★ ಮೆದುಳಿನ ಶಕ್ತಿ ವೃದ್ಧಿಸಲು ಇಲ್ಲಿವೆ ಪರಿಣಾಮಕಾರಿ ಆಹಾರಗಳು ★
ನವದೆಹಲಿ(ಸೆ.19): 12 ವರ್ಷದ ಭಾರತ ಮೂಲದ ಹುಡುಗಿಯೊಬ್ಬಳು ಖ್ಯಾತ ವಿಜ್ಞಾನಿ ಐನ್'ಸ್ಟೈನ್'ಗೂ ಮೀರಿದ ಬುದ್ಧಿಮತ್ತೆ ಹೊಂದಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ಹುಡುಗಿ 162 ಐಕ್ಯೂ ಸ್ಕೋರ್ ಮಾಡಿದ್ದಳು. ಅಂದಹಾಗೆ, ಹೈಪ್ರೋಟಿನ್ ಡಯಟ್'ನಿಂದ ಬ್ರೈನ್ ಪವರ್ ಹೆಚ್ಚಾಗುತ್ತದೆ ಎನ್ನುವ ಅಂಶ ಸಂಶೋಧನೆಯಿಂದ ಧೃಡಪಟ್ಟಿದೆ. ಅದರಲ್ಲೂ ಭಾರತದ ಈ ಪರಿಣಾಮಕಾರಿ ಆಹಾರಗಳು ಬ್ರೈನ್ ಪವರ್ ಹೆಚ್ಚಿಸಲು ಸಹಕಾರಿಯಾಗುತ್ತವೆ ಎನ್ನುತ್ತಿದೆ ಸಂಶೋಧನೆ.
1. ಮೀನು: ಮೀನನ್ನ ಬ್ರೈನ್ ಫುಡ್ ಎಂದೇ ಪರಿಗಣಿಸಲಾಗುತ್ತೆ. ಇದರಲ್ಲಿ ಒಮೇಗಾ-3 ರ್ಫಯಾಟಿ ಆಸಿಡ್ ಮೆದುಳು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಲ್ಮೋನ್, ಟೂನಾ ಮತ್ತು ಬಂಗುಡೆ ಫಿಸ್'ಗಳು ಒಮೇಗಾ-3 ಫ್ಯಾಟಿ ಆಸಿಡನ್ನ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಮೆದುಳಿನ ಅಭಿವೃದ್ಧಿಗೆ ಸಹಕಾರಿಯಾಗುತ್ತವೆಯಂತೆ. ಅಧಿಕ ಪ್ರಮಾಣದ ಪ್ರೋಟಿನ್ ಸಹ ಈ ಮೀನುಗಳಲ್ಲಿ ಇರುತ್ತೆ.
2. ಮೊಟ್ಟೆ: ಜ್ಞಾಪಕಶಕ್ತಿ ಅಷ್ಟಾಗಿ ಸರಿ ಇಲ್ಲ ಎನ್ನುವ ಸಮಸ್ಯೆ ನಿಮಗಿದ್ದರೆ ಈ ಪವರ್'ಫುಲ್ ಆಹಾರ ಸೇವಿಸಿ. ಕೋಳಿ ಮೊಟ್ಟೆ.. ಪೌಷ್ಠಿಕಾಂಶದ ಆಗರವಾಗಿರುವ ಮೊಟ್ಟೆಯೂ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಕೊಲೈನ್, ವಿಟಮಿನ್ ಎ,ಬಿ ಮುಂತಾದ ಅಂಶಗಳು ಮೊಟ್ಟೆಯಲ್ಲಿರುತ್ತವೆ.
3. ಡ್ರೈಫ್ರೂಟ್ಸ್, ಬೀಜ: ಪಿಸ್ತಾ, ವಾಲ್ ನಟ್, ಬಾದಾಮಿ ಮುಂತಾದ ಬೀಜಗಳಲ್ಲಿರುವ ವಿಟಮಿನ್ ಇ ಜ್ಞಾಪಕಶಕ್ತಿಗೆ ಪರಿಣಾಮಕಾರಿ. ವಿಟಮಿನ್-ಇ ಹೇರಳವಾಗಿರುವ ಈ ಬೀಜಗಳನ್ನ ಸೇವಿಸುವುದರಿಒಂದ ಮುಪ್ಪಿನಲ್ಲಿ ಮರೆಯುವಿಕೆ ಸಮಸ್ಯೆ ತಪ್ಪುತ್ತೆ.
4. ಹೂಕೋಸು, ಎಲೆಕೋಸು: ಸಸ್ಯಾಹಾರಿಗಳಿಗೆ ಪರಿಣಾಮಕಾರಿ ಆಹಾರಗಳಿವು. ಇವುಗಳಲಲ್ಇಉರವ ವಿಟಮಿನ್ ಕೆ ಮೆದುಳಿನ ಅರಿವಿನ ಕಾರ್ಯವನ್ನ ಹೆಚ್ಚಿಸುತ್ತದೆ. ಇವುಗಳಲ್ಲಿರುವ ಸಲ್ಫೋರಾಫೆನ್ ಮತ್ತು ಕೆಮಿಕಾಲ್ವಿಚ್'ಗಳು ಮೆದುಳನ್ನ ತೀಕ್ಷ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ.
5. ಕುಂಬಳಕಾಯಿ, ಸೂರ್ಯಕಾಂತಿ ಬೀಜಗಳು: ಕುಂಬಳಕಾಯಿ ಮತ್ತು ಸೂರ್ಯಕಾಂತಿ ಬೀಜ ವಿಟಮಿನ್ ಇ ಹೇರಳವಾಗಿರುವ ಆಹಾರಗಳು. ಇದು ಮೆದುಳಿನ ಶಕ್ತಿಯನ್ನ ಹೆಚ್ಚಿಸುತ್ತದೆ. ಅದರಲ್ಲೂ ಕುಂಬಳಕಾಯಿ ಬೀಜದಲ್ಲಿರುವ ಮ್ಯಾಗ್ನೀಶಿಯಂ ಅಂಡೋಮೆಗಾ-3 ಮೆದುಳು ತಾಳ್ಮೆಯಿಮದರಲು ಸಹಕರಿಸುತ್ತದೆ.
6. ಟೊಮೆಟೋ: ಪ್ರತಿದಿನ ಅಡುಗೆ ಮನೆಯಲ್ಲಿ ಬಳಸುವ ಹಣ್ಣು ಟೊಮೆಟೋ. ಲೈಕೋಪೆನ್ ಎಂಬ ಪರಿಣಾಮಕಾರಿ ಆಂಟಿಆಕ್ಸಿಡೆಂಟ್ಸ್ ಟೊಮೆಟೋದಲ್ಲಿರುತ್ತದೆ. ಮೆದುಳಿನ ಜೀವಕೋಶಗಳು ಹಾನಿಯಾಗದಂತೆ ಇದು ತಡೆಯುತ್ತದೆ. ಮತಿಭ್ರಮಣೆಯಂತಹ ಸಮಸ್ಯೆ ನಿವಾರಿಸುತ್ತದೆ.
ಮಾಹಿತಿಯ ಮೂಲ: SUVARNA NEWS 24X7.
Comments
Post a Comment