"ಪದ್ಮ'ಕ್ಕೆ ಮುರುಘಾ ಶರಣ ಸೇರಿ 30 ಗಣ್ಯರ ಹೆಸರು:-
ಬೆಂಗಳೂರು: ಚಿತ್ರದುರ್ಗದ ಡಾ|ಶಿವಮೂರ್ತಿ
ಮುರುಘಾ ಶರಣರು, ಹಿರಿಯ ವಿದ್ವಾಂಸ
ಪ್ರೊ|ಜಿ.ವೆಂಕಟಸುಬ್ಬಯ್ಯ,
ವೈದ್ಯ, ಡಾ|ಸುದರ್ಶನ್ಬಲ್ಲಾಳ್, ಹಿರಿಯ ನಟಿ ಡಾ|
ಭಾರತಿ ವಿಷ್ಣುವರ್ಧನ್, ವಿಜ್ಞಾನಿ ಎ.ಆರ್.ಶಿವಕುಮಾರ್,
ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ
ಸೇರಿದಂತೆ 30 ಗಣ್ಯರ ಹೆಸರುಗಳನ್ನು
ಪ್ರತಿಷ್ಠಿತ ಪದ್ಮ ಶ್ರೇಣಿ ಪ್ರಶಸ್ತಿಗೆ ರಾಜ್ಯ
ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಶಿಕ್ಷಣ, ವೈದ್ಯಕೀಯ, ಕಲೆ, ವಿಜ್ಞಾನ,
ಕ್ರೀಡೆ, ಸಿನಿಮಾ ಹಾಗೂ ಇತರೆ ಕ್ಷೇತ್ರಗಳಲ್ಲಿ
ಗಣನೀಯ ಸೇವೆ ಸಲ್ಲಿಸಿರುವ ಸಾಧಕರ
ಹೆಸರುಗಳನ್ನು ಪದ್ಮ ಶ್ರೇಣಿ ಪ್ರಶಸ್ತಿಗೆ ಶಿಫಾರಸು
ಮಾಡಿ ಬುಧವಾರ ಕಳುಹಿಸಿದೆ.
ಇತ್ತೀಚೆಗೆ ರಾಜ್ಯ ಸಚಿವ ಸಂಪುಟ
ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡು
ಕೇಂದ್ರ ಸರ್ಕಾರಕ್ಕೆ ಸಾಧಕರ ಹೆಸರು ಶಿಫಾರಸು
ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ
ನೀಡಲಾಗಿತ್ತು. ಸಾಮಾನ್ಯವಾಗಿ ರಾಜ್ಯ
ಸರ್ಕಾರ ಈ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ
ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಆದರೆ,
ಇದೇ ಮೊದಲ ಬಾರಿಗೆ ಸರ್ಕಾರ ತಾನು
ಶಿಫಾರಸು ಮಾಡಿದವರ ಹೆಸರುಗಳನ್ನು ಅಧಿಕೃತವಾಗಿಯೇ
ಬಹಿರಂಗಪಡಿಸಿದೆ.
"ಪದ್ಮ' ಪ್ರಶಸ್ತಿ ಶಿಫಾರಸು ಪಟ್ಟಿ
ಪದ್ಮವಿಭೂಷಣ: ಚಿತ್ರದುರ್ಗ ಮುರುಘಾಮಠದ
ಡಾ.ಶಿವಮೂರ್ತಿ ಮುರುಘಾ ಶರಣರು (ಸಮಾಜಸೇವೆ),
ಡಾ.ಮುಮ್ತಾಜ್ ಅಹಮದ್ ಖಾನ್ (ಶಿಕ್ಷಣ)
ಪದ್ಮಭೂಷಣ: ಹೋ.ಶ್ರೀನಿವಾಸಯ್ಯ
(ಸಮಾಜ ಸೇವೆ), ಡಾ|ಡಿ.ಜಿ.ಬೆನಕಪ್ಪ
(ವೈದ್ಯಕೀಯ), ಸಾಲುಮರದ ತಿಮ್ಮಕ್ಕ
(ಪರಿಸರ), ಪಂಡಿತ್ ಎಂ.
ವೆಂಕಟೇಶ್ಕುಮಾರ್ (ಹಿಂದುಸ್ತಾನಿ
ಶಾಸ್ತ್ರೀಯ ಸಂಗೀತ),
ಏಣಗಿ ಬಾಳಪ್ಪ (ನಾಟಕ), ಪ್ರೊ|
ಜಿ.ವೆಂಕಟಸುಬ್ಬಯ್ಯ (ನಿಘಂಟು), ಡಾ|
ಕದ್ರಿ ಗೋಪಾಲನಾಥ್ (ಕಲೆ-ಸಾಕೊÕàಫೋನ್), ಡಾ|
ಬಿ.ರಮಣರಾವ್ (ವೈದ್ಯಕೀಯ), ಡಾ|
ಸಿ.ಜಿ.ಕೃಷ್ಣದಾಸ್ ನಾಯರ್ (ವಿಜ್ಞಾನ)
ಪದ್ಮಶ್ರೀ: ಡಾ|
ಸಿ.ಎಂ.ಮುತ್ತಯ್ಯ (ಅಥ್ಲೆಟಿಕ್ಸ್), ಡಾ|
ಎಚ್.ಸುದರ್ಶನ್ ಬಲ್ಲಾಳ್ (ವೈದ್ಯಕಿಯ), ಡಾ|ಭಾರತಿ
ವಿಷ್ಣುವರ್ಧನ್ (ಸಿನಿಮಾ), ಎಚ್.ಸಿ.ತಿಮ್ಮಯ್ಯ
(ವಾಸ್ತು ಶಿಲ್ಪ), ಡಾ|ಪೀಟರ್ ಎ.ಲೂಯಿಸ್
(ಫೈನ್ ಆರ್ಟ್ಸ್), ಮಾಸ್ಟರ್ ಹಿರಣ್ಣಯ್ಯ (ನಾಟಕ),
ಡಾ|ಸಿ.ವಿ.ಹರಿನಾರಾಯಣ (ಆಲೋಪತಿ),
ಎ.ಆರ್.ಶಿವಕುಮಾರ್ (ವಿಜ್ಞಾನ), ಡಾ|ಬಸವರಾಜ್
ನೆಲ್ಲೀಸರ (ಕಲೆ ಮತ್ತು ಸಾಹಿತ್ಯ),
ಎಸ್.ಜಿ.ವಾಸುದೇವ್ (ಚಿತ್ರಕಲೆ), ವಿಕಾಸ ಗೌಡ
(ಅಥ್ಲೆಟಿಕ್ಸ್), ಡಾ|ಎಂ.ಎಂ.ಜೋಶಿ
(ವೈದ್ಯಕೀಯ), ಡಾ|ಪದ್ಮಿನಿ ಪ್ರಸಾದ್
(ವೈದ್ಯಕೀಯ), ಮಧುಪಂಡಿತ್ ದಾಸ್
(ಸಮಾಜಸೇವೆ), ತುಂಬೆ
ಮೊಯಿದ್ದೀನ್ (ಶಿಕ್ಷಣ),
ಡಾ|ಚಂದ್ರಪ್ಪ ಎಸ್.ರೇಶ್ಮಿ
(ವೈದ್ಯಕೀಯ), ಡಾ|ಬಿ.ಟಿ.ರುದ್ರೇಶ್
(ವೈದ್ಯಕೀಯ), ಡಾ|ನಾಗತಿಹಳ್ಳಿ
ಚಂದ್ರಶೇಖರ್ (ಕಲೆ ಮತ್ತು ಸಾಹಿತ್ಯ)
Comments
Post a Comment