822 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಪೊಲೀಸ್ ಇಲಾಖೆ
ವಿಶೇಷ ಮೀಸಲು ಪೊಲೀಸ್
ಪೇದೆ ಹುದ್ದೆಗಳಿಗೆ ಅಭ್ಯರ್ಥಿಗಳಿಂದ
ಆನ್ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ. ಒಟ್ಟು 822
ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು
ಅಕ್ಟೋಬರ್ 6, 2015 ಕೊನೆ ದಿನ.
ಬೆಟಾಲಿಯನ್-1ರಲ್ಲಿ 177 ಪುರುಷ
ಹುದ್ದೆಗಳು, ಬೆಟಾಲಿಯನ್-3ರಲ್ಲಿ 157
ಪುರುಷ ಹುದ್ದೆಗಳು, 4ನೇ
ಬೆಟಾಲಿಯನ್ನಲ್ಲಿ 91 ಮಹಿಳಾ
ಹುದ್ದೆಗಳು ಮತ್ತು 142 ಪುರುಷ
ಹುದ್ದೆಗಳು, 6ನೇ ಬೆಟಾಲಿಯನ್ನಲ್ಲಿ
79 ಪುರುಷ ಹುದ್ದೆಗಳು, 9ನೇ
ಬೆಟಾಲಿಯನ್ನಲ್ಲಿ 179 ಪುರುಷ
ಹುದ್ದೆಗಳು ಸೇರಿ ಒಟ್ಟು 822
ಹುದ್ದೆಗಳು ಖಾಲಿ ಇವೆ.
ಅಭ್ಯರ್ಥಿಗಳು 10ನೇ ತರಗತಿ
ಉತ್ತೀರ್ಣಗೊಂಡಿರಬೇಕು.
ಕನಿಷ್ಠ ವಯೋಮಿತಿ 18 ವರ್ಷಗಳು.
ಸಾಮಾನ್ಯ ವರ್ಗದವರಿಗೆ ಗರಿಷ್ಠ
ವಯೋಮಿತಿ 25 ವರ್ಷಗಳು. ಎಸ್ಸಿ/ಎಸ್ಟಿ/
ಪ್ರವರ್ಗ -1/2ಎ/2ಬಿ/3ಎ/3ಬಿ
ಅಭ್ಯರ್ಥಿಗಳಿಗೆ 27 ವರ್ಷಗಳು. ಇತರ
ವರ್ಗದವರಿಗೆ 30 ವರ್ಷ.
ಅರ್ಜಿ ಶುಲ್ಕ: ಸಾಮಾನ್ಯ
ವರ್ಗ/2ಎ/2ಬಿ/3ಎ/3ಬಿ ವರ್ಗದವರಿಗೆ ಅರ್ಜಿ
ಶುಲ್ಕ 250 ರೂ., ಎಸ್ಸಿ/ಎಸ್ಟಿ/
ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂ..
ಆನ್ಲೈನ್ ಮೂಲಕ ಅರ್ಜಿಗಳನ್ನು
ಸಲ್ಲಿಸಲು ಕೊನೆಯ ದಿನಾಂಕ
ಅಕ್ಟೋಬರ್ 7, 2015. ಆಸಕ್ತ
ಅಭ್ಯರ್ಥಿಗಳು ಠಿಠಿ://ಠ್ಟಟ್ಚ15.
ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ
ಸಲ್ಲಿಸಬಹುದು. ---
ಅರಣ್ಯಾಧಿಕಾರಿಗಳ ಹುದ್ದೆ ಕರ್ನಾಟಕ
ಅರಣ್ಯ ಇಲಾಖೆ ಉಪ ವಲಯ
ಅರಣ್ಯಾಧಿಕಾರಿ ಹುದ್ದೆಗಳ ಭರ್ತಿಗೆ
ಅರ್ಜಿ ಆಹ್ವಾನಿಸಿದೆ. ಹೈದರಾಬಾದ್-
ಕರ್ನಾಟಕ ಪ್ರದೇಶಕ್ಕೆ ಸೇರಿದ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸಾರ್ವಜನಿಕ ಉದ್ಯೋಗ
(ಹೈದರಾಬಾದ್-ಕರ್ನಾಟಕ
ಪ್ರದೇಶಕ್ಕೆ ನೇಮಕಾತಿಯಲ್ಲಿ
ಮೀಸಲಾತಿ) ನಿಯಮ 2013ರ ನಿಯಮ
ಗಳಂತೆ ಅರ್ಜಿಗಳನ್ನು
ಆಹ್ವಾನಿಸಲಾಗಿದೆ. ಅಕ್ಟೋಬರ್ 13,
2015ರ ವರೆಗೆ ಅರ್ಜಿಗಳನ್ನು ಸಲ್ಲಿಸಲು
ಅವಕಾಶವಿದೆ. ಬೀದರ್, ಕಲಬುರಗಿ,
ಯಾದಗಿರಿ, ರಾಯಚೂರು,
ಕೊಪ್ಪಳ ಮತ್ತು ಬಳ್ಳಾರಿ ವಿಭಾಗಗಳ
ಒಟ್ಟು 19 ಉಪ ವಲಯ
ಅರಣ್ಯಾಧಿಕಾರಿ ಹುದ್ದೆಗಳನ್ನು ಭರ್ತಿ
ಮಾಡಲಾಗುತ್ತದೆ. ಹೈದರಾಬಾದ್-
ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು
ಮಾತ್ರ ಅರ್ಜಿ ಸಲ್ಲಿಸಬೇಕು.
ಆನ್ಲೈನ್ ಮೂಲಕ ಸಲ್ಲಿಸುವ
ಅರ್ಜಿಗಳನ್ನು ಮಾತ್ರ
ಪರಿಗಣಿಸಲಾಗುತ್ತದೆ. ---
ವಿಜಯ ಬ್ಯಾಂಕ್ನಲ್ಲಿ ಉದ್ಯೋಗ
ವಿಜಯಬ್ಯಾಂಕ್ ಖಾಲಿ ಇರುವ
ಸುಮಾರು 36 ಪ್ರೊಬೇಷನರಿ
ಆಫೀಸರ್ (ಮ್ಯಾನೇಜರ್ -
ಸೆಕ್ಯುರಿಟಿ/ ರಾಜ್ಯಭಾಷಾ)
ಹುದ್ದೆಗಳನ್ನು ಭರ್ತಿ ಮಾಡಲು
ಆನ್ಲೈನ್ ಮೂಲಕ ಅರ್ಹ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸೆಪ್ಟೆಂಬರ್ 19, 2015 ಅರ್ಜಿ ಸಲ್ಲಿಕೆಗೆ
ಕೊನೆಯ ದಿನವಾಗಿದೆ. ವಯೋಮಿತಿ
20ರಿಂದ 45 ವರ್ಷದೊಳಗಿರಬೇಕು.
ಪದವಿ ಅಥವಾ ಇಂಗ್ಲಿಷ್/ ಹಿಂದಿಯಲ್ಲಿ
ಸ್ನಾತಕೋತ್ತರ ಪದವಿ
ಪೂರೈಸಿರುವ ಆಸಕ್ತರು ತಮ್ಮ
ವಿದ್ಯಾರ್ಹತೆಗೆ ಸರಿಹೊಂದುವ
ಮೇಲಿನ ಹುದ್ದೆಗಳಿಗೆ ಅರ್ಜಿ
ಸಲ್ಲಿಸಬಹುದು. ಅರ್ಜಿ ಶುಲ್ಕ 300
ರೂ. ಅಂಚೆ ಮೂಲಕ ಅರ್ಜಿ
ಸಲ್ಲಿಸುವವರು, ಅಂಚೆ ಕವರ್ ಮೇಲೆ
ಱಹುದ್ದೆಯ ಹೆಸರುೞ ಬರೆದು ಅಗತ್ಯ
ದಾಖಲೆಗಳ ಜೊತೆಗೆ ಱವಿಜಯ
ಬ್ಯಾಂಕ್, ಅಂಚೆಪಟ್ಟಿಗೆ ನಂ. 5136,
ಪ್ರಧಾನ ಅಂಚೆ ಕಚೇರಿ,
ಬೆಂಗಳೂರು- 560001ೞ ಇಲ್ಲಿಗೆ
ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ:
vijayabank.com ---
ಇಸ್ರೋದಲ್ಲಿ ಜಾಬ್ಸ್ ಭಾರತೀಯ
ಬಾಹ್ಯಾಕಾಶ ಸಂಶೋಧನಾ
ಸಂಸ್ಥೆ (ಇಸ್ರೊ) ತನ್ನ ವಿವಿಧ ಘಟಕ
ಗಳಲ್ಲಿ ಖಾಲಿ ಇರುವ ಲಘು ವಾಹನ
ಚಾಲಕರು, ಬೃಹತ್ ವಾಹನ
ಚಾಲಕರು ಮತ್ತು ಸ್ಟ್ಯಾಫ್ ಕಾರ್
ಚಾಲಕರ ಹುದ್ದೆಗಳನ್ನು ಭರ್ತಿ
ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ
ಆಹ್ವಾನಿಸಿದೆ. ವಿದ್ಯಾರ್ಹತೆ: ಎಸ್ಎಸ್ಎಲ್ಸಿ
ತೇರ್ಗಡೆ ಮತ್ತು 3ರಿಂದ 5 ವರ್ಷಗಳ
ಸೇವಾನುಭವ ಹಾಗೂ ತನ್ನ
ಹುದ್ದೆಗೆ ಅಗತ್ಯವಾದ ಚಾಲನಾ
ಪರವಾನಗಿ ಹೊಂದಿರಬೇಕು.
ಗರಿಷ್ಠ ವಯೋಮಿತಿ 35 ವರ್ಷಗಳು.
ಆಸಕ್ತರು ಸೆಪ್ಟೆಂಬರ್ 24, 2015ರೊಳಗೆ
ಆನ್ಲೈನ್ನಲ್ಲಿ ಮಾತ್ರ ಅರ್ಜಿ
ಸಲ್ಲಿಸಬಹುದು. ಆಯ್ದ ಅಭ್ಯರ್ಥಿಗಳಿಗೆ
ನವೆಂಬರ್ 08, 2015ರಂದು ಲಿಖಿತ
ಪರೀಕ್ಷೆ ನಡೆಸಲಾಗುವುದೆಂದು
ಇಸ್ರೊ ಪ್ರಕಟಣೆ ತಿಳಿಸಿದೆ. ಹೆಚ್ಚಿನ
ಮಾಹಿತಿಗೆ: isro.gov.in ---
ಕ್ಯಾನ್ಫಿನ್ ಹೋಮ್ಸ್ ಹುದ್ದೆಗಳು
ಕ್ಯಾನ್ಫಿನ್ ಹೋಮ್ಸ್ ಲಿಮಿಟೆಡ್
ದೇಶದ ವಿವಿಧ ಘಟಕಗಳಲ್ಲಿ ಖಾಲಿ
ಇರುವ ಜೂನಿಯರ್ ಆಫೀಸರ್
ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ
ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ
ಅರ್ಜಿ ಆಹ್ವಾನಿಸಿದೆ. ಸುಮಾರು 25
ಹುದ್ದೆಗಳು ಖಾಲಿ ಇದ್ದು, ಸೆಪ್ಟೆಂಬರ್
25, 2015 ಅರ್ಜಿ ಸಲ್ಲಿಸಲು ಕೊನೆ
ದಿನವಾಗಿದೆ. ವಯೋಮಿತಿ 21ರಿಂದ 30
ವರ್ಷದೊಳಗಿರಬೇಕು. ಪದವಿ
ಪೂರೈಸಿರುವ ಹಾಗೂ ಇಂಗ್ಲಿಷ್
ಮತ್ತು ಸ್ಥಳೀಯ ಭಾಷೆಯನ್ನು
ಬಲ್ಲ ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸಂಸ್ಥೆಯ
ವೆಬ್ಸೈಟ್ನಿಂದ ಡೌನ್ಲೋಡ್
ಮಾಡಿಕೊಂಡು
ಕಳುಹಿಸಬೇಕಾದ ವಿಳಾಸ: ಡೆಪ್ಯುಟಿ
ಜನರಲ್ ಮ್ಯಾನೇಜರ್ (ಎಚ್ಆರ್ಎಂ),
ಕ್ಯಾನ್ಫಿನ್ ಹೋಮ್ಸ್ ಲಿ, ನಂ. 29/1,
3ನೇ ಮಹಡಿ, ಸರ್ ಎಂ.ಎನ್. ಕೃಷ್ಣರಾವ್
ರಸ್ತೆ, ಬಸವನಗುಡಿ ಬೆಂಗಳೂರು- 560
004, ದೂ.: 080- 26564267 ವೆಬ್ ವಿಳಾಸ:
canfinhomes.com>
Comments
Post a Comment