ದೆಹಲಿ, ಮುಂಬೈ ವಿಶ್ವದ ಅತಿ ಕಡಿಮೆ ವೆಚ್ಚದ ನಗರಗಳು
ನವದೆಹಲಿ: ಲಂಡನ್ ಹಾಗೂ ವಿಶ್ವದ ಇತರೆ
ನಗರಗಳಿಗೆ ಹೋಲಿಕೆ ಮಾಡಿದರೆ ದೆಹಲಿ ಹಾಗೂ
ಮುಂಬೈ ವಾಸಿಸಲು ವಿಶ್ವದಲ್ಲೇ ಅತಿ ಕಡಿಮೆ
ಖರ್ಚಿನ ನಗರಗಳು ಎಂದು ಸ್ವಿಸ್
ಬ್ಯಾಂಕ್ ಯುಬಿಎಸ್ ವರದಿ ಹೇಳಿದೆ.
ವಸತಿ, ಸಾರಿಗೆ, ಆಹಾರ, ವಸ್ತ್ರ, ಮನೆ ಬಳಕೆ ವಸ್ತುಗಳು
ಹಾಗೂ ಮನರಂಜನೆಯನ್ನು
ಆಧಾರವಾಗಿಟ್ಟುಕೊಂಡು ಈ ಸಮೀಕ್ಷೆ
ನಡೆಸಲಾಗಿದ್ದು, ಅತಿ ವೆಚ್ಚದಾಯಕ ನಗರಗಳ
ಪಟ್ಟಿಯಲ್ಲಿ ಜ್ಯೂರಿಚ್ ಮೊದಲ
ಸ್ಥಾನದಲ್ಲಿದ್ದು, ಜೆನೆವಾ ಹಾಗೂ ನ್ಯೂಯಾರ್ಕ್
ನಂತರದ ಸ್ಥಾನದಲ್ಲಿವೆ. ಇನ್ನು ಬ್ರಿಟಿಷ್
ರಾಜಧಾನಿ ಲಂಡನ್ ಐದನೇ ಸ್ಥಾನ ಪಡೆದಿದೆ. ಈ
ನಗರಗಳಲ್ಲಿ ಮನೆ ಬಾಡಿಗೆ ಸೇರಿದಂತೆ
ಜೀವನ ವೆಚ್ಚ ಅತ್ಯಂತ ದುಬಾರಿ
ಎಂದು ವರದಿ ತಿಳಿಸಿದೆ.
ಜ್ಯೂರಿಚ್ ತೆರಿಗೆಗಳ್ಳರ ಸ್ವರ್ಗವಾಗಿರುವ ಕಾರಣ ಈ
ನಗರಗಳಲ್ಲಿ ಜೀವನ ವೆಚ್ಚ ವಿಶ್ವದಲ್ಲೇ
ದುಬಾರಿಯಾಗಿ ಪರಿಣಮಿಸಿದೆ.
ಇನ್ನು ಅತ್ಯಂತ ಕಡಿಮೆ ಖರ್ಚಿನ ನಗರಗಳ
ಪಟ್ಟಿಯಲ್ಲಿ, ಬಲ್ಲೇರಿಯಾದ
ಸೊಫಿಯಾ ಹಾಗೂ ಭಾರತದ ದೆಹಲಿ ಮತ್ತು
ಮುಂಬೈ ನಗರಗಳು ಸ್ಥಾನ ಪಡೆದಿವೆ.
Posted by: Lingaraj Badiger | Source:
Reuters
Comments
Post a Comment