Kerala becomes India's first 'complete digital state' ದೇಶದ ಮೊದಲ ಡಿಜಿಟಲ್ ರಾಜ್ಯವಾಗಿ ಹೊರಹೊಮ್ಮಿದ ಕೇರಳ
:
ತಿರುವನಂತಪುರ: ಮೊಬೈಲ್
ಕ್ಷೇತ್ರ, ಇ-ಸಾಕ್ಷರತೆ, ಡಿಜಿಟಲ್
ಬ್ಯಾಂಕಿಂಗ್ನಲ್ಲಿ ಪ್ರಗತಿ ಹಾಗೂ
ಪಂಚಾಯಿತ್ ಮಟ್ಟದಲ್ಲಿ ಸಂಪೂರ್ಣ
ಬ್ರಾಡ್ಬ್ಯಾಂಡ್ ಸಂಪರ್ಕ
ಸಾಧಿಸುವುದರೊಂದಿಗೆ, ಕೇರಳ ದೇಶದ
ಮೊದಲ ಡಿಜಿಟಲ್ ರಾಜ್ಯವಾಗಿ
ಹೊರಹೊಮ್ಮಿದೆ.
ಆ ಮೂಲಕ ಪ್ರಧಾನಿ ಮೋದಿಯ ಕನಸಿನ ಕೂಸಾದ
'ಡಿಜಿಟಲ್ ಇಂಡಿಯಾ' ಕಲ್ಪನೆಗೆ ಇತರೆ
ರಾಜ್ಯಗಳಿಗೂ ಈ ದಕ್ಷಿಣ ಭಾರತೀಯ
ರಾಜ್ಯ ಮಾದರಿಯಾಗಿದೆ.
ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ
ನೆರವೇರಿಸಿದ ಮುಖ್ಯಮಂತ್ರಿ ಒಮನ್
ಚಾಂಡಿ, ರಾಜ್ಯ ಸಂಪೂರ್ಣ ಡಿಜಿಟಲ್
ಆಗಿರುವುದಾಗಿ ಘೋಷಿಸಿದರು. ಅಲ್ಲದೇ, ಮಾಜಿ ರಾಷ್ಟ್ರಪತಿ
ದಿ.ಎಪಿಜೆ ಅಬ್ದುಲ್ ಕಲಾಂ ಸ್ಮರಣೆಯಲ್ಲಿ
ಯುವಕರಿಗೆ ಅನುಕೂಲವಾಗುವಂಥ ಅನೇಕ
ಯೋಜನೆಗಳನ್ನು ಪ್ರಕಟಿಸಿದರು.
'ಇ-ಜಿಲ್ಲಾ ಯೋಜನೆಗಳ ಜಾರಿ, ಬ್ಯಾಂಕ್
ಅಕೌಂಟ್ ಮತ್ತು ಆಧಾರ್ ಸಂಖ್ಯೆ
ಸಂಪರ್ಕಿಸುವ ಕಾರ್ಯಗಳು ಡಿಜಿಟಲ್ ಕೇರಳಕ್ಕೆ
ಸಹಕರಿಸಿದವು,' ಎಂದರು.
'ಡಿಜಿಟಲ್ ಕೇರಳದ ಅತ್ಯುತ್ತಮ ಬಳಕೆಗಾಗಿ
ಸ್ಥಳೀಯ ಆಡಳಿತಗಳಲ್ಲಿ ಸರಕಾರ ವೈ-ಫೈ
ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲಿದ್ದು, ಪೂರ್ಣ
ಮೊಬೈಲ್ ಆಡಳಿತವನ್ನು
ಜಾರಿಗೊಳಿಸುತ್ತದೆ,' ಎಂದು
ಹೇಳಿದರು.
Comments
Post a Comment