ಗಣೇಶನ ಜನ್ಮ ರಹಸ್ಯ:
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ
ಅಗ್ರಜ ಸ್ಥಾನ ಪಡೆದಿರುವ ವಿಘ್ನ ವಿನಾಯಕನಿಗೆ
ಮೊದಲ ಪೂಜೆ ಸಲ್ಲುತ್ತದೆ.
ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ,
ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
ಶಿವಪುರಾಣದಲ್ಲಿ ಗಣೇಶನ ಜನ್ಮ ರಹಸ್ಯ
ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ
ಜೊತೆಯಲ್ಲಿರುವಾಗ ಅಲ್ಲಿಗೆ
ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು
ಗಣವೊಂದು ಇಟ್ಟಿದ್ದರೂ ಕೂಡ
ಈ ರೀತಿ ತನ್ನ ಪತಿಯೇ ಆಗಲಿ
ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ
ಸ್ವಲ್ಪ ಅಸಮಧಾನವನ್ನು ಉಂಟುಮಾಡಿತು.
ಇದಕ್ಕಾಗಿ ಪಾರ್ವತಿ ಒಂದು ನಿರ್ಣಯಕ್ಕೆ
ಬರುತ್ತಾಳೆ. ಸ್ನಾನಕ್ಕಾಗಿ ಹೋಗುವ
ಮೊದಲು ತನ್ನ ಮೈಯಲ್ಲಿರುವ
ಮಣ್ಣಿನಿಂದ ಮುದ್ದಾದ ಒಂಗು
ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ
ತುಂಬಿದಳು. ಅವನ ಕೈಯಲ್ಲಿ
ದಂಡವೊಂದನ್ನು
ಕೊಟ್ಟು ಸ್ನಾನಗ್ರಹದ ಬಾಗಿಲು
ಕಾಯಲು ನೇಮಿಸಿದಳು. ನಂತರ ಯಥಾವತ್ತಾಗಿ
ಅಪೇಕ್ಷಿತವೆಂಬಂತೆ ಕೈಲಾಸಪತಿಯ
ಆಗಮನವಾಗುತ್ತೆ. ಈ ಪುಟ್ಟ ದ್ವಾರಪಾಲಕ ತನ್ನ
ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ
ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ.
ಇದೇನು, ಈ ಹುಡುಗ, ಯವನೋ ಹೊಸಬ,
ನನ್ನನ್ನು ತಡೆಯುತ್ತಿರುವನಲ್ಲ ಎಂದು
ಕೋಪಿಸಿಗೊಂಡ ರುದ್ರ ಯಾರು
ನೀನು? ಎಂದು ಅವನ ಕುರಿತು ಕೇಳುತ್ತಾನೆ.
ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ
ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲು ಬಿಡಲು
ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು
ಒಳಹೋಗಲು ಬಿಡುವುದಿಲ್ಲ ಎಂದು ಬಾಲಕ ಶಿವನಿಗೆ
ಹೇಳುತ್ತಾನೆ. ಇದನ್ನು ಕೇಳಿ ರುದ್ರಗಣಗಳು
ಸಿಟ್ಟಿನಿಂದ ಅವನ ಮೇಳೆ
ಮುಗಿಬೀಳಲು,
ಒಬ್ಬೊಬ್ಬರನ್ನು ಥಳಿಸಿ ತನ್ನ
ಪರಾಕ್ರಮವನ್ನು ತೋರುತ್ತಾನೆ. ಇದೆಲ್ಲವನ್ನು
ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ
ಹುಡುಗನ ಉದ್ಧಟತನದಿಂದ ಕ್ರೋಧಿತನಾಗಿ ತನ್ನ
ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ.
ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು
ಪುತ್ರನ ಮರಣದಿಂದ ಶೋಕಿತಳಾಗಿ
ರೋಧಿಸಲಾರಂಭಿಸಿದಳು. ಗೌರಿಯು ಕ್ಷಣಾರ್ಧದಲ್ಲಿ
ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ
ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ
ಗಾಬರಿಗೊಂಡ ಗಣಗಳು
ಶಿವನನ್ನು ಶರಣು ಬಂದು ಪ್ರಾರ್ಥಿಸುತ್ತಾರೆ.
ಪಾರ್ವತಿಯನ್ನು ಸಮಾಧಾನ ಪಡಿಸಲು ಶಿವನು
ಬಾಲಕನನ್ನು ಬದುಕಿಸುವದಾಗಿ ಹೇಳಿ, ತನ್ನ ಭಟರಿಗೆ
ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ
ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸಿದನು.
ಅಂತೆ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ
ಆನೆಯನ್ನು ಶಿರವನ್ನು
ಕತ್ತರಿಸಿಕೊಂಡು ತರುತ್ತಾರೆ.
ಶಂಕರನು ಆ ಬಾಲಕನ ಮುಂಡಕ್ಕೆ ಆನೆಯ
ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ
ಬದುಕಿಸಿದನು. ಉಮೆಯು ಬಂದು ಆ ಬಾಲಕನನ್ನು
ಮುದ್ದಿಸಿ ತನ್ನ ಮಗನಾದ ಗಜಮುಖನಿಗೆ ವರಗಳನ್ನು
ದಯಪಾಲಿಸುವಂತೆ ಮಹೇಶ್ವರನನ್ನು
ಕೇಳಿಕೊಂಡಳು.
ಇಂದಿನಿಂದ ನೀನು ನನ್ನ
ಕಿರಿಯ ಮಗನೆಂದೂ, ಸರ್ವಕಾರ್ಯಗಳಲ್ಲಿ
ನೀನೆ ಪ್ರಥಮಪೂಜಿತನಾಗೆಂದೂ, ಸಕಲ
ರುದ್ರಗಣಗಳ ಅಧಿಪತಿಯಾಗು ಎಂದು ಹರ
ಹರಸಿದನು. ಹೀಗೆ ಪಶುಪತಿಯ ಮಗ
ಗಣಪತಿಯು ಜಗತ್ಪ್ರಸಿದ್ಧನಾದನು.
ಲಿಂಗಪುರಾಣದಲ್ಲೂ ಗಣೇಶ ನ ಜನ್ಮರಹಸ್ಯ
ಒಮ್ಮೆ ದೇವಾನು ದೇವತೆಗಳಿಗೆ ದೈತ್ಯರು ಮಾಡುವ
ಉಪಟಳದಿಂದ ಬಹಳ
ತೊಂದರೆಯಾಗುತ್ತದೆ. ದೇವತೆಗಳ
ಪರ ಪ್ರತಿನಿಧಿಯಾಗಿ ದೇವಗುರು ಬ್ರಹಸ್ಪತಿಯು
ಪರಶಿವನಲ್ಲಿ ದೇವತೆಗಳಿಗೆ ಎದುರಾದ
ಸಮಸ್ಯೆಗಳನ್ನು
ತೊಡಿಕೊಳ್ಳುತ್ತಾನೆ. ಹೇ
ಪ್ರಭೋ ದೇವದೇವೋತ್ತಮೆನೇ ! ದೇವಶತ್ರುಗಳಾದ ಅಸುರರು
ದೈತ್ಯರು ನಿನ್ನ ಕಠಿಣ ಉಪಾಸನೆಮಾಡಿ, ನಿನ್ನನ್ನು
ಸಂತುಷ್ಟನನ್ನಾಗಿಸಿಕೊಂಡು
ತಮಗೆ ಬೇಕಾದ ವರಗಳನ್ನು
ಪಡೆದುಕೊಳ್ಳುತ್ತಾರೆ. ಇದರಿಂದ
ಮಹಾ ಬಲಿಷ್ಟರಾಗಿ ಅವರು ನಮಗೆ ಮತ್ತು ಇತರ
ಜೀವಸಮುದಾಯಕ್ಕೆ ಬಹಳ ಕಷ್ಟಗಳನ್ನು
ಕೊಡುತ್ತಾರೆ. ಅವರು ಮಾಡುವ ಸಾಧನೆಗಳು
ನಿನ್ನ ಸಂತೋಷಕ್ಕಾಗಿಯೇ ಆಗಿದ್ದರೂ ಉದ್ದೇಶ
ಮಾತ್ರ ದೇವತೆಗಳಿಗೆ ಕೆಡುಕು ಮಾಡುವುದೇ ಆಗಿರುತ್ತದೆ.
ಆದ್ದರಿಂದ ಹೇ ಶಂಭುವೇ ಅವರ ಎಲ್ಲ
ಕಾರ್ಯಗಳಲ್ಲಿ ನಿರಂತರ ವಿಘ್ನಗಳು
ಬರುವಂತಾಗಲಿ, ಇದರಿಂದ ಅವರು
ನಿನ್ನನ್ನು ಮತ್ತು ಬ್ರಹ್ಮದೇವನನ್ನು
ಒಲಿಸಿಕೊಳ್ಳದಿರುವಂತಾಗಲಿ,
ಎಂದು ಬೇಡಿಕೊಂಡರು.
ದೇವತೆಗಳ ಆರ್ತ ಪ್ರಾರ್ಥನೆಯನ್ನು ಕೇಳಿ ಪರಶಿವನು
ಅಸ್ತು ಎಂದು ಆಶ್ವಾಸನೆಯನ್ನು
ಕೊಟ್ಟನು. ಇದಾದ ನಂತರೆ
ಕೆಲವೇ ಸಮಯಾಂತರದಲ್ಲಿ ಶಿವ ಮತ್ತು
ಪಾರ್ವತಿಯರು ಕೂಡಿ ಒಂದು ಮಹಾಶಕ್ತಿಯನ್ನು
ಸೃಜಿಸಿದರು. ಅವನು ಹುಟ್ಟುವಾಗಲೇ ಆನೆಯ ಮುಖವನ್ನು
ಹೊಂದಿದ್ದನು.
ಮಹಾತೇಜಸ್ವಿಯಾದ ಆ ಬಾಲಕನ ಕೈಯಲ್ಲಿ ತ್ರಿಶೂಲ
ಮತ್ತು ಪಾಶಗಳು ಇದ್ದವು. ಗಜಮುಖನ ಪ್ರಾದುರ್ಭಾವ
ಮಾತ್ರದಿಂದಲೇ ಸಕಲ ದೇವತೆಗಳಿಗೆ
ಮಂಗಳವುಂಟಾಯಿತು. ಪರಶಿವನು ಇತ್ತ
ವರವು ಇದೇ ಸ್ವರೂಪವೆಂದು ಅರಿತ ದೇವತೆಗಳು
ವಿಘ್ನರಾಜನ ಸ್ತೋತ್ರವನ್ನು ಮಾಡಿದರು. ಸಕಲ
ದೇವತೆಗಳ ಸಂತೋಷಕ್ಕಾಗಿ ಗಣಪತಿ ಭವ್ಯವಾಗಿ
ನರ್ತನವನ್ನು ಮಾಡಿದನು. ಸಮಸ್ತ ಜಗತ್ತನ್ನೆಲ್ಲಾ
ಸಂಹಾರ ಮಾಡುವ ತಾಂಡವವನ್ನಾಡುವ
ಪರಶಿವನ ಪುತ್ರನೇ ಆದ ಗಣಪತಿ ವಿಘ್ನರೂಪಿಯಾದ
ನಾಶವನ್ನು ಮಾಡುವುದೇ ಆ ಭವ್ಯ ನರ್ತನ.
ಹೀಗೆ ತಂದೆಯಾದ ಶಿವನಿಂದ
ಆಶಿರ್ವದಿಸಲ್ಪಟ್ಟ ಗಣೇಶನು ವಿಶೇಷವಾಗಿ
ಬಲಿಷ್ಟರಾದ ವಿಘ್ನಗಣಗಳನ್ನು (ವಿನಾಯಕಗಣಗಳು)
ಸೃಷ್ಟಿಸಿದನು. ಈ ಗಣಗಳು ಯಾವಾಗಲೂ ಎಲ್ಲಾ
ಲೋಕಗಳಲ್ಲಿ ಸಂಚರಿಸುತ್ತಾ ಸತ್ಕಾರ್ಯಗಳಿಗೆ
ಅನುಕೂಲವನ್ನು ಮಾಡುತ್ತಾ ಕೆಟ್ಟವರಿಗೆ ವಿಘ್ನಗಳನ್ನು
ಮಾಡುತ್ತಾ ಇರುತ್ತಾರೆ. ಯಾರು ಗಣಪತಿಯ ಪೂಜೆ
ಸ್ಮರಣೆಯನ್ನು ನಿರಂತರ ಮಾಡುವರೋ ಅವರ
ಎಲ್ಲ ವಿಘ್ನಗಳನ್ನು ಆ ವಿಘ್ನೇಶ್ವರನ
ಆದೇಶದಂತೆ ನಿವಾರಿಸುತ್ತಾರೆ. ಧರ್ಮಶಾಸ್ತ್ರ,
ಕಲ್ಪಶಾಸ್ತ್ರ ಗ್ರಂಥಗಳಲ್ಲಿ ಈ
ವಿನಾಯಕರನ್ನು ಕುರಿತಾದ ಶಾಂತಿಕರ್ಮಗಳ
ವರ್ಣನೆ ಬರುತ್ತದೆ. ಎಲ್ಲ ಧಾರ್ಮಿಕ ಮತ್ತು ಲೌಕಿಕ
ಕಾರ್ಯಗಳ ಮೊದಲು ಈ ವಿನಾಯಕ
ಕಲ್ಪದ ಅನುಷ್ಠಾನ ವಿಧಿತವಾಗಿದೆ.
ಲಿಂಗ ಪುರಾಣದ ಪ್ರಕಾರ ಗಣಪತಿಯು
ಪ್ರಕಟವಾಗುವಾಗಲೇ ಗಜಮುಖವನ್ನು
ಹೊಂದಿರುತ್ತಾನೆ. ಇದು ಸಹ
ಕಲ್ಪಾಂತರದ ಕಥೆಯಾದ್ದರಿಂದ ಯಾವುದೇ
ವಿರೋಧವಿಲ್ಲ
- ವಿಶ್ವನಾಥ್. ಎಸ್
Comments
Post a Comment