ಅ.6 ರಿಂದ ಹಾವೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ :
ಉಡುಪಿ, ಬೆಂಗಳೂರಿನ ಸೇನಾ ನೇಮಕಾತಿ ಮುಖ್ಯ
ಕಾರ್ಯಾಲಯದ ಆಶ್ರಯದಲ್ಲಿ ಮಂಗಳೂರಿನ
ಸೇನಾ ನೇಮಕಾತಿ ಕಚೇರಿಯ ವತಿಯಿಂದ ಅಕ್ಟೋಬರ್
6 ರಿಂದ 9ರವರೆಗೆ ಸೇನಾ ನೇಮಕಾತಿ ರ್ಯಾಲಿ
ಹಾವೇರಿಯ ನೆಹರು ಸ್ಟೇಡಿಯಂನಲ್ಲಿ
ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು
www.joinindianarmy.nic.in ನಲ್ಲಿ ಆನ್ಲೈನ್
ಮೂಲಕ ನೋಂದಣಿ ಮಾಡಬಹುದಾಗಿದೆ. ಪುರುಷ
ಅಭ್ಯರ್ಥಿಗಳಿಗೆ ಸಿಪಾಯಿ ಕ್ಲಾರ್ಕ್ / ಎಸ್.ಕೆ.ಟಿ.,
ಸಿಪಾಯಿ ಜಿಡಿ, ಸಿಪಾಯಿ ಟೆಕ್ನಿಕಲ್ಸ್, ಮಾಜಿ ಸೈನಿಕರು
(ಸೇನೆ) ಮತ್ತು ಡಿ.ಎಸ್.ಸಿ ಹುದ್ದೆಗೆ ರ್ಯಾಲಿ
ಜರುಗಲಿದೆ.
ಅಭ್ಯರ್ಥಿಗಳು ಒಂದು ದಿನ ಮುಂಚಿತವಾಗಿ
ಹಾಜರಿದ್ದು, ಸಮಯಕ್ಕೆ ಸರಿಯಾಗಿ ರ್ಯಾಲಿ
ನಡೆಯುವ ಗ್ರೌಂಡ್ನಲ್ಲಿ ವರದಿ ಮಾಡಿ, ಬೆಳಗ್ಗೆ
8 ಗಂಟೆಗೆ ತಮ್ಮ ಟೋಕನ್ಗಳನ್ನು ಪಡೆಯಬೇಕು.
Comments
Post a Comment