Mr. Koide was born on March 13, 1903. He became the world’s oldest man
ಜಪಾನ್ನಿನ ಯಸುಟರೊ ಕೊಯ್ಡೆ
ವಿಶ್ವದ ಹಿರಿಯಜ್ಜ
:
ಟೊಕಿಯೊ (ಎಪಿ): ಜಪಾನ್ನ 112
ವರ್ಷದ ಯಸುಟರೊ ಕೊಯ್ದೆ
ಎಂಬುವರು ವಿಶ್ವದ ಅತಿ ಹಿರಿಯ ವ್ಯಕ್ತಿ
ಎಂದು ಗಿನ್ನೆಸ್ ವಿಶ್ವ ದಾಖಲೆಗೆ
ಸೇರ್ಪಡೆಗೊಂಡಿದ್ದಾರೆ.
ಮಧ್ಯ ಜಪಾನ್ನ ನಾಗೊಯ ನಗರದ
ಯಸುಟರೊ ಕೊಯ್ದೆ ಅವರು
ಶುಕ್ರವಾರ ಅಧಿಕೃತವಾಗಿ ವಿಶ್ವದ
ಹಿರಿಯಜ್ಜ ಎಂಬ ಬಿರುದನ್ನು
ಪಡೆದುಕೊಂಡರು.
ಕೊಯ್ದೆ ಅವರು 1903ರ ಮಾರ್ಚ್
13ರಂದು ಜನಿಸಿದ್ದು, ಟೈಲರ್ ಆಗಿ
ಕೆಲಸ ಮಾಡುತ್ತಿದ್ದರು. ಅವರ ಪ್ರಿಯ
ತಿನಿಸು ಬ್ರೆಡ್. ಇವರು
ಇಳಿವಯಸ್ಸಿನಲ್ಲಿಯೂ ಕನ್ನಡಕಗಳ
ನೆರವಿಲ್ಲದೇ ದಿನಪತ್ರಿಕೆಗಳನ್ನು
ಓದುತ್ತಾರೆ.
ಜುಲೈನಲ್ಲಿ ಟೋಕಿಯೊದ
ವಿಶ್ವದ ಹಿರಿಯ ವ್ಯಕ್ತಿ ಸಕರಿ
ಮೊಮೊಯ್ ಸಾವನ್ನಪ್ಪಿದ್ದು,
ಈಗ ಕೊಯ್ದೆ ಈ ಬಿರುದಿಗೆ
ಪಾತ್ರರಾಗಿದ್ದಾರೆ.
Comments
Post a Comment