ಜ.3ರಂದು ಶಿಕ್ಷಕಿಯರ ದಿನಾಚರಣೆ


ಹುಬ್ಬಳ್ಳಿ: 'ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ
ನಡೆಸಿದ ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನದ
ನೆನಪಿಗಾಗಿ ಪ್ರತಿ ವರ್ಷ ಜನವರಿ 3ರಂದು
'ಶಿಕ್ಷಕಿಯರ ದಿನ' ಆಚರಿಸಲು ಚಿಂತನೆ
ನಡೆಸಲಾಗಿದೆ' ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ಹೇಳಿದರು.
ಅವ್ವ ಸೇವಾ ಟ್ರಸ್ಟ್ ಹಾಗೂ ಶಿಕ್ಷಕ–ಶಿಕ್ಷಕೇತರ
ಸಂಘಟನೆಗಳ ಆಶ್ರಯದಲ್ಲಿ
ಮಂಗಳವಾರ ಇಲ್ಲಿ ಆಯೋಜಿಸಿದ್ದ ಬೆಳಗಾವಿ
ವಿಭಾಗ ಮಟ್ಟದ ಶಿಕ್ಷಕಿಯ ಸಮ್ಮೇಳನ
ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ
ಸಂಖ್ಯೆ ಕಡಿಮೆ ಇರುವುದು ಆತಂಕಕಾರಿ
ಬೆಳ ವಣಿಗೆ. ಹಾಗಾಗಿ ಹೆಣ್ಣು ಭ್ರೂಣಹತ್ಯೆ ತಡೆ
ಪ್ರಯತ್ನದಲ್ಲಿ ಕೈ ಜೋಡಿಸುವಂತೆ ಮನವಿ
ಮಾಡಿದರು.
'ನಂಬಿಕೆ ಮತ್ತು ಮೂಢನಂಬಿಕೆ ನಡುವಿನ
ವ್ಯತ್ಯಾಸ ಅರಿಯಬೇಕಿದೆ.
ಮೂಢನಂಬಿಕೆಯಿಂದ ಸಮಾಜಕ್ಕೆ ಹೆಚ್ಚಿನ
ಹಾನಿಯಾಗುತ್ತದೆ. ಇದಕ್ಕೆ ಮಹಾರಾಷ್ಟ್ರದ ವೈಚಾರಿಕ
ಚಿಂತಕರಾದ ನರೇಂದ್ರ ದಾಬೋಲ್ಕರ್,
ಗೋವಿಂದರಾವ್ ಪಾನ್ಸರೆ, ರಾಜ್ಯದಲ್ಲಿ
ಸಂಶೋಧಕ ಎಂ.ಎಂ.ಕಲಬುರ್ಗಿ ಅವರ
ಹತ್ಯೆಯೇ ಸಾಕ್ಷಿ. ಗೊಡ್ಡು
ಸಂಪ್ರದಾಯ ಮತ್ತು ಮೌಢ್ಯಗಳಿಗೆ ಜೋತು
ಬಿದ್ದವರು ಮಾತ್ರ ಇಂತಹ ಕೃತ್ಯ ಮಾಡುತ್ತಾರೆ
ಇಲ್ಲವೇ ಮಾಡಿಸುತ್ತಾರೆ' ಎಂದರು.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024