ಆಸ್ಕರ್ ಗೆ ಎಂಟ್ರಿ ಕೊಟ್ಟ ಕನ್ನಡದ 'ಕೇರಾಫ್ ಫುಟ್ಪಾತ್ -2'
ಬೆಂಗಳೂರು: ಮಾಸ್ಟರ್ ಕಿಶನ್ ನಿರ್ದೇಶನದ 'ಕೇರಾಫ್
ಫುಟ್ಪಾತ್ -2' ಚಿತ್ರ 2016ನೇ ಸಾಲಿನ ಪ್ರತಿಷ್ಠಿತ
ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದೆ.
ಇದರೊಂದಿಗೆ ಕನ್ನಡದ
ಚಿತ್ರವೊಂದು ಆಸ್ಕರ್ಗೆ ಎಂಟ್ರಿ
ಪಡೆದುಕೊಂಡಂತಾಗಿದೆ.
ಬಾಲಪರಾಧಿಗಳ ಕುರಿತಾಗಿ ಕಿಶನ್ ಈ ಚಿತ್ರವನ್ನು
ಮಾಡಿದ್ದು, ಆಸ್ಕರ್ನ ಜನರಲ್ ಲೆಟರಲ್
ಕೆಟಗರಿಯಡಿ "ಕೇರಾಫ್ ಫುಟ್ಪಾತ್ -2' ಗೆ ಎಂಟ್ರಿ
ಸಿಕ್ಕಿದೆ. ಚಿತ್ರ ಅಕ್ಟೋಬರ್ನಲ್ಲಿ ಲಾಸ್
ಏಂಜಲೀಸ್ನಲ್ಲಿ
ಬಿಡುಗಡೆಯಾಗಲಿದೆ. ಆ ನಂತರ ಆಸ್ಕರ್ನ
ಸದಸ್ಯರಿಗೆ ಚಿತ್ರ ಪ್ರದರ್ಶನ ಕೂಡಾ ನಡೆಯಲಿದೆ.
ಅಲ್ಲಿ ನಡೆಯುವ ವೋಟಿಂಗ್ ಮೇರೆಗೆ ಚಿತ್ರದ
ಮುಂದಿನ ಆಯ್ಕೆಗಳು ನಡೆಯಲಿವೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಿಶನ್,
ಮೊದಲ ಬಾರಿಗೆ ಕನ್ನಡ
ಸಿನಿಮಾವೊಂದು ಆಸ್ಕರ್ಗೆ
ಎಂಟ್ರಿಕೊಡುತ್ತಿರುವುದು ಸಂತೋಷದ ವಿಚಾರ.
ಅಕ್ಟೋಬರ್ನಲ್ಲಿ ಲಾಸ್
ಏಂಜಲೀಸ್ನಲ್ಲಿ ಬಿಡುಗಡೆ
ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ
Comments
Post a Comment