ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ವಿಧಿವಶ:
ಕೊಲ್ಕತ್ತಾ, ಸೆ 20: ಹೃದಯ
ಸಂಬಂಧ ಕಾಯಿಲೆಗಳಿಂದ
ಬಳಲುತ್ತಿದ್ದ ಬಿಸಿಸಿಐ ಅಧ್ಯಕ್ಷ ಜಗಮೋಹನ್
ದಾಲ್ಮಿಯಾ (75) ಕೊಲ್ಕತ್ತಾದ ಬಿ
ಎಂ ಬಿರ್ಲಾ ಆಸ್ಪತ್ರೆಯಲ್ಲಿ
ಕೊನೆಯುಸಿರೆಳೆದಿದ್ದಾರೆ.
ಎದೆ ನೋವಿನಿಂದ ಬಳಲುತ್ತಿದ್ದ ದಾಲ್ಮಿಯಾ
ಅವರಿಗೆ ಗುರುವಾರ (ಸೆ 17) ರಾತ್ರಿ ಒಂಬತ್ತು
ಗಂಟೆಯಿಂದ ಚಿಕಿತ್ಸೆ
ನೀಡಲಾಗುತ್ತಿತ್ತು.
2001-2004ರ ಅವಧಿಯಲ್ಲಿ ವಿಶ್ವದ
ಶ್ರೀಮಂತ ಕ್ರೀಡಾ
ಸಂಸ್ಥೆ ಬಿಸಿಸಿಐ ಅಧ್ಯಕ್ಷರಾಗಿದ್ದ
ದಾಲ್ಮಿಯಾ, ಮಾರ್ಚ್ 2014ರಲ್ಲಿ ಎರಡನೇ ಬಾರಿಗೆ
ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕೊಲ್ಕತ್ತಾದ ಪ್ರತಿಷ್ಠಿತ ದಾಲ್ಮಿಯಾ
ಕಂಪೆನಿಯ ಮಾಲೀಕರಾಗಿದ್ದ
ದಾಲ್ಮಿಯಾ ಅವರಿಗೆ
ಮೊದಲಿಂದಲೂ ಕ್ರಿಕೆಟ್ ಆಟದ
ಬಗ್ಗೆ ಸೆಳೆತವಿತ್ತು.
ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್
ಕೌನ್ಸಿಲ್) ಅಧ್ಯಕ್ಷರಾದ ದಾಲ್ಮಿಯಾ, ಈ ಹುದ್ದೆ
ಅಲಂಕರಿಸಿದ ಮೊದಲ
ಭಾರತೀಯ ಎನ್ನುವ ಹೆಗ್ಗಳಿಕೆಗೂ
ಪಾತ್ರರಾಗಿದ್ದರು.
Comments
Post a Comment