Pankaj Advani bags 13th World Snooker Championship
ಕರ್ನಾಟಕದ ಪಂಕಜ್ಗೆ ವಿಶ್ವ ಕಿರೀಟ
ಉದಯವಾಣಿ, Aug 22, 2015, 7:33 PM IST
13ನೇ ಬಾರಿಗೆ ಬಿಲಿಯರ್ಡ್ಸ್-ಸ್ನೂಕರ್ ಮುಡಿಗೇರಿಸಿದ
ರಾಜ್ಯದ ಹುಡುಗ , 10ನೇ ವಯಸ್ಸಿನಲ್ಲಿ
ರಾಜ್ಯಕ್ಕೆ ಚಾಂಪಿಯನ್, ಈಗ ವಿಶ್ವಕ್ಕೇ
ಚಾಂಪಿಯನ್. ಬಿಲಿಯರ್ಡ್ಸ್ ಇಲ್ಲವೇ ಸ್ನೂಕರ್
ಎಂದಾಕ್ಷಣ ಸಾಮಾನ್ಯವಾಗಿ ನೆನಪಿಗೆ
ಬರುವುದೆಂದರೆ ಸಿಗರೇಟ್ ಹೊಗೆ
ತುಂಬಿದ ಕೋಣೆ, ನಾಲ್ಕಾರು ಕೆಂಗಣ್ಣಿನ
ಯುವಕರು ಅತ್ತಿಂದಿತ್ತ ಓಡಾಡುತ್ತಾ, ಪರಸ್ಪರ
ಸಾವಾಲೊಡ್ಡುತ್ತಾ, ಕೀಟಲೆ
ಮಾಡುತ್ತಾ ಟೈಂ ಪಾಸ್ ಮಾಡುವ ದೃಶ್ಯ. ಇದಕ್ಕೆ
ವ್ಯತಿರಿಕ್ತವೆನ್ನುವಂತೆ, ಆಟದ
ಸೂಕ್ಷ್ಮತೆಗಳನ್ನು ಅರಿತು, ಕಳೆದ ಹನ್ನೆರಡು
ವರ್ಷದಲ್ಲಿ 13 ವಿಶ್ವ ಬಿಲಿಯರ್ಡ್ಸ್
ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು,
ಭಾರತದ ಕೀರ್ತಿ ಪತಾಕೆಯನ್ನು
ಬಾನಂಗಣದಲ್ಲಿ ಹಾರಿಸುತ್ತಾ ಸಾಗಿರುವ
ಬೆಂಗಳೂರು ಹುಡುಗ ಪಂಕಜ್ ಅಡ್ವಾಣಿ!
ಇಂಗ್ಲೀಷ್ ಬಿಲಿಯರ್ಡ್ಸ್
ಚಾಂಪಿಯನ್ಶಿಪ್ನಲ್ಲಿ ಹ್ಯಾಟ್ರಿಕ್ನ
ಹ್ಯಾಟ್ರಿಕ್ ಗೆಲುವಿನ ಸಾಧನೆ. ವಿಭಿನ್ನ ಮೂರು ಬೇರ
ಬೇರೆ ವರ್ಷದಲ್ಲಿ ವಿಶ್ವ, ಏಷ್ಯಾ ಹಾಗೂ ರಾಷ್ಟ್ರ
ಮಟ್ಟದಲ್ಲಿ ಚಾಂಪಿಯನ್ ಆಗಿ
ಹೊರಹೊಮ್ಮಿದ್ದ
ಪಂಕಜ್ ವೃತ್ತಿಪರ ಸ್ನೂಕರ್ಗೆ ಕಾಲಿರಿಸಿದ್ದು
2012ರಲ್ಲಿ. ಪಂಕಜ್ನೇ ಭಾರತದ
ಮೊದಲ ವಿಶ್ವ 6-ರೆಡ್ ಸ್ನೂಕರ್
ಚಾಂಪಿಯನ್. ಹದಿಮೂರೆಂಬುದು ಅಪಶಕುನದ
ಸಂಖ್ಯೆ ಎಂಬುದನ್ನು ಮೆಟ್ಟಿ
ನಿಂತ ಈ ನಮ್ಮ ಪಂಕಜ್
ಕುರಿತಂತೆ....
ಜನನ ಮತ್ತು ಬಾಲ್ಯ
ಪುಣೆಯ ನಿವಾಸಿಗಳಾಗಿದ್ದ ಅರ್ಜನ್ ಅಡ್ವಾಣಿ ಹಾಗೂ
ಕಾಜೋಲ್ ಎಂಬ ಸಿಂಧಿ ದಂಪತಿಗಳ
ಎರಡನೇ ಮಗನಾಗಿ ಪಂಕಜ್ ಜನಿಸಿದ್ದು 1985ರ
ಜುಲೈ 24ರಂದು. ಉದ್ಯೋಗ ನಿಮಿತ್ತ
ಕುವೈತ್ನತ್ತ ಅಡ್ವಾಣಿ ಕುಟುಂಬ ಸಾಗಿದಾಗ
ಕೈಗೂಸಾಗಿದ್ದ ಪಂಕಜ್ ಹಾಗೂ ಅವನ ಅಣ್ಣ
ಶ್ರೀಯ ಆರಂಭಿಕ ಬಾಲ್ಯ
ಕುವೈತ್ನಲ್ಲಿಯೇ ಕಳೆಯಿತು. ಪಂಕಜ್ಗೆ ಐದು
ವರ್ಷವಾಗಿದ್ದಾಗ ಸಂಭವಿಸಿದ ಇರಾನ್-ಇರಾಕ್
ಸಮರದಿಂದಾಗಿ ಕುವೈತ್ ತೊರೆದ ಅಡ್ವಾಣಿ
ಕುಟುಂಬ ಬೆಂಗಳೂರಿನಲ್ಲಿ ನೆಲೆಯೂರಿತು.
ಬೆಂಗಳೂರಿನಲ್ಲಿ ವಾಸಿಸಲಾರಂಭಿಸಿದ
ಒಂದೇ ವರ್ಷದಲ್ಲಿ ಅಡ್ವಾಣಿ ಪರಿವಾರದ ಆಧಾರ
ಸ್ಥಂಭವಾಗಿದ್ದ ಅರ್ಜನ್ ಅಡ್ವಾಣಿ
ವಿಧಿವಶರಾಗಿದ್ದು ಕುಟುಂಬಕ್ಕೆ ಬಡಿದ ಬರಸಿಡಿಲು!
ಬಿಲಿಯರ್ಡ್ಸ್ ಜಗತ್ತಿಗೆ ಅಂಬೆಗಾಲಿಟ್ಟ
ಪಂಕಜ್
ಬೆಂಗಳೂರಿನ ಫ್ರಾಂಕ್ ಅಂಥೋಣಿ
ಪಬ್ಲಿಕ್ ಸ್ಕೂಲ್ಗೆ ದಾಖಲಾದ ಪಂಕಜ್ ಹಾಗೂ
ಅವನಣ್ಣ ಶ್ರೀ ಶಾಲಾ
ಜೀವನವನ್ನಾರಂಭಿಸಿದ್ದರು. ಈ
ನಡುವೆ ಸಮಯ ಕಳೆಯಲೆಂದು ಮನೆಯ
ಸಮೀಪವೇ ಇದ್ದ ಸ್ನೂಕರ್ ಪಾರ್ಲರ್ಗೆ ತನ್ನ
ಸ್ನೇಹಿತರೊಂದಿಗೆ ಆಟವಾಡಲು
ಹೋಗುತ್ತಿದ್ದ ಅಣ್ಣ ಶ್ರೀಯನ್ನು
ಹಿಂಬಾಲಿಸಿದ ಪಂಕಜ್, ಪಾರ್ಲರ್ಗೆ
ಹೋಗುತ್ತಿದ್ದಂತೆ ತಾನೂ ಆಟದಲ್ಲಿ
ಪಾಲ್ಗೊಳ್ಳುವೆ ಎಂದಾಗ ಎಲ್ಲರೂ
ಅಚ್ಚರಿ ಹಾಗೂ ತಮಾಷೆ ನೋಟ ಬೀರಿದ್ದರು.
ಆದಾಗ್ಯೂ, ಬಿಲಿಯರ್ಡ್ಸ್ ಸ್ಟಿಕ್ ಹಿಡಿದ ಪಂಕಜ್
ಟೇಬಲ್ ಮೇಲಿನ ನಿಖರ ಗುರಿ ಮತ್ತು ಅದಮ್ಯ
ಉತ್ಸಾಹದಿಂದ ಆಟದಲ್ಲಿ ತೊಡಗಿಕೊಂಡ
ಪರಿ ಎಲ್ಲರಲ್ಲೂ ವಿಸ್ಮಯ ತರಿಸಿತ್ತು.
ಇದರಿಂದ ಉತ್ತೇಜಿತನಾದ ಅಣ್ಣ
ಶ್ರೀ, ಪಂಕಜ್ಗೆ ಬಿಲಿ ಯರ್ಡ್ಸ್ನ
ರೀತಿ-ರಿವಾಜು, ಪಟ್ಟುಗಳನ್ನು ಕಲಿಸಲು
ಪ್ರಾರಂಭಿಸಿದ. ಇದಾದ ಕೆಲವೇ ದಿನದಲ್ಲಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅಣ್ಣ ಕಮ್
ಕೋಚ್ನನ್ನು ಮಣಿಸಿ ರಾಜ್ಯ ಮಟ್ಟದ ಪ್ರಶಸ್ತಿ
ಗೆದ್ದಾಗ ಪಂಕಜ್ಗಿನ್ನೂ ಕೇವಲ ಹತ್ತು ವರ್ಷ!
ಅರವಿಂದ್ ಸಾವೂರ್ ಸಾನ್ನಿಧ್ಯ
ಕೇವಲ ಹತ್ತನೇ ವಯಸ್ಸಿನಲ್ಲಿ ರಾಜ್ಯ ಮಟ್ಟದ
ಪ್ರಶಸ್ತಿ ಗೆದ್ದ ಪಂಕಜ್ನಲ್ಲಿದ್ದ ಪ್ರತಿಭೆ
ಹಾಗೂ ಅಟದಲ್ಲಿನ ತನ್ಮಯತೆ ಗಮನಿಸಿದ ಆಧುನಿಕ
ಸ್ನೂಕರ್ ಜಗತ್ತಿನ ದೈತ್ಯ ಪ್ರತಿಭೆ ಅರವಿಂದ್
ಸಾವೂರ್ ಪಂಕಜ್ ತಾಯಿ ಕಾಜೋಲ್
ಅಡ್ವಾಣಿಯವರನ್ನು ಸಂಪರ್ಕಿಸಿ,
ಪಂಕಜ್ನನ್ನು ವಿಶ್ವ ಚಾಂಪಿಯನ್ನ್ನಾಗಿ
ಮಾಡುವ ಬೃಹತ್ ಭರವಸೆಯನ್ನು ನೀಡಿ
ತರಬೇತಿ ಪ್ರಾರಂಭಿಸಿದರು. ಸಾವೂರ್ ನುಡಿದಂತೆ
ಕೇವಲ 18ನೇ ವಯಸ್ಸಿನಲ್ಲಿ ಪಂಕಜ್,
ಚೀನಾದಲ್ಲಿ ನಡೆದ ವಿಶ್ವ ಸ್ನೂಕರ್
ಚಾಂಪಿಯನ್ಶಿಪ್ನಲ್ಲಿ ಟ್ರೋಫಿ ಎತ್ತಿದ
ಪಂಕಜ್ ಇಂದಿನವರೆಗೂ ಜಯದ ಮೇಲೆ
ಜಯ ದಾಖಲಿಸುತ್ತಾ ಸಾಗಿರುವುದು ಭಾರತೀಯರ
ಹೆಮ್ಮೆಗೆ ಕಾರಣವಾಗಿದೆ.
ಪಂಕಜ್ ಅಂತಾರಾಷ್ಟ್ರೀಯ
ಸಾಧನೆ...
2003 ಐಬಿಎಸ್ಎಫ್ ವಿಶ್ವ ಚಾಂಪಿಯನ್ಶಿಪ್
2004 ಡಬ್ಲ್ಯುಎಸ್ಎ ಚಾಲೆಂಜ್ ಟೂರ್
2005 ಐಬಿಎಸ್ಎಫ್ ವಿಶ್ವ ಚಾಂಪಿಯನ್ಶಿಪ್
(ಟೈಮ್ ಮತ್ತು ಪಾಯಿಂಟ್ಸ್ ಮಾದರಿಯಲ್ಲಿ)
ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
ಡಬ್ಲ್ಯುಎಸ್ಎ ಚಾಲೆಂಜ್ ಟೂರ್
2006 ದೋಹಾ ಏಷ್ಯನ್ ಗೇಮ್ಸ್: ಚಿನ್ನದ ಪದಕ
2008 ಐಬಿಎಸ್ಎಫ್ ವಿಶ್ವ ಚಾಂಪಿಯನ್ಶಿಪ್
(ಟೈಮ್ ಮತ್ತು ಪಾಯಿಂಟ್ಸ್ ಮಾದರಿಯಲ್ಲಿ)
ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
2009 ವಿಶ್ವ ಪೊ›ಫೆಶನಲ್
ಬಿಲಿಯರ್ಡ್ಸ್ ಚಾಂಪಿಯನ್ಶಿಪ್
ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
2010 ಗುವಾಂಗ್ಜೋ ಏಷ್ಯನ್ ಗೇಮ್ಸ್: ಚಿನ್ನದ
ಪದಕ
ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
2012 ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
2014 ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್ಶಿಪ್
ವಿಶ್ವ ಟೀಮ್ ಬಿಲಿಯರ್ಡ್ಸ್
ಚಾಂಪಿಯನ್ಶಿಪ್
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್
2015 ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್ಶಿಪ್
ಕೊಟ್ಟೂರ ಸ್ವಾಮಿ ಎಂ.ಎಸ್., ಕೊಟ್ಟೂರು.
Comments
Post a Comment