ಕೃಷಿ ಬಳಕೆಗಾಗಿ ಖರೀದಿಸುವ ಎಲ್ಲಾ ರೀತಿಯ ಟ್ರ್ಯಾಕ್ಟರ್, ಟ್ರೈಲರ್ಗಳಿಗೆ ಜೀವಾವಧಿ ತೆರಿಗೆ
ಬೆಂಗಳೂರು, ಸೆ.19-ಬಾಡಿಗೆ ಆಧಾರಿತ ಸೇವಾ
ಕೇಂದ್ರಗಳ ಮೂಲಕ ಕೃಷಿ ಬಳಕೆಗಾಗಿ
ಖರೀದಿಸುವ ಎಲ್ಲಾ ರೀತಿಯ
ಟ್ರ್ಯಾಕ್ಟರ್, ಟ್ರೈಲರ್, ಪವರ್ ಟಿಲ್ಲರ್ ವಾಹನಗಳ
ನೋಂದಣಿಗೆ ರಾಜ್ಯ ಸರ್ಕಾರ ಜೀವಾವಧಿ
ತೆರಿಗೆಯನ್ನು ವಿಧಿಸಲು ಅನುಮತಿ ನೀಡಿದೆ.
ಕೃಷಿ ಯಂತ್ರಧಾರೆ ಯೋಜನೆಯಡಿ
ನೋಂದಾಯಿತವಾಗಿರುವ ಚಾರಿಟೆಬಲ್ ಟ್ರಸ್ಟ್,
ಸಂಘ ಸಂಸ್ಥೆಗಳು, ಸ್ವಸಹಾಯ
ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ರೈತರಿಗೆ
ಬಾಡಿಗೆ ನೀಡಲು ಖರೀದಿಸು
ವಂತಹ ಈ ವಾಹನಗಳಿಗೆ ಕರ್ನಾಟಕ ಮೋಟಾರು
ವಾಹನ ತೆರಿಗೆ ಕಾಯ್ದೆ 1957 ಕಲಂ 3(1))(ಸಿ)
ಶೆಡ್ಯೂಲ್ ಎ2 ರ ಅನ್ವ ಯ ಜೀವಿತಾವಧಿ
ತೆರಿಗೆ ವಿಧಿಸಲು ಸಾರಿಗೆ ಇಲಾಖೆಗೆ ಸರ್ಕಾರ ಅನುಮತಿ
ನೀಡಿದೆ. ಈ ಸೌಲಭ್ಯ ಪಡೆಯುವ
ಸಂಸ್ಥೆಗಳು ಸ್ಥಳೀಯ ಸಹಾಯಕ ಕೃಷಿ
ನಿರ್ದೇಶಕರಿಂದ ದೃಢೀಕರಣ ಪತ್ರ
ಪಡೆದು ಸಲ್ಲಿಸುವುದು
ಕಡ್ಡಾಯಗೊಳಿಸಲಾಗಿದೆ.
ಕೃಷಿ ಇಲಾಖೆ ಸಹಾಯಕ ನಿರ್ದೇಶಕರು
ಖರೀದಿಸುವ ವಾಹನಗಳನ್ನು ಕೇವಲ ಕೃಷಿ
ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು
ದೃಢೀಕರಣ ನೀಡಬೇಕಾಗುತ್ತದೆ.
ರಾಜ್ಯ ಸರ್ಕಾರ 2014-15ನೇ ಸಾಲಿನ
ಆಯವ್ಯಯದಲ್ಲಿ ರೈತರಿಗೆ ಸಕಾಲದಲ್ಲಿ ಮತ್ತು
ಕಡಿಮೆ ಬಾಡಿಗೆ ದರದಲ್ಲಿ ಕೃಷಿ
ಯಂತ್ರೋಪಕರಣವನ್ನು ಒದಗಿಸುವ
ಉದ್ದೇಶದಿಂದ ಕೃಷಿ ಯಂತ್ರಧಾರೆ
ಯೋಜನೆಯನ್ನು ಜಾರಿಗೊಳಿಸಿತ್ತು.
ರಾಜ್ಯದ ಗ್ರಾಮೀಣ ಪ್ರದೇಶದ 186
ಹೋಬಳಿಗಳ ವ್ಯಾಪ್ತಿಯಲ್ಲಿ ಚಾರಿಟಬಲ್ ಟ್ರಸ್ಟ್
ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ
ಯಂತ್ರೋಪಕರಣಗಳನ್ನು ಬಾಡಿಗೆಗೆ
ನೀಡುವ ಕೇಂದ್ರ ಸ್ಥಾಪಿಸಲು
ಉದ್ದೇಶಿಸಲಾಗಿತ್ತು. ಈ ಯೋಜನೆಯಡಿ ಧರ್ಮಸ್ಥಳ
ಸಂಸ್ಥೆಯು ರಾಜ್ಯಾದ್ಯಂತ ರೈತರನ್ನು
ಸಂಘಟಿಸಿ, ರೈತ ಸಹಾಯ ಸಂಘಗಳನ್ನು
ರಚಿಸಿ, ಅವುಗಳ ಮೂಲಕ ಯಂತ್ರೋಪ
ಕರಣಗಳನ್ನು ಬಾಡಿಗೆಗೆ ನೀಡಲು ಉದ್ದೇಶಿಸಿ
ಟ್ರ್ಯಾಕ್ಟರ್, ಟ್ರೈಲರ್ ಮತ್ತು ಪವರ್ ಟಿಲ್ಲರ್
ವಾಹನಗಳಿಗೆ ವಾಣಿಜ್ಯ ತೆರಿಗೆ ಬದಲಾಗಿ
ಜೀವಾವಧಿ ತೆರಿಗೆ ವಿಧಿಸುವಂತೆ ಮನವಿ
ಮಾಡಿತ್ತು. ಆ ಮನವಿ ಹಿನ್ನೆಲೆಯಲ್ಲಿ ಸಾರಿಗೆ
ಇಲಾಖೆಯು ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ
ಯನ್ನು ಸಲ್ಲಿಸಿತ್ತು. ಪ್ರಸ್ತಾವನೆ
ಪರಿಶೀಲಿಸಿದ ಸರ್ಕಾರ ಕಳೆದ ಮೂರು ದಿನಗಳ
ಹಿಂದೆ ಈ ಆದೇಶವನ್ನು
ಹೊರಡಿಸಿದೆ.
Comments
Post a Comment