ಲಂಕಾ ಎಲೆಕ್ಷನ್; ಸೋಲೊಪ್ಪಿಕೊಂಡ ರಾಜಪಕ್ಸೆ, ವಿಕ್ರಮಸಿಂಘೆ ಮತ್ತೆ ಪಿಎಂ Srilanka Reelected Ranil Wickremesinghe as New PM( HIS United National Party won 93 out of 196 directly elected seats, )
ಕೊಲಂಬೋ: ಲಂಕೆಯ
ಸಂಸದೀಯ ಚುನಾವಣೆಗಳಲ್ಲಿ
ಅತ್ಯಂತ ನಿಕಟ ಸ್ಪರ್ಧೆಯನ್ನು
ನೀಡಿಯೂ ಫಲಿತಾಂಶ ಪ್ರಕಟನೆಗೆ
ಮುನ್ನವೇ ಮಹಿಂದ ರಾಜಪಕ್ಷ
ಅವರು
ಸೋಲೊಪ್ಪಿಕೊಂಡಿರುವಂತೆಯ
ೇ, ಸರಳ ಬಹುಮತ ಗಳಿಸುವುದಕ್ಕೆ
ಸನಿಹದಲ್ಲಿರುವ ಯುನೈಟೆಡ್
ನ್ಯಾಶನಲ್ ಪಾರ್ಟಿ (ಯುಎನ್ಪಿ)ಯ
ನೇತಾರ ರಾಣಿಲ್ ವಿಕ್ರಮಸಿಂಘೆ
ಅವರು ದೇಶದ ಏಕತಾ ಸರಕಾರದ
ನೂತನ ಪ್ರಧಾನಿಯಾಗಿ ಪ್ರಮಾಣ
ವಚನ ಸ್ವೀಕರಿಸುವುದಕ್ಕೆ ಇದೀಗ
ಸಜ್ಜಾಗಿದ್ದಾರೆ.
66ರ ಹರೆಯದ ವಿಕ್ರಮಸಿಂಘೆ ಅವರು
ಅಧ್ಯಕ್ಷೀಯ ಸಚಿವಾಲಯದಲ್ಲಿ
ಇಂದು ನಡೆಯಲಿರುವ ಸರಳ
ಸಮಾರಂಭದಲ್ಲಿ ನೂತನ
ಪ್ರಧಾನಿಯಾಗಿ ಪ್ರಮಾಣ ವಚನ
ಸ್ವೀಕರಿಸಲಿದ್ದಾರೆ ಮತ್ತು ಅದನ್ನು
ಅನುಸರಿಸಿ ರಾಷ್ಟ್ರೀಯ ಸರಕಾರದ
ಸಚಿವ ಸಂಪುಟವು
ನೇಮಕಗೊಳ್ಳಲಿದೆ ಎಂದು
ಮಾಧ್ಯಮ ವರದಿಗಳು ತಿಳಿಸಿವೆ.
ಯುಎನ್ಪಿ 22 ಮತದಾರ ಜಿಲ್ಲೆಗಳ ಪೈಕಿ
11 ಜಿಲ್ಲೆಗಳಲ್ಲಿ ವಿಜಯ ಸಾಧಿಸಿದೆಯಾದರೆ
ಎದುರಾಗಿ ಯುಪಿಎಫ್ಎ ಕೇವಲ
ಎಂಟು ಜಿಲ್ಲೆಗಳಲ್ಲಿ ಜಯ ಗಳಿಸಿದೆ.
ಮತಗಣನೆ ಕಾರ್ಯ ಮುಗಿತಾಯಕ್ಕೆ
ಬರುತ್ತಿರುವಂತೆಯೇ ರಾಣಿಲ್
ವಿಕ್ರಮಸಿಂಘೆ ಅವರು "ನಿಮ್ಮೆಲ್ಲರಿಗೆ
ನಾನು ನನ್ನೊಂದಿಗೆ
ಕೈಜೋಡಿಸುವಂತೆ ಈ ಮೂಲಕ
ಆಹ್ವಾನಿಸುತ್ತಿದ್ದೇನೆ' ಎಂದು ಕರೆ
ನೀಡಿದರು. "ನಾವೆಲ್ಲ ಜತೆಗೂಡಿ
ಒಂದು ಉತ್ತಮ ಪೌರ ರಾಷ್ಟ್ರವನ್ನು
ನಿರ್ಮಿಸೋಣ, ಒಮ್ಮತದ
ಸರಕಾರವನ್ನು ರಚಿಸೋಣ ಮತ್ತು
ಸುಭದ್ರ ನೂತನ ದೇಶವನ್ನು
ಕಟ್ಟೋಣ' ಎಂದವರು ಹೇಳಿದರು.
Comments
Post a Comment