ಇನ್ನು ಮುಂದೆ ಎಸ್ಸೆಮ್ಮೆಸ್ ಪ್ರಮಾಣಪತ್ರ ಅಧಿಕೃತ ಕಾಗದ ರಹಿತ ಪ್ರಮಾಣ ಪತ್ರ ಒಪ್ಪಿಕೊಳ್ಳಲು ಸೂಚನೆ
ಬೆಂಗಳೂರು : ಶಿಕ್ಷಣ ಇಲಾಖೆಯಲ್ಲಿ ಇನ್ನು
ಮುಂದೆ ಎಸ್ ಎಂಎಸ್ ರೂಪದ
ಸಂದೇಶವೇ ಪ್ರಮಾಣ ಪತ್ರದಂತೆ
ಬಳಕೆಯಾಗಲಿದೆ. ಮುದ್ರಿತ ಪ್ರಮಾಣಪತ್ರಗಳ
ಬದಲಾಗಿ ಕಂದಾಯ ಇಲಾಖೆ ನೂತನವಾಗಿ ಜಾರಿಗೆ
ತಂದಿರುವ ಕಾಗದರಹಿತ ಪ್ರಮಾಣಪತ್ರ
ಸೇವೆಯನ್ನು ಒಪ್ಪಿಕೊಳ್ಳುವಂತೆ
ಶಿಕ್ಷಣ ಇಲಾಖೆಯು ಶಾಲೆಗಳಿಗೆ ಮತ್ತು ತನ್ನ
ಅಧೀನ ಕಚೇರಿಗಳಿಗೆ ಸೂಚನೆ
ನೀಡಿದೆ.
ಕಾಗದರಹಿತ ಪ್ರಮಾಣಪತ್ರ ಸೇವೆಯನ್ನು
ಅಟಲ್ಜೀ ಜನಸ್ನೇಹಿ
ಕೇಂದ್ರಗಳಿಂದ ಪಡೆಯುವ ವ್ಯವಸ್ಥೆ
ಮೇ ತಿಂಗಳಿಂದಲೇ ಜಾರಿಯಲ್ಲಿದೆ.
ಅರ್ಜಿದಾರರು ಅಥವಾ ವಿದ್ಯಾರ್ಥಿಗಳಿಗೆ ಭೌತಿಕವಾಗಿ
ಪ್ರಮಾಣ ಪತ್ರ ನೀಡದೇ ನಮೂದಿಸಿದ
ಗಣಕೀಕೃತ ಸಂಖ್ಯೆ
ನೀಡಲಾಗುತ್ತಿದ್ದು, ಆ
ಸಂಖ್ಯೆಯನ್ನು ನಾಡ ಕಚೇರಿ ವೆಬ್ಸೈಟ್
ಪರಿಶೀಲಿಸಿ ಕ್ರಮ ವಹಿಸಲು ತಿಳಿಸಲಾಗಿದೆ.
ಅರ್ಜಿದಾರರು ಅಥವಾ ವಿದ್ಯಾರ್ಥಿಗಳು ವಿವಿಧ
ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು
ವಿದ್ಯುನ್ಮಾನವಾಗಿ ಅನುಮೋ ದಿಸಿ ನಂತರ
ಪ್ರಮಾಣಪತ್ರಗಳಿಗೆ ಒಂದು ವಿಶಿಷ್ಟವಾದ
ಗಣಕೀಕೃತ ಸಂಖ್ಯೆ
ನೀಡಲಾಗುತ್ತಿದೆ. ಈ ಪ್ರಮಾಣಪತ್ರದ
ಸಂಖ್ಯೆಯನ್ನು ವಿದ್ಯಾರ್ಥಿಗಳು ಅಥವಾ
ಅರ್ಜಿದಾರರು ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲೆಗಳಿಗೆ,
ಇಲಾಖೆಗಳಿಗೆ ಸಲ್ಲಿಸಬೇಕಾಗಿರುವ ಅರ್ಜಿಯಲ್ಲಿ
ನಮೂದಿಸಬೇಕಾಗಿರುತ್ತದೆ.
ಅರ್ಜಿಯೊಂದಿಗೆ ಮುದ್ರಿತ
ಪ್ರಮಾಣಪತ್ರಗಳನ್ನು ಇನ್ನು ಮುಂದೆ
ಲಗತ್ತಿಸುವ ಅಗತ್ಯವಿರುವುದಿಲ್ಲ. ಶಾಲಾ
ಮುಖ್ಯಸ್ಥರು ಮತ್ತು ಇತರೆ ಇಲಾಖೆಗಳು ನಾಡ
ಕಚೇರಿಯ ವೆಬ್ಸೈಟ್ಗೆ ಪ್ರವೇಶ
ಹೊಂದಿ ನಾಡ ಕಚೇರಿ
ಪ್ರಮಾಣಪತ್ರ ಪರಿಶೀಲನೆ ಲಿಂಕ್
ನಲ್ಲಿ ಗಣಕೀಕೃತ ಪ್ರಮಾಣ ಪಚ್ರದ
ಸಂಖ್ಯೆಯನ್ನು ನಮೂದಿಸಿದಲ್ಲಿ ನೈಜ
ಪ್ರಮಾಣಪತ್ರದ ಸಾಫ್ಟ್ ಪ್ರತಿ
ವೀಕ್ಷಿಸಬಹುದಾಗಿದೆ ಎಂದು
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಸತ್ಯಮೂರ್ತಿಯವರು ತಮ್ಮ ಆದೇಶದಲ್ಲಿ
ವಿವರಿಸಿದ್ದಾರೆ.
ಪ್ರಮಾಣಪತ್ರ ಸಂಖ್ಯೆ ಮಾನ್ಯ : ಶಾಲಾ
ಮುಖ್ಯಸ್ಥರು ಮತ್ತು ಇತರೆ ಇಲಾಖೆಗಳು
ಅಗತ್ಯವಿದ್ದಲ್ಲಿ ಪ್ರಮಾಣಪತ್ರವನ್ನು ಸಾಫ್ಟ್
ಪ್ರತಿಯ ಮೂಲಕ ಸಾಮಾನ್ಯ ಹಾಳೆಯಲ್ಲಿ
ಮುದ್ರಿಸಿಕೊಳ್ಳಬಹುದಾಗಿದೆ. ಕಾನೂನು
ರೀತಿಯಲ್ಲಿ ಎಲ್ಲಾ ಉದ್ದೇಶಗಳಿಗೆ
ಪ್ರಮಾಣಪತ್ರದಲ್ಲಿರುವ ಗಣಕೀಕೃತ
ಸಂಖ್ಯೆಯನ್ನು
ಉಪಯೋಗಿಸಿಕೊಳ್ಳಬಹುದು. ಹಾಗೂ
ಪ್ರಮಾಣಪತ್ರ ಬದಲು ಪ್ರಮಾಣಪತ್ರ
ಸಂಖ್ಯೆ ಮಾನ್ಯವಾಗಿರುತ್ತದೆ ಎಂದು
ಇಲಾಖೆ ಆಯುಕ್ತರು ಆದೇಶದಲ್ಲಿ ವಿವರಿಸಿದ್ದಾರೆ.
ಇದಲ್ಲದೇ ಪ್ರಮಾಣಪತ್ರದ ನೈಜತೆಯನ್ನು
ಎಸ್ಎಂಎಸ್ ಮೂಲಕ ಪರೀಕ್ಷಿಸಲು
ಸಂಖ್ಯೆ 51969ಗೆ ಎಂದು
ಎಸ್ಎಂಎಸ್ ಮಾಡಬಹುದಾಗಿದೆ.
ಎಸ್ಎಂಎಸ್ಗೆ ಪ್ರತಿಕ್ರಿಯೆ ನೀಡಿ,
ಪ್ರಮಾಣಪತ್ರದ ಪೂರ್ಣ ಮಾಹಿತಿಯನ್ನು
ನೀಡಲಾಗುತ್ತದೆ. ಕಾಗದರಹಿತ
ಪ್ರಮಾಣಪತ್ರದ ಸೇವೆಯಲ್ಲಿ ನೀಡುವ
ಗಣಕೀಕೃತ ಪ್ರಮಾಣಪತ್ರದ
ಸಂಖ್ಯೆಯು ಪರಿಶೀಲನಾ
ನಂತರ ನೈಜ ಮುದ್ರಿತ ಪ್ರಮಾಣಪತ್ರಕ್ಕಿರುವ
ಮಾನ್ಯತೆ ಹೊಂದಿರುತ್ತದೆ.
ಹೀಗಾಗಿ ಪ್ರಸ್ತುತ ವ್ಯವಸ್ಥೆಯಲ್ಲಿ
ವಿತರಿಸುತ್ತಿರುವ ಮುದ್ರಿತ ಪ್ರಮಾಣಪತ್ರದ
ಅಗತ್ಯವಿರುವುದಿಲ್ಲ ಎಂದು ಇಲಾಖೆ
ಸ್ಪಷ್ಟಪಡಿಸಿದೆ. ಒಂದು ವೇಳೆ ಅರ್ಜಿದಾರರು
ಮುದ್ರಿತ ಪ್ರಮಾಣಪತ್ರಗಳನ್ನು
ನೀಡಿದಲ್ಲಿ ನಾಡಕಚೇರಿಯ ವೆಬ್ಸೈಟ್ನಲ್ಲಿ
ಪ್ರಮಾಣಪತ್ರದ ಸಂಖ್ಯೆಯನ್ನು
ಪರಿಶೀಲಿಸಿ ದಾಖಲೆಗಳಿಗಾಗಿ
ಪ್ರಮಾಣಪತ್ರವನ್ನು
ಮುದ್ರಿಸಿಕೊಂಡು ಅರ್ಜಿದಾರರಿಗೆ
ಮೂಲ ಪ್ರಮಾಣಪತ್ರ ಹಿಂದಿರುಗುವಂತೆ
ಸೂಚಿಸಲಾಗಿದೆ.
ಈ ಆದೇಶವನ್ನು ಜಾರಿಗೆ ತರುವಂತೆ ಎಲ್ಲಾ
ಡಿಡಿಪಿಐ, ಬಿಇಓ, ಡಯಟ್,
ಕೇಂದ್ರೀಕೃತ. ದಾಖಲಾತಿ ಘಟಕ
,ನಿರ್ದೇಶಕರರ ಕಚೇರಿಗೆ ಸೂಚಿಸಲಾಗಿದೆಯಲ್ಲದೇ
ಶಾಲೆಗಳಿಗೂ ಮಾಹಿತಿ ನೀಡುವಂತೆ
ನಿರ್ದೇಶಿಸಲಾಗಿದೆ.
Posted by: Shilpa D | Source: Online
Desk
Comments
Post a Comment