ ಮಾಸ್ಕೋ ಒಲಿಂಪಿಕ್
ಬಳಿಕ ಇದೇ ಮೊದಲ ಬಾರಿಗೆ
ಒಲಿಂಪಿಕ್ ಅಂಗಣದಲ್ಲಿ ಆಟವಾಡುವ
ಸುವರ್ಣಾವಕಾಶ ಭಾರತದ ಮಹಿಳಾ ತಂಡಕ್ಕೆ ಒಲಿದು
ಬಂದಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು