What is PAYMENT BANK?

ಪೇಮೆಂಟ್ ಬ್ಯಾಂಕ್
ಎಂದರೇನು?
ವಾಣಿಜ್ಯ ಬ್ಯಾಂಕ್ ನಂತೆ ಪೂರ್ಣ
ಪ್ರಮಾಣದ ಕೆಲಸವನ್ನು ಇದು
ಮಾಡುವುದಿಲ್ಲ. ಹಣ ಪಾವತಿ
ಸೇವೆಗಳಿಗೆ ಸಂಬಂಧಿಸಿದಂತೆ
ಬ್ಯಾಂಕಿಂಗ್ ಚಟುವಟಿಕೆಗಳನ್ನು
ಸೀಮಿತ ಪ್ರಮಾಣದಲ್ಲಿ
ನಡೆಸುವುದನ್ನು ಪೇಮೆಂಟ್
ಬ್ಯಾಂಕ್ ಎಂದು ಕರೆಯಬಹುದು.
ಮೊಬೈಲ್ ಬ್ಯಾಂಕಿಂಗ್ ಸೇವೆ,
ಸೂಪರ್ ಮಾರ್ಕೆಟ್ಗಳ ಸರಣಿಗೆ ಮತ್ತು
ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ
ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು
ಶೀಘ್ರವಾಗಿ ಒದಗಿಸಿಕೊಡುತ್ತದೆ.
ಬೇಡಿಕೆ ಆಧರಿಸಿದ ಠೇವಣಿ ಸಂಗ್ರಹ, ಹಣ
ಜಮಾ ಸೇವೆಗಳು, ಇಂಟರ್ನೆಟ್
ಬ್ಯಾಂಕಿಂಗ್ ಸೇವೆಗಳು
ಲಭ್ಯವಿರುತ್ತವೆ. ಮೆಂಟ್
ಬ್ಯಾಂಕ್ಗಳು ತಮ್ಮ ಖಾತೆದಾರರಿಗೆ
ಎಟಿಎಂ ಅಥವಾ ಡೆಬಿಟ್ ಕಾರ್ಡ್, ಭಿನ್ನ
ಸ್ವರೂಪದ ಪ್ರೀಪೇಯ್ಡ್
ಕಾರ್ಡ್ಗಳನ್ನು ವಿತರಿಸಬಹುದು.
ಪೇಮೆಂಟ್ ಬ್ಯಾಂಕ್ ಗೆ ಅರ್ಜಿ
ಸಲ್ಲಿಸಿರುವ ಇತರ ಸಂಸ್ಥೆಗಳ ಹೆಸರನ್ನು
ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು
ಹಂತಹಂತವಾಗಿ ಅನುಮತಿ
ನೀಡಲಾಗುವುದು. ಈಗ
ಪ್ರಾಯೋಗಿಕವಾಗಿ ಕೆಲ ಸಂಸ್ಥೆಗಳಿಗೆ
ಅನುಮತಿ ನೀಡಿದ್ದು ಪ್ರತಿಕ್ರಿಯೆ ಆಧರಿಸಿ
ಮುಂದಿನ ಕ್ರಮ
ತೆಗೆದುಕೊಳ್ಳಲಾಗುವುದು
ಎಂದು ಆರ್ ಬಿಐ ತಿಳಿಸಿದೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024