ನೇಪಾಳದಲ್ಲಿನ್ನು ಗೋವು ರಾಷ್ಟ್ರೀಯ ಪ್ರಾಣಿ !:
ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು
ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನ
ಹಿಂದೆಯೇ ನೇಪಾಳದಲ್ಲಿ ಹಿಂದುಗಳ
ಆರಾಧ್ಯ ದೈವ ಗೋವನ್ನು ರಾಷ್ಟ್ರೀಯ
ಪ್ರಾಣಿಯೆಂದು ಅಲ್ಲಿನ ಸರ್ಕಾರ ಘೋಷಿಸುವ
ಮೂಲಕ ಗೋವಿನ ರಕ್ಷಣೆಗೆ ಮುಂದಾಗಿದೆ.
ಹಲವು ವರ್ಷಗಳ ರಾಜಕೀಯ
ಮೇಲಾಟಗಳ ನಂತರ ಸೋಮವಾರ
ಹೊಸ ಜಾತ್ಯಾತೀತ
ಸಂವಿಧಾನವನ್ನು ನೇಪಾಳ ಸಂಸತ್ತು
ಅನುಮೋದಿಸಿದ್ದು, ಹಿಂದುಗಳ ಆರಾಧ್ಯ ದೈವವಾದ
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಆ
ಮೂಲಕ ಗೋವಿಗೆ ಸಂವಿಧಾನಾತ್ಮಕ ರಕ್ಷಣೆಯನ್ನು
ನೀಡುವುದರ ಜತೆಗೆ ಗೋವಧೆಯನ್ನು
ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂಬ
ಮಾಹಿತಿ ಲಭ್ಯವಾಗಿದೆ.
ನೇಪಾಳವನ್ನು ಹಿಂದೂ ರಾಷ್ಟ್ರ ಎಂದು
ಘೋಷಿಸಬೇಕು ಎಂದು ಭಾರೀ ಪ್ರಮಾಣದ
ಪ್ರತಿಭಟನೆ ನಡೆಯುತ್ತಿತ್ತು. ಈ ನಡುವೆ ಕೆಲವು
ಸಂಸದರು ಒಂದು
ಕೊಂಬಿನ
ಘೇಂಡಾಮೃಗವನ್ನು ರಾಷ್ಟ್ರೀಯ
ಪ್ರಾಣಿಯಾಗಿ ಘೋಷಿಸಬೇಕೆಂದು ಮನವಿ
ಮಾಡಿದ್ದರು. ಆದರೆ ಅಂತಿಮವಾಗಿ ಸರ್ಕಾರ
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ
ಗೋವುಗಳ ಉಳಿವಿಗೆ ಮುಂದಾಗಿದೆ.
Comments
Post a Comment