Worlds Top 5 Travel Hotspots: 1)The Temples of Angkor 2)The Great Barrier Reef in Australia 3) Inca city of Machu Picchu in Peru 4)Great Wall of China 5) TajMahal
ತಪ್ಪದೆ ನೋಡಿ 'ತಾಜ್ ಮಹಲ್'
ಮೆಲ್ಬೋರ್ನ್: ನಿಮಗೆ ಜೀವನದಲ್ಲಿ
ಒಮ್ಮೆಯಾದರೂ ಪ್ರೇಮಸೌಧ ತಾಜ್ ಮಹಲ್ ನೋಡಬೇಕು
ಎನಿಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ ಬಿಡಿ.
ಏಕೆಂದರೆ ಜೀವನದಲ್ಲಿ
ಪ್ರತಿಯೊಬ್ಬರೂ ತಪ್ಪದೆ
ನೋಡಲೇಬೇಕಾದ ವಿಶ್ವದ 20 ಶ್ರೇಷ್ಠ ತಾಣಗಳ
ಪಟ್ಟಿಯಲ್ಲಿ ಭಾರತದ ತಾಜ್ ಐದನೇ ಸ್ಥಾನ
ಗಿಟ್ಟಿಸಿಕೊಂಡಿದೆ.
ಆಸ್ಟ್ರೇಲಿಯಾ ಮೂಲದ ಪ್ರಮುಖ ಪ್ರವಾಸಿ
ಮಾರ್ಗದರ್ಶಿ ಸಂಸ್ಥೆ 'ಲೋನ್ಲಿ ಪ್ಲಾನೆಟ್',
ಇತ್ತೀಚೆಗೆ 'ಅಲ್ಟಿಮೇಟ್ ಟ್ರಾವೆಲ್ ಲಿಸ್ಟ್'
ಎಂಬ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ
ಪ್ರತಿಯೊಬ್ಬರೂ ತಪ್ಪದೇ ನೋಡಬೇಕಾದ
ವಿಶ್ವದ 500 ತಾಣಗಳನ್ನು ಪಟ್ಟಿ ಮಾಡಿದೆ. ಈ ಪೈಕಿ
ತಾಜ್ ಮಹಲ್ ಟಾಪ್ 20 ಪಟ್ಟಿಯಲ್ಲಿ, ಅದರಲ್ಲೂ
ಐದನೇ ಸ್ಥಾನ ಪಡೆದಿರುವುದು ವಿಶೇಷ.
ಆಂಗ್ಕೊರ್ ದೇವಾಲಯ ಫಸ್ಟ್:
ಕಾಂಬೋಡಿಯಾದ ಪುರಾತನ
'ಅಂಗ್ಕೊರ್' ಹಿಂದೂ
ದೇವಾಲಯ, ವಿಶ್ವದಲ್ಲಿ ನೋಡಲೇ ಬೇಕಾದ ಸ್ಥಳಗಳ
ಪಟ್ಟಿಯಲ್ಲಿ ಮೊದಲ ಸ್ಥಾನ
ಪಡೆದಿದೆ. ಯುನೆಸ್ಕೋದ ವಿಶ್ವ ಪರಂಪರೆ
ತಾಣಗಳಲ್ಲಿ ಒಂದಾಗಿರುವ
'ಅಂಗ್ಕೊರ್' ಹಿಂದೂ
ದೇವಾಲಯಗಳ ಸಮುಚ್ಛಯವಾಗಿದ್ದು, ಸುಮಾರು 1000
ಸಾವಿರ ಮಂದಿರಗಳು ಹಾಗೂ ಸಮಾಧಿಗಳನ್ನು
ಒಳಗೊಂಡಿದೆ. ಪ್ರತಿವರ್ಷ
ಸುಮಾರು 20 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ
ನೀಡುತ್ತಾರೆ.
ಹವಳದ ದಂಡೆಗೆ ಎರೆಡನೇ ಸ್ಥಾನ: ಗ್ರೇಟ್
ಬ್ಯಾರಿಯರ್ ರೀಫ್ ಎಂತಲೇ
ಪ್ರಖ್ಯಾತವಾದ ಆಸ್ಟ್ರೇಲಿಯಾದ ಅಪರೂಪದ
ಹವಳದ ದಂಡೆ
ವೀಕ್ಷಣೀಯ ಸ್ಥಳಗಳ
ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಪೆರುವಿನ ಮಾಚು ಪಿಚು ಮೂರನೇ ಸ್ಥಾನ ಪಡೆದಿದ್ದರೆ,
ಚೀನಾದ ಮಹಾಗೋಡೆ ಡೋಂಟ್ ಮಿಸ್
ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ.
ಲಂಡನ್ನಲ್ಲಿರುವ 'ಬ್ರಿಟಿಷ್
ಮ್ಯೂಸಿಯಂ' 15ನೇ
ಆಕರ್ಷಣೀಯ ಸ್ಥಾನವಾಗಿ
ಹೊರಹೊಮ್ಮಿದೆ.
ವಿಶ್ವದ ಟಾಪ್ 10 ಪ್ರವಾಸಿ ತಾಣಗಳು 1.
ಅಂಗ್ಕೊರ್ ದೇವಾಲಯ,
ಕಾಂಬೋಡಿಯಾ 2. ಗ್ರೇಟ್ ಬ್ಯಾರಿಯರ್
ರೀಫ್, ಆಸ್ಟ್ರೇಲಿಯಾ 3. ಮಾಚು ಪಿಚ್ಚು,
ಪೆರು 4. ಚೀನಾದ ಮಹಾ ಗೋಡೆ 5. ತಾಜ್
ಮಹಲ್, ಆಗ್ರಾ 6. ಗ್ರಾಂಡ್ ಕೆನಾನ್ ನ್ಯಾಷನಲ್
ಪಾರ್ಕ್, ಅಮೆರಿಕ 7.
ಕೊಲೋಸಿಯಂ, ಇಟಲಿ 8.
ಇಗುವಾಜು ಜಲಪಾತ, ಬ್ರೆಜಿಲ್-
ಅರ್ಜೆಂಟೀನಾ 9. ಅಲ್ಹಾಂಬ್ರಾ,
ಸ್ಪೇನ್ 10. ಅಯಾ ಸೋಫಿಯಾ, ಟರ್ಕಿ
Comments
Post a Comment