ಕರ್ನಾಟಕದ ಪ್ರಮುಖ ನೀರಾವರಿ ಯೋಜನಗೆಳು : (The Major Irrigation Projects in Karnataka)


*Karnataka Economics
*ಕರ್ನಾಟಕದ ಆರ್ಥಿಕತೆ.

—ಭಾರತದಲ್ಲಿ ನೀರಾವರಿ ಯೋಜನೆಗಳು ಇರುವಂತೆ ಕರ್ನಾಟಕದಲ್ಲಿಯು ಕೆಲವು ನೀರಾವರಿ ಯೋಜನೆಗಳನ್ನು ಕಾಣಬಹುದು. ಈ ಕೆಳಕಂಡಂತೆ ಅವುಗಳನ್ನು ಕಾಣಬಹುದು.

●.ಕೃಷ್ಣರಾಜ ಸಾಗರ :••———•• ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟೆರ್ ಭೂಮಿಗೆ ನೀರು ಒದಗಿಸಿದೆ.

●.ಕೃಷ್ಣಾ ಮೇಲ್ದಂಡೆ ಯೋಜನೆ :••———•• ಈ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ನಿರ್ಮಿಸಿದೆ. ಬರಗಾಲ ಪೀಡಿತ ಬಿಜಾಪುರ ಮತ್ತು ಗುಲ್ಬರ್ಗಾ ರಾಯಚೂರು ಜಿಲ್ಲೆಗಳ ೬.೧೭ ಲಕ್ಷ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಿದೆ.

●.ಮಲಪ್ರಭಾ ಯೋಜನೆ :••———•• ಮಲಪ್ರಭಾ ಯೋಜನೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಇದೆ.

●.ಭದ್ರಾ ಜಲಾಶಯ :••———•• ಈ ಜಲಾಶಯಗಳನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೫೭೦ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸಲಾಗುತ್ತಿದೆ.

●.ತುಂಗಾಭದ್ರ ಜಲಾಶಯ :••———•• ಈ ಜಲಾಶಯವನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟಿ ತಾಲ್ಲೂಕಿನ ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಾಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ೧೯೪೫ ರಲ್ಲಿ ಪ್ರಾರಂಭವಾಯಿತು. ಈ ಜಲಾಶಯದಿಂದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು ೩,೬೨,೭೧೫ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸಲಾಗುತ್ತಿದೆ.

●.ತುಂಗಾಭದ್ರ ಮೇಲ್ದಂಡೆ ಯೋಜನೆ :••———•• ಈ ಯೋಜನೆಯಡಿ ಈಗ ಶಿವಮೊಗ್ಗ ಬಳಿಯ ತುಂಗಾ ಅಣೆಕಟ್ಟಿಗೆ ಹೊಸರೂಪ ನೀಡಿ ಶಿವಮೊಗ್ಗ ಚಿತ್ರದುರ್ಗ, ದಾರವಾಡ ಜಿಲ್ಲೆಗಳ ಸುಮಾರು ೯೪,೬೬೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ.

●.ಹಾರಂಗಿ ಯೋಜನೆ :••———•• ಈ ಯೋಜನೆಯಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹುಡ್ಗೂರು ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು ೪೩,೦೩೬ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸಿದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು